ETV Bharat / sports

ಮದರ್ಸ್ ಡೇಗೆ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ ವಿರಾಟ್​..

author img

By

Published : May 14, 2023, 5:15 PM IST

ತಾಯಂದಿರ ದಿನದಂದು ಪುಟ್ಟ ಮಗಳು ವಾಮಿಕಾ ಜೊತೆ ಅನುಷ್ಕಾ ಶರ್ಮಾ ಅವರ ಚಿತ್ರವನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

ಮದರ್ಸ್ ಡೇಗೆ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ಹೇಳಿದ ವಿರಾಟ್​..
Virat Kohli shares unseen picture of Anushka Sharma with little daughter Vamika on Mother's Day

ಮುಂಬೈ (ಮಹಾರಾಷ್ಟ್ರ): ಇಂದು ವಿಶ್ವ ತಾಯಂದಿರ ದಿನ, ಮಮತೆಯ ಇನ್ನೊಂದು ರೂಪವಾಗಿರುವ ತಾಯಿಯನ್ನು ಸಂಭ್ರಮಿಸುವ ದಿನ. ಇದನ್ನು ಕ್ರಿಕೆಟಿಗೆ ವಿರಾಟ್​ ಕೊಹ್ಲಿ ವಿಶೇಷವಾಗಿ ಸೆಲಬ್ರೇಟ್​ ಮಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ನಲ್ಲಿ ವಿರಾಟ್ "ತಾಯಂದಿರ ದಿನದ ಶುಭಾಶಯಗಳು @anushkasharma" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರವು ಅನುಷ್ಕಾ ಮತ್ತು ವಾಮಿಕಾ ಅವರ ಬಾಲ್ಕನಿಯಿಂದ ಪ್ರಶಾಂತ ನೋಟವನ್ನು ಆನಂದಿಸುತ್ತಿರುವ ನೆರಳು ಬೆಳಕಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಎರಡನೇ ಮತ್ತು ಮೂರನೇ ಚಿತ್ರಗಳು ಅವರ ತಾಯಿ ಮತ್ತು ಅನುಷ್ಕಾ ಅವರು ಒಟ್ಟಿಗೆ ಇರುವ ಮದುವೆಯ ಕ್ಷಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ವಿರಾಟ್​ ತಾಯಂದಿರ ದಿನದ ಶುಭಾಶಯದ ಪೋಸ್ಟ್​ ಹಂಚಿಕೊಳ್ಳುತ್ತಿದ್ದಂತೆ ಒಂದೆಡೆ ಅಭಿಮಾನಿಗಳು ಮುಗಿ ಬಿದ್ದು, ಹಾರ್ಟ್​ ಮತ್ತು ಫೈರ್​ ಎಮೋಜಿಗಳನ್ನು ಕಮೆಂಟ್​ ಬಾಕ್ಸ್​ನಲ್ಲಿ ತುಂಬಿಸಿದರೆ, ಮಡದಿ ಅನುಷ್ಕಾ ಪ್ರೀತಿಯಿಂದ ಧನ್ಯವಾದ ಎಂದು ಬರೆದಿದ್ದಾರೆ. ಈ ನಡುವೆ ಅಭಿಮಾನಿ ಒಬ್ಬ ‘ಅಮ್ಮಂದಿರ ದಿನದ ಶುಭಾಶಯಗಳು ಅನುಷ್ಕಾ ನ್ಯಾಮ್’ ಎಂದು ಕಾಮೆಂಟ್ ಮಾಡಿದ್ದಾನೆ.

ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು ಮತ್ತು ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಈ ಜೋಡಿಗೆ ಜನವರಿ 11, 2021 ರಂದು ಹೆಣ್ಣು ಮಗುವಿನ ಜನನವಾಗಿತ್ತು. ವಿರಾಟ್​ ಅನುಷ್ಕಾ ಅವರು ವಾಮಿಕಾ ಎಂದು ನಾಮಕರಣ ಮಾಡಿದರು. ವಿರಾಟ್​ ಯಾವಾಗಲೂ ಅನುಷ್ಕಾರನ್ನು ತನ್ನ ಶಕ್ತಿ ಎಂದು ಕರೆಯುತ್ತಿರುತ್ತಾರೆ. ಅದರಂತೆ ಚಿತ್ರರಂಗದಲ್ಲಿ ಬಿಡುವು ಮಾಡಿಕೊಂಡು ಅನುಷ್ಕಾ ಶರ್ಮಾ ಕ್ರಿಕೆಟ್​ ಪಂದ್ಯಗಳಿಗೆ ಹಾಜರಾಗುತ್ತಾರೆ.

ಇದನ್ನೂ ಓದಿ: ಅಮ್ಮಾ ಎಂದರೆ ಅಮೃತದ ಕಡಲು! ಹೆತ್ತವ್ವನ ಮಮತೆ, ತ್ಯಾಗ ಸಾರುವ ದಿನ

ಈ ಜೋಡಿಯ ವೃತ್ತಿಜೀವನದ ಕಡೆ ನೋಡಿದರೆ, ವಿರಾಟ್ ಕೊಹ್ಲಿ ಪ್ರಸ್ತುತ ಇಂಡಿಯನ್​ ಪ್ರೀಮಿಯರ್​ ಲೀಗ್​ 2023 ರಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 11 ಪಂದ್ಯಗಳಲ್ಲಿ 42.00 ಸರಾಸರಿಯಲ್ಲಿ 420 ರನ್ ಗಳಿಸಿದ್ದಾರೆ. ಅವರು ಐಪಿಎಲ್ 2023 ರಲ್ಲಿ 6 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಾಜಸ್ಥಾನ ರಾಯಲ್ಸ್​ನ್ನು ಎದುರಿಸುತ್ತಿದೆ.

ಆರ್‌ಸಿಬಿ 16ನೇ ಐಪಿಎಲ್​ ಆವೃತ್ತಿಯಲ್ಲಿ ಐದು ಗೆಲುವು ಮತ್ತು ಆರು ಸೋಲಿನಿಂದ ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆರ್‌ಆರ್ ಆರು ಗೆಲುವು ಮತ್ತು ಆರು ಸೋಲುಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಅನುಷ್ಕಾ ಶರ್ಮಾ ಅವರು ಭಾರತದ ಮಹಿಳಾ ತಂಡದ ವೇಗದ ಬೌಲರ್​ ಜೂಲನ್ ಗೋಸ್ವಾಮಿ ಅವರ ಜೀವನ ಆಧಾರಿತ ಸಿನಿಮಾದಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ​ ಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಇಂದು ಅಮ್ಮಂದಿರ ದಿನ: ನಿಮ್ಮ ತಾಯಿಗೆ ಕನ್ನಡದ ಯಾವ ಹಾಡನ್ನು ಅರ್ಪಿಸುತ್ತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.