ETV Bharat / sports

ಕೊಹ್ಲಿ ವಿವಾದವನ್ನುಂಟು ಮಾಡುವುದಕ್ಕಿಂತ ಬ್ಯಾಟಿಂಗ್ ಕಡೆ ಗಮನ ನೀಡಲಿ: ಪಾಕಿಸ್ತಾನ ಬೌಲರ್ - ವಿರಾಟ್​​ ಕೊಹ್ಲಿ ಶತಕ

ವಿರಾಟ್ ಕೊಹ್ಲಿ ಶತಕ ಸಿಡಿಸಿ ಎರಡು ವರ್ಷಗಳೇ ಕಳೆದಿವೆ. ಹಾಗಾಗಿ ಅವರು ತಮ್ಮ ಆಟದ ಕಡೆಗೆ ಗಮನ ನೀಡಬೇಕು. ಲೆಜೆಂಡ್​ಗಳಾದ ಸೌರವ್ ಗಂಗೂಲಿ ಅಥವಾ ಬೇರೆಯವರ ವಿರುದ್ಧ ಮಾತನಾಡುವುದು ಅವರಿಗೆ ನೆರವಾಗುವುದಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.

Virat Kohli  controversies
ವಿರಾಟ್ ಕೊಹ್ಲಿ ವಿವಾದ
author img

By

Published : Dec 23, 2021, 8:35 PM IST

ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅನಗತ್ಯ ವಿವಾದಗಳನ್ನು ಹುಟ್ಟುಹಾಕುವ ಬದಲು ತಮ್ಮ ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಬೇಕೆಂದು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ದಾನೀಸ್ ಕನೇರಿಯಾ ಕಿವಿಮಾತು ಹೇಳಿದ್ದಾರೆ

ವಿರಾಟ್ ಕೊಹ್ಲಿ ಶತಕ ಸಿಡಿಸಿ ಎರಡು ವರ್ಷಗಳೇ ಕಳೆದಿವೆ. ಹಾಗಾಗಿ ಅವರು ತಮ್ಮ ಆಟದ ಕಡೆಗೆ ಗಮನ ನೀಡಬೇಕು. ಲೆಜೆಂಡ್​ಗಳಾದ ಸೌರವ್ ಗಂಗೂಲಿ ಅಥವಾ ಬೇರೆಯವರ ವಿರುದ್ಧ ಮಾತನಾಡುವುದು ಅವರಿಗೆ ನೆರವಾಗುವುದಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.

ವಿರಾಟ್​ ಮೊದಲು ಅನಿಲ್ ಕುಂಬ್ಳೆ ಜೊತೆಗೆ ಸಮಸ್ಯೆ ಹೊಂದಿದ್ದರು. ಇದೀಗ ಸೌರವ್ ಗಂಗೂಲಿ ಜೊತೆಗೆ ಸಮಸ್ಯೆ ಹೊಂದಿದ್ದಾರೆ. ಕುಂಬ್ಳೆ ಮತ್ತು ಗಂಗೂಲಿ ಈಗಾಗಲೆ ಕ್ರಿಕೆಟ್​ನ ನಿಜವಾದ ಬ್ರ್ಯಾಂಡ್​ ಅಂಬಾಸಿಡರ್ ಎಂದು ಸಾಬೀತು ಮಾಡಿದ್ದಾರೆ. ಭಾರತ ಕ್ರಿಕೆಟ್ ​​ಅನ್ನು ಸೌರವ್ ಗಂಗೂಲಿ ಬದಲಾಯಿಸಿದರು ಮತ್ತು ಅದನ್ನು ಮಹೇಂದ್ರ ಸಿಂಗ್ ಧೋನಿ ಮುಂದುವರಿಸಿಕೊಂಡು ಹೋದರು. ಅಂತಹವರ ವಿರುದ್ಧ ಕೊಹ್ಲಿ ಮಾತನಾಡಿದ್ದಾರೆ. ಈ ಸಮಯದಲ್ಲಿ ವಿರಾಟ್​​ ಕೊಹ್ಲಿಯ 90 ನಿಮಿಷಗಳ ಆ ಗೊಂದಲವನ್ನುಂಟು ಮಾಡಿದ ಹೇಳಿಕೆ ಅಗತ್ಯವಿರಲಿಲ್ಲ ಎಂದಿದ್ದಾರೆ.

ಅವರು ಟೆಸ್ಟ್​ ಮತ್ತು ಟಿ-20ಯಲ್ಲಿ ರನ್​ಗಳಿಸಲು ಪರದಾಡುತ್ತಿದ್ದಾರೆ. ನಾಯಕನಾಗಿ ಅವರು ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಎಲ್ಲವೂ ಅವರ ವಿರುದ್ಧವೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಅವರಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಐಎಎನ್​ಎಸ್​ ನಡೆಸಿದ ಸಂದರ್ಶನದಲ್ಲಿ ಪಾಕಿಸ್ತಾನ ಪರ ಹೆಚ್ಚು ವಿಕೆಟ್ ಪಡೆದಿರುವ ಸ್ಪಿನ್ನರ್ ಹೇಳಿದ್ದಾರೆ.

ಇದನ್ನೂ ಓದಿ:ಕನ್ನಡಿಗ ಮನೀಶ್ ಪಾಂಡೆ ಮೇಲೆ RCB ಕಣ್ಣು.. ಕೊಹ್ಲಿ ಬದಲಿಗೆ ನಾಯಕನಾಗುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.