ಅಹಮದಾಬಾದ್ : ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ 100 ಏಕದಿನ ಪಂದ್ಯಗಳನ್ನಾಡಿ ಭಾರತದ ಐದನೇ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾದರು.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮಾಜಿ ನಾಯಕ ವಿರಾಟ್ ಕೊಹ್ಲಿ, ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ಸಾಲಿಗೆ ಸೇರಿಕೊಂಡರು.
ವಿರಾಟ್ ಕೊಹ್ಲಿ ಒಟ್ಟು 259 ಏಕದಿನ ಪಂದ್ಯಗಳನ್ನು ಆಡಿದ್ದು, 12,311 ರನ್ ಹೆಚ್ಚು ರನ್ ಗಳಿಸಿದ್ದಾರೆ. ತವರಿನಲ್ಲಿ ಇಂದಿನ ಪಂದ್ಯ ಸೇರಿದಂತೆ 100 ಪಂದ್ಯಗಳನ್ನಾಡಿದ್ದು, 5020 ರನ್ಗಳಿಸಿದ್ದಾರೆ. 19 ಶತಕ ಮತ್ತು 25 ಶತಕ ಅವರ ಖಾತೆಯಲ್ಲಿವೆ.
ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಅವರು, ಕೇವಲ 18 ರನ್ಗಳಿಸಿ ಒಡೆನ್ ಸ್ಮಿತ್ ಓವರ್ನಲ್ಲಿ ವಿಕೆಟ್ ಕೀಪರ್ ಶಾಯ್ ಹೋಪ್ಗೆ ಕ್ಯಾಚ್ ನೀಡಿ ಔಟಾದರು.
ಭಾರತದಲ್ಲಿ 100ಕ್ಕೂ ಹೆಚ್ಚು ಏಕದಿನ ಪಂದ್ಯವನ್ನಾಡಿದ ಭಾರತೀಯರು
- ಸಚಿನ್ ತೆಂಡೂಲ್ಕರ್ 164 ಪಂದ್ಯ -6976 ರನ್
- ಎಂ.ಎಸ್ ಧೋನಿ 127 ಪಂದ್ಯ- 4351 ರನ್,
- ಮೊಹಮ್ಮದ್ ಅಜರುದ್ದೀನ್ -113 ಪಂದ್ಯ- 3163 ರನ್
- ಯುವರಾಜ್ ಸಿಂಗ್ 108 ಪಂದ್ಯ: 3415 ರನ್
- ವಿರಾಟ್ ಕೊಹ್ಲಿ 100 ಪಂದ್ಯ: 5020 ರನ್
ಇದನ್ನೂ ಓದಿ:ICC ODI batting rankings: 2 ಮತ್ತು 3ರಲ್ಲಿ ಮುಂದುವರಿದ ಕೊಹ್ಲಿ-ರೋಹಿತ್ ಜೋಡಿ