ಅಬುಧಾಬಿ(ಯುಎಇ): ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಾಳೆ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಇದು ವಿರಾಟ್ಗೆ 100 ನೇ ಪಂದ್ಯವಾಗಿದ್ದು, ಭಾರತದ ಪರ ಎಲ್ಲ ಮಾದರಿಯ ಆಟಗಳಲ್ಲಿ ನೂರು ಮ್ಯಾಚ್ ಆಡಿದ ಮೊದಲ ಆಟಗಾರ ಎಂಬ ಇತಿಹಾಸ ಬರೆಯಲಿದ್ದಾರೆ.
2008 ರಲ್ಲಿ ಮೊದಲ ಟಿ-20 ಪಂದ್ಯವಾಡಿದ ವಿರಾಟ್ ಕೊಹ್ಲಿ ಈವರೆಗೂ 99 ಮ್ಯಾಚ್ಗಳನ್ನು ಪೂರೈಸಿದ್ದಾರೆ. 50.12 ರ ಸರಾಸರಿಯಲ್ಲಿ 3,308 ರನ್ ಕಲೆ ಹಾಕಿದ್ದಾರೆ. 94 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 30 ಅರ್ಧ ಶತಕಗಳನ್ನು ಗಳಿಸಿರುವ ವಿರಾಟ್ ಶತಕ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ.
ಇನ್ನು 2017- 2021 ರ ನಡುವೆ ತಂಡದ ನಾಯಕನಾಗಿ 50 ಪಂದ್ಯಗಳನ್ನು ಮುನ್ನಡೆಸಿದ್ದು, ಅದರಲ್ಲಿ 30 ಮ್ಯಾಚ್ಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 16 ರಲ್ಲಿ ಸೋತರೆ, 2 ಪಂದ್ಯಗಳು ಟೈ, 2 ಫಲಿತಾಂಶ ಕಂಡಿಲ್ಲ. ನಾಯಕನಾಗಿ ಅವರು 64.58 ರ ಗೆಲುವಿನ ಸರಾಸರಿ ಹೊಂದಿದ್ದಾರೆ.
2019 ರ ನವೆಂಬರ್ನಲ್ಲಿ ವಿರಾಟ್ ಕೊನೆಯ ಶತಕ ಬಾರಿಸಿದ್ದರು. ಅಲ್ಲಿಂದ 1 ಸಾವಿರ ದಿನ ಪೂರೈಸಿದ್ದು, ಈವರೆಗೂ ಮತ್ತೆ ಅವರಿಂದ ದೊಡ್ಡ ಇನಿಂಗ್ಸ್ ಕಂಡುಬಂದಿಲ್ಲ. ಒಟ್ಟು 27 ಚುಟುಕು ಪಂದ್ಯವಾಡಿರುವ ಅವರು 42.90 ಸರಾಸರಿಯಲ್ಲಿ 858 ರನ್ ಗಳಿಸಿದ್ದಾರೆ. ಇದರಲ್ಲಿ 94 ರನ್ ಅತ್ಯುತ್ತಮ ಸ್ಕೋರ್. ಒಂದು ಶತಕ ಬಾರಿಸದಿದ್ದರೂ 8 ಅರ್ಧ ಶತಕಗಳನ್ನು ಚಚ್ಚಿದ್ದಾರೆ.
ಶತಕವಿಲ್ಲದ 1 ಸಾವಿರಕ್ಕೂ ಅಧಿಕ ದಿನಗಳಲ್ಲಿ ಮೂರೂ ಫಾರ್ಮೆಟ್ಗಳಲ್ಲಿ ವಿರಾಟ್ 68 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 34.05 ಸರಾಸರಿಯಲ್ಲಿ 2,554 ರನ್ ಗಳಿಸಿದ್ದಾರೆ. 24 ಅರ್ಧಶತಕಗಳನ್ನೂ ಬಾರಿಸಿದ್ದಾರೆ.
ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ 262 ಪಂದ್ಯಗಳನ್ನಾಡಿದ್ದು, ಇದರಲ್ಲಿ 57.68 ರ ಸರಾಸರಿಯಲ್ಲಿ 12344 ರನ್ ಬಾರಿಸಿದ್ದಾರೆ. ಇದರಲ್ಲಿ 43 ಶತಕ, 64 ಅರ್ಧಶತಕಗಳಿವೆ. ಟೆಸ್ಟ್ ಮಾದರಿಯಲ್ಲಿ 102 ಪಂದ್ಯಗಳಾಡಿರುವ ವಿರಾಟ್ ಕೊಹ್ಲಿ 49.53 ರ ವೇಗದಲ್ಲಿ 8074 ರನ್ಗಳನ್ನು ಕಲೆ ಹಾಕಿದ್ದಾರೆ. 27 ಶತಕ, 28 ಅರ್ಧಶತಕ ಮಾಡಿದ್ದಾರೆ. 6 ವರ್ಷಗಳ ಬಳಿಕ ಏಷ್ಯಾ ಕಪ್ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ.
ಓದಿ: ನನ್ನ ವೃತ್ತಿ ಜೀವನದ ಅತ್ಯಂತ ಖುಷಿಯ ದಿನ.. ಏಷ್ಯಾ ಕಪ್ಗೂ ಮುನ್ನ ಧೋನಿ ನೆನೆದ ಕೊಹ್ಲಿ