ಹೈದರಾಬಾದ್: ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿಗೆ ಟ್ವೀಟ್ ಮೂಲಕ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಧೈರ್ಯ ತುಂಬಿದ್ದರು. ಇದಕ್ಕೆ ರನ್ ಮಷಿನ್ ರಪ್ಲೈ ಮಾಡಿ, ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಹೀಗೇ ಮಿಂಚಿ ಹಾಗೂ ಬೆಳೆಯಿರಿ ಎಂದು ಶುಭ ಹಾರೈಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ ಹರಿದು ಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸಿಮೀತ ಓವರ್ಗಳ ಸರಣಿಯಲ್ಲೂ ಇದು ಮುಂದುವರೆದಿದೆ. ಹೀಗಾಗಿ, ಅನೇಕರು ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿ, ತಂಡದಿಂದ ಕೈಬಿಡುವಂತೆ ಸಲಹೆ ನೀಡಿದ್ದರು. ಈ ವೇಳೇ ಟ್ವೀಟ್ ಮಾಡಿದ್ದ ಬಾಬರ್ ಆಜಂ,‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಈ ಟ್ವೀಟ್ಗೆ ಇದೀಗ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
-
Thank you. Keep shining and rising. Wish you all the best 👏
— Virat Kohli (@imVkohli) July 16, 2022 " class="align-text-top noRightClick twitterSection" data="
">Thank you. Keep shining and rising. Wish you all the best 👏
— Virat Kohli (@imVkohli) July 16, 2022Thank you. Keep shining and rising. Wish you all the best 👏
— Virat Kohli (@imVkohli) July 16, 2022
ಇದನ್ನೂ ಓದಿರಿ: ‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’: ಕೊಹ್ಲಿಗೆ ಧೈರ್ಯ ತುಂಬಿದ ಪಾಕ್ ಕ್ರಿಕೆಟಿಗ
'ಧನ್ಯವಾದಗಳು. ಹೀಗೆ ಮಿಂಚುತ್ತಿರಿ ಹಾಗೂ ಬೆಳೆಯುತ್ತಿರಿ. ನಿಮಗೆ ಶುಭ ಕೋರುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 2019ರಿಂದಲೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿಲ್ಲ. ಓವೆಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್, ಎರಡನೇ ಪಂದ್ಯದಲ್ಲಿ ಕೇವಲ 16 ರನ್ ಗಳಿಕೆ ಮಾಡಿದ್ದರು. ಇನ್ನೂ ಐದನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೇವಲ 11 ಹಾಗೂ 20ರನ್ ಗಳಿಕೆ ಮಾಡಿದ್ದರು. ಮ್ಯಾಂಚೆಸ್ಟರ್ನಲ್ಲಿ ನಾಳೆ ಫೈನಲ್ ಏಕದಿನ ಪಂದ್ಯ ನಡೆಯಲಿದ್ದು, ಇದು ವಿರಾಟ್ ಪಾಲಿಗೆ ನಿರ್ಣಾಯಕ ಪಂದ್ಯವಾಗಲಿದೆ.