ನಾಟಿಂಗ್ಹ್ಯಾಂಮ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯ ಸುತ್ತಿದ ಭಾರತದ ನಾಯಕ ಎಂಬ ಕೆಟ್ಟ ದಾಖಲೆಗೆ ಪಾತ್ರಾಗಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವನ್ನು 183ಕ್ಕೆ ನಿಯಂತ್ರಿಸುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾದರು. ಆದರೆ, ಇದನ್ನು ಬೆನ್ನತ್ತಿದ ಭಾರತ ತಂಡ ಉತ್ತಮ ಆರಂಭ ಪಡೆದರೂ ದಿಢೀರ್ ವಿಕೆಟ್ ಕಳೆದುಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ವೈಫಲ್ಯವನ್ನು ಈ ಪಂದ್ಯದಲ್ಲೂ ಮುಂದುವರಿಸಿದರು. ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
-
A sensational hour of cricket after lunch 💥
— England Cricket (@englandcricket) August 5, 2021 " class="align-text-top noRightClick twitterSection" data="
Scorecard/Clips: https://t.co/5eQO5BWXUp#ENGvIND pic.twitter.com/j7TvyxeSCE
">A sensational hour of cricket after lunch 💥
— England Cricket (@englandcricket) August 5, 2021
Scorecard/Clips: https://t.co/5eQO5BWXUp#ENGvIND pic.twitter.com/j7TvyxeSCEA sensational hour of cricket after lunch 💥
— England Cricket (@englandcricket) August 5, 2021
Scorecard/Clips: https://t.co/5eQO5BWXUp#ENGvIND pic.twitter.com/j7TvyxeSCE
ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಭಾರಿ ಡಕ್ಔಟ್ ಆದ ಭಾರತದ ನಾಯಕ ಎಂಬ ಬೇಡದ ದಾಖಲೆಗೆ ಪಾತ್ರರಾದರು. ಕೊಹ್ಲಿ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ನಾಯಕನಾಗಿ 9 ಬಾರಿ ಶೂನ್ಯ ಸುತ್ತಿದರೆ, ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ 8 ಬಾರಿ ಡಕ್ ಔಟ್ ಆಗಿದ್ದಾರೆ. ಒಟ್ಟಾರೆ ಈ ಮಾದರಿಯಲ್ಲಿ ಕೊಹ್ಲಿ 13 ಬಾರಿ ಶೂನ್ಯ ಸಂಪಾದಿಸಿದ್ದಾರೆ.
ಮೊದಲ ಎಸೆತದಲ್ಲೇ ಹೆಚ್ಚು ಬಾರಿ ಡಕ್ ಔಟ್ ಆದ ದಾಖಲೆ ಕೂಡ ಕೊಹ್ಲಿ ಪಾಲಾಗಿದೆ. ಕೊಹ್ಲಿ ತಾವೆದುರಿಸಿದ ಮೊದಲ ಎಸೆತದಲ್ಲಿ 3 ಬಾರಿ ಡಕ್ ಔಟ್ ಆಗಿದ್ದರೆ, ಗಂಗೂಲಿ, ಲಾಲಾ ಅಮರ್ನಾಥ್, ಕಪಿಲ್ ದೇವ್ ತಲಾ 2 ಬಾರಿ ಡಕ್ಔಟ್ ಆಗಿದ್ದಾರೆ.
ಇದನ್ನು ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್: ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಜೇಮ್ಸ್ ಆ್ಯಂಡರ್ಸನ್