ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಮತ್ತು ಅದನ್ನು ಆಡುವ ಆಟಗಾರರ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ರೇಜ್. ಇದರಿಂದಾಗಿ ಕ್ರಿಕೆಟ್ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಹಿಂಬಾಲಕರಿದ್ದಾರೆ. ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಕೋಟಿಗಟ್ಟಲೆ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದರಿಂದ ಅವರು ಅಷ್ಟೇ ಸಂಪಾದನೆಯನ್ನೂ ಮಾಡುತ್ತಿದ್ದಾರೆ.
ಭಾರತ ತಂಡದ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ ದೊಡ್ಡ ಫ್ಯಾನ್ಸ್ ಫಾಲೋವರ್ಸ್ ಇದೆ. ಅವರು ಕ್ರಿಡೆಯ ಜೊತೆಗೆ ಅವರ ಫಿಟ್ನೆಸ್ ಹಾಗೂ ಅವರ ಮಾಡ್ರನ್ ಲುಕ್ನಿಂದ ಹೆಚ್ಚಿನವರಿಗೆ ಇಷ್ಟ ಆಗುತ್ತಾರೆ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಹಿಂಬಾಲಕರನ್ನೂ ಹೊಂದಿದ್ದಾರೆ. ಈ ಹಿಂಬಾಲಕ ಕಾರಣ ವಿರಾಟ್ ಸಂಪಾದಿಸುವ ಹಣ ಕೇಳಿದರೆ ಕೆಲವರು ಬೆಚ್ಚಿ ಬೀಳುವುದಂತೂ ಖಂಡಿತ. ಅಷ್ಟು ಪ್ರಭಾವಿ ಈ ಆಟಗಾರ.
-
Virat Kohli earns 11.45 crore per post on Instagram this year. [Hopper HQ 2023] pic.twitter.com/lT1yHJE7dN
— Johns. (@CricCrazyJohns) August 11, 2023 " class="align-text-top noRightClick twitterSection" data="
">Virat Kohli earns 11.45 crore per post on Instagram this year. [Hopper HQ 2023] pic.twitter.com/lT1yHJE7dN
— Johns. (@CricCrazyJohns) August 11, 2023Virat Kohli earns 11.45 crore per post on Instagram this year. [Hopper HQ 2023] pic.twitter.com/lT1yHJE7dN
— Johns. (@CricCrazyJohns) August 11, 2023
ಹೀಗಾಗಿ ಅವರು ಇನ್ಸ್ಟಾಗ್ರಾಮ್ನ ಒಂದು ಪೋಸ್ಟ್‌ಗೆ ಕೋಟಿಗಟ್ಟಲೆ ಗಳಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ.
ಭಾರತದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ. ಹಾಪರ್ ಎಂಬ ಸಂಸ್ಥೆ ಇನ್ಸ್ಟಾಗ್ರಾಮ್ನ ಸಂಪಾದನೆಯ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 2021 ರಲ್ಲಿ ಕಿಂಗ್ ಕೊಹ್ಲಿ ಹಾಪರ್ ಬಿಡುಗಡೆ ಮಾಡಿದ ಇನ್‌ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ವಿಶ್ವದ 19 ನೇ ಸ್ಥಾನದಲ್ಲಿದ್ದರು. ಆಗ ವಿರಾಟ್ ಕೊಹ್ಲಿಯ ಇನ್ಸ್ಟಾದ ಒಂದು ಪೋಸ್ಟ್‌ಗೆ $ 680,000 (ಸುಮಾರು 5 ಕೋಟಿ ರೂ.) ತೆಗೆದುಕೊಳ್ಳುತ್ತಿದ್ದರು. ಈಗ ಅವರ ಸಂಪಾದನೆ ಇನ್ಸ್ಟಾದಲ್ಲಿ ದುಪ್ಪಟ್ಟಾಗಿದೆ.
ಹಾಪರ್ ಇನ್‌ಸ್ಟಾಗ್ರಾಮ್ ರಿಚ್ ಲಿಸ್ಟ್‌ನ 2023ರ ವರದಿಯ ಪ್ರಕಾರ, ಈಗ ಅವರು 11.45 ಕೋಟಿ ಪಡೆಯುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಅವರು ಹೆಚ್ಚಿನ ಫಾಲೋವರ್ಸ್ಗಳನ್ನು ಪಡೆದಿದ್ದು ಆಟಗಾರರ ಗಳಿಕೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪೋಸ್ಟ್‌ಗೆ 26.7 ಕೋಟಿ ಮತ್ತು ಲಿಯೊನೆಲ್ ಮೆಸ್ಸಿ 21.5 ಕೋಟಿ ಗಳಿಸುತ್ತಾರೆ ಅಂತಿದೆ ಸಾಮಾಜಿಕ ಜಾಲತಾಣದ ವರದಿಗಳು.
-
Top 3 athletes earnings per post on Instagram in 2023 (Hopper HQ):
— Mufaddal Vohra (@mufaddal_vohra) August 11, 2023 " class="align-text-top noRightClick twitterSection" data="
Cristiano Ronaldo - 26.7cr.
Lionel Messi - 21.5cr.
Virat Kohli - 11.45cr. pic.twitter.com/23tJCmARij
">Top 3 athletes earnings per post on Instagram in 2023 (Hopper HQ):
— Mufaddal Vohra (@mufaddal_vohra) August 11, 2023
Cristiano Ronaldo - 26.7cr.
Lionel Messi - 21.5cr.
Virat Kohli - 11.45cr. pic.twitter.com/23tJCmARijTop 3 athletes earnings per post on Instagram in 2023 (Hopper HQ):
— Mufaddal Vohra (@mufaddal_vohra) August 11, 2023
Cristiano Ronaldo - 26.7cr.
Lionel Messi - 21.5cr.
Virat Kohli - 11.45cr. pic.twitter.com/23tJCmARij
ಇನ್ಸ್ಟಾಗ್ರಾಮ್ನಲ್ಲಿ ಆದಾಯ ಗಳಿಗೆಕೆ ಮುಖ್ಯವಾಗಿ ಫಾಲೋವರ್ಸ್ ಕಾರಣರಾಗುತ್ತಾರೆ. ಹೆಚ್ಚು ಹಿಂಬಾಲಕರನ್ನು ಹೊಂದಿರುವವರು ಅಧಿಕ ಆದಾಯ ಗಳಿಸುತ್ತಾರೆ. ಒಂದು ಸಾಮಾನ್ಯ ಲೆಕ್ಕಚಾರದ ಪ್ರಕಾರ 1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ನೀವು 2 ರಿಂದ 3 ಲಕ್ಷಗಳನ್ನು ಗಳಿಸಬಹುದು, ಹಾಗೇ 10 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಸುಲಭವಾಗಿ 15 ರಿಂದ 20 ಲಕ್ಷಗಳನ್ನು ಗಳಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ಗೂ ಮುನ್ನ ತಂಡದಲ್ಲಿನ ಸಮಸ್ಯೆ ಬಗ್ಗೆ ನಾಯಕ ರೋಹಿತ್ ಹೇಳಿದ್ದೇನು?