ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೂ ಸುದ್ದಿ, ಬೀಸದಿದ್ದರೂ ಸುದ್ದಿಯಲ್ಲಿರುತ್ತಾರೆ. ಏಷ್ಯಾ ಕಪ್ನಲ್ಲಿ ಭರ್ಜರಿ ಶತಕದ ಮೂಲಕ ಫಾರ್ಮ್ಗೆ ಮರಳಿರುವ ವಿರಾಟ್ ವಿಶ್ವಕಪ್ ಸಿದ್ಧತೆಯಲ್ಲಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಾಡಿದ್ದಿನಿಂದ ಶುರುವಾಗುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ಸರಣಿಯ ಮೊದಲ ಟಿ20 ಪಂದ್ಯ ಪಂಜಾಬ್ನ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊಹಾಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿರಾಟ್ ಕೊಹ್ಲಿ ತಮ್ಮದೇ ಫ್ಯಾಷನ್ನಿಂದಾಗಿ ಗಮನ ಸೆಳೆದಿದ್ದಾರೆ. ರನ್ ಮಷಿನ್ ಹೊಸ ಹೇರ್ಸ್ಟೈಲ್ನಲ್ಲಿ ಮಿಂಚಿದ್ದಾರೆ. ವಿಶ್ವಕಪ್ಗೂ ಮೊದಲು ವಿರಾಟ್ರ ಹೊಸ ಹೇರ್ಸ್ಟ್ರೈಲ್ ಅಭಿಮಾನಿಗಳ ಗಮನ ಸೆಳೆದಿದೆ.
ವಿರಾಟ್ ಕೊಹ್ಲಿ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಡಿಯೋವನ್ನು ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ತನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಹೊಸ ಕೂದಲ ವಿನ್ಯಾಸದಲ್ಲಿ ವಿರಾಟ್ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.
-
Look who’s here 😍
— Punjab Cricket Association (@pcacricket) September 17, 2022 " class="align-text-top noRightClick twitterSection" data="
Welcome @imVkohli to the city beautiful @gulzarchahal @BCCI @CricketAus #gulzarchahal #1stT20I #pca #pcanews #punjabcricket #punjab #cricket #teamindia #indiancricketteam #punjabcricketnews #cricketnews #gulzarinderchahal #fans #cricketfans #viratkohli pic.twitter.com/y5x5J2XiMg
">Look who’s here 😍
— Punjab Cricket Association (@pcacricket) September 17, 2022
Welcome @imVkohli to the city beautiful @gulzarchahal @BCCI @CricketAus #gulzarchahal #1stT20I #pca #pcanews #punjabcricket #punjab #cricket #teamindia #indiancricketteam #punjabcricketnews #cricketnews #gulzarinderchahal #fans #cricketfans #viratkohli pic.twitter.com/y5x5J2XiMgLook who’s here 😍
— Punjab Cricket Association (@pcacricket) September 17, 2022
Welcome @imVkohli to the city beautiful @gulzarchahal @BCCI @CricketAus #gulzarchahal #1stT20I #pca #pcanews #punjabcricket #punjab #cricket #teamindia #indiancricketteam #punjabcricketnews #cricketnews #gulzarinderchahal #fans #cricketfans #viratkohli pic.twitter.com/y5x5J2XiMg
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆದ ರಶೀದ್ ಸಲ್ಮಾನಿ ಕೊಹ್ಲಿಯ ಕೂದಲಿಗೆ ಹೊಸ ಲುಕ್ ತಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಶೀದ್ ತಮ್ಮ ಇನ್ಸ್ಟಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿಯಾಗಿ ಕಮೆಂಟ್ ಮಾಡಿದ್ದು, ಮೆಚ್ಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ 3 ವರ್ಷಗಳ ಬಳಿಕ ಅಂದರೆ 1020 ದಿನಗಳ ನಂತರ ಶತಕ ಬಾರಿಸಿ ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ತಾವು ರೆಡಿ ಎಂಬ ಸಂದೇಶ ರವಾನೆ ಮಾಡಿದ್ದಾರೆ.
71 ನೇ ಶತಕವನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್ ಅವರ 71 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು. ವಿಶ್ವಕಪ್ನಲ್ಲಿ ಇನ್ನೊಂದು ಶತಕ ಬಾರಿಸಿದರೂ ವಿಶ್ವ ಕ್ರಿಕೆಟ್ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನ ಸಂಪಾದಿಸಲಿದ್ದಾರೆ. ವಿರಾಟ್ಗೂ ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಶಿಖರವಿದೆ.
ಓದಿ: 'ಇಂಥ ನಾನ್ಸೆನ್ಸ್ ಶುರು ಮಾಡ್ಬೇಡಿ..' ಕೊಹ್ಲಿ ಬ್ಯಾಟಿಂಗ್ ಆರ್ಡರ್ ಬದಲಿಸುವ ವಿಚಾರಕ್ಕೆ ಗಂಭೀರ್ ಗರಂ