ETV Bharat / sports

ಮುಂದುವರಿದ ವಿರಾಟ್​ ವೈಫಲ್ಯ: ಸತತ 2ನೇ ವರ್ಷವೂ ಶತಕವಿಲ್ಲದೇ ಕೊನೆಗೊಳಿಸಿದ ಕೊಹ್ಲಿ

ಭಾರತ ತಂಡದ ನಾಯಕ 2020ರಲ್ಲೂ ಶತಕ ಸಿಡಿಸುವಲ್ಲಿ ವಿಫಲರಾಗಿದ್ದರು. ಕೊಹ್ಲಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈಡೆನ್ ಗಾರ್ಡನ್​ನಲ್ಲಿ ನಡೆದಿದ್ದ ಡೇ ಅಂಡ್​ ನೈಟ್​ ಟೆಸ್ಟ್​ನಲ್ಲಿ ಶತಕ ಬಾರಿಸಿದ್ದರು.

Virat Kohli ends year 2021 with no international ton
ವಿರಾಟ್ ಕೊಹ್ಲಿ ಶತಕ
author img

By

Published : Dec 29, 2021, 6:56 PM IST

ಸೆಂಚುರಿಯನ್​: ಭಾರತ ಟೆಸ್ಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ 18 ರನ್​ಗಳಿಗೆ ಔಟಾಗುವ ಮೂಲಕ ಅಂತಾರಾಷ್ಟ್ರೀಯ ಶತಕವಿಲ್ಲದೇ 2021ರ ವರ್ಷವನ್ನು ಕೊನೆಗಾಣಿಸಿದ್ದಾರೆ.

ಭಾರತ ತಂಡದ ನಾಯಕ 2020ರಲ್ಲೂ ಶತಕ ಸಿಡಿಸುವಲ್ಲಿ ವಿಫಲರಾಗಿದ್ದರು. ಕೊಹ್ಲಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈಡೆನ್ ಗಾರ್ಡನ್​ನಲ್ಲಿ ನಡೆದಿದ್ದ ಡೇ ಅಂಡ್​ ನೈಟ್​ ಟೆಸ್ಟ್​ನಲ್ಲಿ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್ 33ನೇ ಓವರ್​ನಲ್ಲಿ ವಿಕೆಟ್ ಪಡೆಯುವ ಮೂಲಕ ​ಕೊಹ್ಲಿಯ 71ನೇ ಶತಕವನ್ನು ಮುಂದಿನ ವರ್ಷಕ್ಕೆ ಮುಂದೂಡಿದರು.

3ನೇ ದಿನ 16 ರನ್​ಗಳಿಸಿದ್ದ ಭಾರತ 4ನೇ ದಿನ ದಕ್ಷಿಣ ಆಫ್ರಿಕಾ ಬೌಲರ್​ಗಳ ದಾಳಿಯ ಮುಂದೆ ನಿಲ್ಲಲಾರದೇ ಹೋದರು. ವೇಗವಾಗಿ ರನ್​ಗಳಿಸಿ ಆದಷ್ಟು ಬೇಗ ದೊಡ್ಡ ಡಿಕ್ಲೇರ್ ಘೋಷಿಸಿಕೊಳ್ಳುವ ಮನೋಭಾವನೆಯಲ್ಲಿ ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ ಬ್ಯಾಟರ್​ಗಳು ಬೌಂಡರಿ ಸಿಡಿಸುವ ಬರದಲ್ಲಿ ವಿಕೆಟ್​ ಒಪ್ಪಿಸಿದರು.

ಕೊನೆಗೆ 50.3 ಓವರ್​ಗಳಲ್ಲಿ 174ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ನಿರಾಶೆ ಅನುಭವಿಸಿತು. ಆದರೆ 305 ರನ್​ಗಳ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ:ಬ್ಯಾಟಿಂಗ್ ವೈಫಲ್ಯದಿಂದ ಭಾರತ 174ಕ್ಕೆ ಆಲೌಟ್​: ದಕ್ಷಿಣ ಆಫ್ರಿಕಾಗೆ 305 ರನ್​​ಗಳ ಗುರಿ ನೀಡಿದ ಕೊಹ್ಲಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.