ETV Bharat / sports

ಓವೆಲ್​ ಪಿಚ್​ ಅಂದಾಜಿಸಲು ಸಾಧ್ಯವಿಲ್ಲ, ಸವಾಲಿಗೆ ನಾವು ಸಿದ್ಧ: ವಿರಾಟ್ ಕೊಹ್ಲಿ​​

ನಾಳೆ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಆರಂಭವಾಗಲಿದೆ. ಓವೆಲ್ ಪಿಚ್​ ಸವಾಲಿನ ಕುರಿತು ಸ್ಟಾರ್ ​ಸ್ಪೋರ್ಟ್ಸ್​ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್‌ ಕೊಹ್ಲಿ ಮಾತನಾಡಿದರು.

NVirat Kohli Interview Video before
WTC Final 2023: ವಿರಾಟ್​​
author img

By

Published : Jun 6, 2023, 5:17 PM IST

ನವದೆಹಲಿ: ಭಾರತ- ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಅಂತಿಮ ಪಂದ್ಯ ಲಂಡನ್‌ನ ಓವಲ್ ಮೈದಾನದಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಸಂದರ್ಶನದ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಟ್ರೋಫಿ ಗೆಲ್ಲಲು ಇರುವ ಕಠಿಣ ಸವಾಲುಗಳ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.

ಕಾಂಗರೂಗಳನ್ನು ಎದುರಿಸಲು ಭಾರತ ತಂಡ ಸಂಪೂರ್ಣ ಸನ್ನದ್ಧವಾಗಿದೆ. ಆದರೆ ಆಸ್ಟ್ರೇಲಿಯಾ ತಂಡ ತುಂಬಾ ಸ್ಪರ್ಧಾತ್ಮಕವಾಗಿದೆ. ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು ಅವರು ಪೂರ್ಣ ಬಲದಿಂದ ಸೇಡು ತೀರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲಾರರು. ಈ ನಿಟ್ಟಿನಲ್ಲಿ ಓವಲ್ ಮೈದಾನ ಎರಡೂ ತಂಡಗಳಿಗೂ ತಟಸ್ಥವಾಗಿದೆ ಎನ್ನಬಹುದು. ಹೀಗಾಗಿ ಉಭಯ ತಂಡಗಳು ಹೆಚ್ಚು ಗಮನಹರಿಸಿ ಆಡಬೇಕಿದೆ ಎಂದು ಕೊಹ್ಲಿ ಹೇಳಿದರು.

ಓವಲ್ ಪಿಚ್‌ಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಮಾತನಾಡುತ್ತಾ, ಇಲ್ಲಿ ಸ್ವಿಂಗ್ ಮತ್ತು ಸೀಮ್ ಎರಡೂ ಪರಿಸ್ಥಿತಿಗಳು ಮುಖ್ಯ. ಯಾವ ಶಾಟ್ ಆಡಬೇಕೆಂದು ನೀವೇ ನಿರ್ಧರಿಸಬೇಕು. ಆದರೆ ಒಬ್ಬ ಬ್ಯಾಟರ್ ಆಗಿ ಈ ಆಯ್ಕೆ ಮಾಡುವುದು ಸ್ವಲ್ಪ ಕಷ್ಟವೇ ಆಗುತ್ತದೆ. ನಮ್ಮ ಅತ್ಯುತ್ತಮ ತಂತ್ರಗಳನ್ನು ಬೌಲರ್‌ಗಳ ವಿರುದ್ಧ ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ ಎಂದರು.

ತಂತ್ರದೊಂದಿಗೆ ಸಮತೋಲನ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ. ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಪಿಚ್ ಮತ್ತು ಪರಿಸ್ಥಿತಿ ಯಾವ ತಂಡಕ್ಕೆ ಅನುಕೂಲಕರವಾಗಿರುತ್ತದೋ ಅದೇ ತಂಡದ ಪ್ರಾಬಲ್ಯ ಪಂದ್ಯದುದ್ದಕ್ಕೂ ಮುಂದುವರಿಯಲಿದೆ ಎಂದಿದ್ದಾರೆ. ಸ್ಟಾರ್​ಸ್ಪೋರ್ಟ್ಸ್​ಗೆ ವಿರಾಟ್​ ನೀಡಿರುವ ಈ ಸಂದರ್ಶನ ಯೂಟ್ಯೂಬ್​ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದೆ.

ಆಸ್ಟ್ರೇಲಿಯಾ ವೇಗಿಗಳ ವಿರುದ್ಧ ಕೊಹ್ಲಿ ಮತ್ತು ಇತರ ಭಾರತೀಯ ಬ್ಯಾಟರ್‌ಗಳು ಕಠಿಣ ಸವಾಲು ಎದುರಿಸಲಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಮೈಕೆಲ್ ನೆಸರ್ ದಾಳಿಯನ್ನು ವೇಗದ ವಿಭಾಗದಲ್ಲಿದ್ದು, ನಾಥನ್​ ಲಿಯಾನ್​ ಸ್ಪಿನ್​ನಲ್ಲಿ ತಮ್ಮ ಕೈಚಳಕ ತೋರಲಿದ್ದಾರೆ.

  • " class="align-text-top noRightClick twitterSection" data="">

ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಸರಣಿಯಲ್ಲಿ 49.5 ರ ಸರಾಸರಿಯಲ್ಲಿ 297 ರನ್ ಗಳಿಸಿದ್ದರು. ಸೀರೀಸ್​ನಲ್ಲಿ ವಿರಾಟ್ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ ಆಗಿದ್ದರು. ಭಾರತ ಬಾರ್ಡರ್-​ ಗವಾಸ್ಕರ್​ ಟ್ರೋಫಿಯನ್ನು 2-1 ರಿಂದ ಗೆದ್ದುಕೊಂಡಿತ್ತು.

ಆಸೀಸ್​ ವಿರುದ್ಧ ವಿರಾಟ್​ ಕೊಹ್ಲಿ ಉತ್ತಮ ರೆಕಾರ್ಡ್​ ಹೊಂದಿದ್ದಾರೆ. 24 ಟೆಸ್ಟ್‌ಗಳಲ್ಲಿ 48.26 ಸರಾಸರಿಯಲ್ಲಿ ಎಂಟು ಶತಕ ಮತ್ತು ಐದು ಅರ್ಧಶತಕ ಸಹಿತ 1,979 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 186 ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಎಲ್ಲ ಸ್ವರೂಪಗಳಲ್ಲಿ ವಿರಾಟ್ 92 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 50.97 ಸರಾಸರಿಯಲ್ಲಿ 4,945 ರನ್ ಗಳಿಸಿದ್ದಾರೆ. ಆಸೀಸ್ ವಿರುದ್ಧ 16 ಶತಕ ಮತ್ತು 24 ಅರ್ಧಶತಕಗಳನ್ನು ಕೊಹ್ಲಿ ಗಳಿಸಿದ್ದಾರೆ.

ಇದನ್ನೂ ಓದಿ: ಓವೆಲ್​ನಲ್ಲಿ ಆರಂಭಿಕರಾಗಿ ಆಸ್ಟ್ರೇಲಿಯನ್​ ಬೌಲರ್​ಗಳನ್ನು ಎದುರಿಸುವುದೇ ಸವಾಲು: ರೋಹಿತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.