ಅಹಮದಾಬಾದ್ (ಗುಜರಾತ್): ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪ್ರಾದೇಶಿಕ ಮತ್ತು ರಾಜಕೀಯ ಬಿಕ್ಕಟ್ಟು ಕ್ರೀಡೆಗಳ ಮೇಲೂ ಪರಿಣಾಮ ಬೀರುತ್ತವೆ. ಇದರಿಂದಾಗಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಮುಖಾಮುಖಿ ಎಂದೇ ಕರೆಯಲಾಗುತ್ತದೆ. ಪಂದ್ಯವನ್ನು ಉಭಯ ದೇಶಗಳ ಜನರು ಯುದ್ಧದ ರೀತಿಯಲ್ಲಿ ನೋಡಿದರೂ ಆಟಗಾರರ ನಡುವೆ ಕ್ರೀಡಾ ಸ್ಫೂರ್ತಿ ಕಂಡುಬರುತ್ತದೆ. ಮೈದಾನದಲ್ಲಿ ಪಂದ್ಯದ ವೇಳೆ ಬದ್ಧ ವೈರಿಗಳಂತೆ ಸೆಣಸಿದರೂ ನಂತರ ಭುಜಕ್ಕೆ ಭುಜ ತಗುಲಿಸಿ ಸೋಲು-ಗೆಲುವು ಆಟದ ಭಾಗ ಎಂಬಂತೆ ನಡೆದುಕೊಳ್ಳುತ್ತಾರೆ.
-
FANBOY MOMENT FOR BABAR AZAM....!!
— Mufaddal Vohra (@mufaddal_vohra) October 14, 2023 " class="align-text-top noRightClick twitterSection" data="
Babar asks for a signed from Virat Kohli and Virat gives it.pic.twitter.com/Caq3GoQoaV
">FANBOY MOMENT FOR BABAR AZAM....!!
— Mufaddal Vohra (@mufaddal_vohra) October 14, 2023
Babar asks for a signed from Virat Kohli and Virat gives it.pic.twitter.com/Caq3GoQoaVFANBOY MOMENT FOR BABAR AZAM....!!
— Mufaddal Vohra (@mufaddal_vohra) October 14, 2023
Babar asks for a signed from Virat Kohli and Virat gives it.pic.twitter.com/Caq3GoQoaV
ನಿನ್ನೆ (ಶನಿವಾರ) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯ ರೋಚಕವಾಗಿತ್ತು. ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ 8ನೇ ವಿಜಯ ದಾಖಲಿಸಿತು.
ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು 191 ರನ್ಗಳಿಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 31 ಓವರ್‌ಗಳಲ್ಲಿ ಗುರಿ ಭೇದಿಸಿ ಜಯಭೇರಿ ಬಾರಿಸಿತು. ಈ ಸೋಲಿನಿಂದ ಎರಡು ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನದ ಅಜೇಯ ಓಟಕ್ಕೆ ಬ್ರೇಕ್ ಬಿತ್ತು. ಭಾರತ ಹ್ಯಾಟ್ರಿಕ್ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸಿತು.
ಪಂದ್ಯದ ನಂತರ ವಿರಾಟ್ ಕೊಹ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂಗೆ ತಮ್ಮ ಸಹಿ ಇರುವ ಎರಡು ಜರ್ಸಿ ನೀಡಿ ಕ್ರೀಡಾಸ್ಫೂರ್ತಿ ಮೆರೆದರು. ವಿರಾಟ್ ಮತ್ತು ಬಾಬರ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಯಿತಾದರೂ ಪಾಕ್ನ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಟೀಕಿಸಿದ್ದಾರೆ. ಸಾರ್ವಜನಿಕವಾಗಿ ಈ ರೀತಿ ನಡೆದುಕೊಂಡದ್ದು ಸರಿಯಲ್ಲ ಎಂದಿದ್ದಾರೆ.
-
Wasim Akram says "Babar Azam shouldn't have asked Virat Kohli his Tshirt"pic.twitter.com/KREc7H41Pm#INDvsPAK #indvspak2023 #Rizwan #RohitSharma𓃵 #IndiaVsPakistan #CWC23 #ICCCricketWorldCup23 pic.twitter.com/NEhiFEzEMp
— ICT Fan (@Delphy06) October 14, 2023 " class="align-text-top noRightClick twitterSection" data="
">Wasim Akram says "Babar Azam shouldn't have asked Virat Kohli his Tshirt"pic.twitter.com/KREc7H41Pm#INDvsPAK #indvspak2023 #Rizwan #RohitSharma𓃵 #IndiaVsPakistan #CWC23 #ICCCricketWorldCup23 pic.twitter.com/NEhiFEzEMp
— ICT Fan (@Delphy06) October 14, 2023Wasim Akram says "Babar Azam shouldn't have asked Virat Kohli his Tshirt"pic.twitter.com/KREc7H41Pm#INDvsPAK #indvspak2023 #Rizwan #RohitSharma𓃵 #IndiaVsPakistan #CWC23 #ICCCricketWorldCup23 pic.twitter.com/NEhiFEzEMp
— ICT Fan (@Delphy06) October 14, 2023
ಪಾಕಿಸ್ತಾನದ ಟಿವಿ ಕಾರ್ಯಕ್ರಮದಲ್ಲಿ ನಿರೂಪಕ, ಬಾಬರ್ ವಿರಾಟ್ ಕೊಹ್ಲಿಯಿಂದ ಜರ್ಸಿ ಸ್ವೀಕರಿಸಿದ ಬಗ್ಗೆ ವಾಸಿಂ ಅಕ್ರಮ್ ಅವರನ್ನು ಕೇಳಿದಾಗ, "ಪ್ರತಿಯೊಬ್ಬರೂ ಈ ಕ್ಲಿಪ್ ಅನ್ನು ಮತ್ತೆ ಮತ್ತೆ ತೋರಿಸುತ್ತಿದ್ದಾರೆ. ಆದರೆ ನಿರಾಶಾದಾಯಕ ಪ್ರದರ್ಶನದ ನಂತರ ನಿಮ್ಮ ಅಭಿಮಾನಿಗಳನ್ನು ತುಂಬಾ ನೋಯಿಸಿದ ನಂತರ, ಇದು ಖಾಸಗಿ ವಿಷಯವಾಗಿರಬೇಕು. ಇದನ್ನು ತೆರೆದ ಮೈದಾನದಲ್ಲಿ ಮಾಡಬಾರದು. ಇಂದು ಇದನ್ನು ಮಾಡುವ ದಿನವೂ ಅಲ್ಲ. ನಿಮ್ಮ ಸಂಬಂಧಿಗಳಲ್ಲಿ ಯಾರಾದರೂ ವಿರಾಟ್ ಜರ್ಸಿ ಕೇಳಿದ್ದರೆ, ಎಲ್ಲಾ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಅದನ್ನು ಸ್ವೀಕರಿಸಬೇಕಿತ್ತು" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮಾಡಿದ ದಾಖಲೆಗಳಿವು..!