ಹೈದರಾಬಾದ್: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿ ಹೊರಬಂದಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿದೆ. ಧೋನಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
'ಹಳದಿ ಜೆರ್ಸಿಯಲ್ಲಿ ಲೆಜೆಂಡರಿ ನಾಯಕತ್ವ ಅಂತ್ಯವಾಗಿದೆ, ಅಭಿಮಾನಿಗಳು ಎಂದಿಗೂ ಮರೆಯಲಾಗದ ಅಧ್ಯಾಯ, ಯಾವಾಗಲೂ ನಾನು ಅವರನ್ನ ಗೌರವಿಸುತ್ತೇನೆ' ಎಂದು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್, ಈಗಾಗಲೇ ತಮ್ಮ ನಾಯಕತ್ವ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಆಯ್ಕೆಯಾಗಿದ್ದಾರೆ.
-
Legendary captaincy tenure in yellow skip. A chapter fans will never forget. Respect always. ❤️💛 @msdhoni pic.twitter.com/cz5AWkJV9S
— Virat Kohli (@imVkohli) March 24, 2022 " class="align-text-top noRightClick twitterSection" data="
">Legendary captaincy tenure in yellow skip. A chapter fans will never forget. Respect always. ❤️💛 @msdhoni pic.twitter.com/cz5AWkJV9S
— Virat Kohli (@imVkohli) March 24, 2022Legendary captaincy tenure in yellow skip. A chapter fans will never forget. Respect always. ❤️💛 @msdhoni pic.twitter.com/cz5AWkJV9S
— Virat Kohli (@imVkohli) March 24, 2022
ಚೆನ್ನೈ ತಂಡದ ನಾಯಕನಾಗಿ ಆಯ್ಕೆಯಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಪ್ರತಿಕ್ರಿಯೆ ನೀಡಿದ್ದು, 'ನಾಯಕನಾಗಿರುವುದಕ್ಕೆ ಒಳ್ಳೆಯ ಭಾವನೆ ಇದೆ. ಆದರೆ, ಈ ಸಂದರ್ಭದಲ್ಲಿ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಮಾಹಿ ಭಾಯ್ ಈಗಾಗಲೇ ತಂಡದಲ್ಲಿ ದೊಡ್ಡ ಪರಂಪರೆ ಉಳಿಸಿಕೊಂಡು ಬಂದಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಧೋನಿ ತಂಡದಲ್ಲಿರುವ ಕಾರಣ ನಾನು ಹೆಚ್ಚು ಚಿಂತಿಸಬೇಕಾಗಿಲ್ಲ. ಮಹಿ ಯಾವಾಗಲೂ ಬಾಸ್ ಆಗಿರುತ್ತಾರೆ. ನನಗೆ ಏನೇ ಪ್ರಶ್ನೆಗಳು ಉದ್ಭವವಾದ್ರೂ, ಅವರನ್ನು ಕೇಳುತ್ತೇನೆ. ಧೋನಿ ತಂಡದೊಂದಿಗೆ ಇದ್ದಾರೆ, ಇರುತ್ತಾರೆ. ನಿಮ್ಮ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿ' ಎಂದಿದ್ದಾರೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ 12 ಆವೃತ್ತಿಗಳ ಪೈಕಿ ನಾಲ್ಕು ಸಲ ಚಾಂಪಿಯನ್ ಪಟ್ಟಕ್ಕೇರಿಸಿದ್ದು, ಎರಡು ಸಲ ಚಾಂಪಿಯನ್ ಲೀಗ್ನಲ್ಲಿ ಟ್ರೋಫಿ ಗೆದ್ದಿದ್ದಾರೆ. ಐಪಿಎಲ್ನಲ್ಲಿ ಇಲ್ಲಿಯವರೆಗೆ 204 ಪಂದ್ಯಗಳನ್ನಾಡಿರುವ ಸಿಎಸ್‌ಕೆ 121 ಪಂದ್ಯಗಳಲ್ಲಿ ಗೆದ್ದಿದ್ದು, 82 ಪಂದ್ಯ ಸೋತಿದೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ ತಂಡ ಕೋಲ್ಕತ್ತಾ ವಿರುದ್ಧ ಸೆಣಸಾಟ ನಡೆಸಲಿದೆ.
ಇದನ್ನೂ ಓದಿ: ತಂಡದಲ್ಲಿ ಧೋನಿ ಇರುವಾಗ ನನಗೇಕೆ ಚಿಂತೆ?: ಸಿಎಸ್‌ಕೆ ನಾಯಕ ರವೀಂದ್ರ ಜಡೇಜಾ
ಸಿಎಸ್‌ಕೆ ಬಳಗ ಇಂತಿದೆ: ಮಹೇಂದ್ರ ಸಿಂಗ್ ಧೋನಿ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ(ಕ್ಯಾಪ್ಟನ್), ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆಎಂ ಆಸೀಫ್, ತುಷಾರ್ ದೇಶಪಾಂಡೆ, ಶಿವಂ ದುಬೆ,ಮಹೇಶ್ ತಿಕ್ಷಣ್, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡನ್, ಕೆ.ಭಗತ್ ವರ್ಮಾ