ದುಬೈ(ಯುಎಇ): ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಿನ್ನೆ ಕೊನೆಯ ಮತ್ತು ಔಪಚಾರಿಕ ಪಂದ್ಯವನ್ನಾಡಿ ಅಭಿಯಾನ ಕೊನೆಗೊಳಿಸಿತು. ಆದ್ರೆ, ವಿರಾಟ್ ಕೊಹ್ಲಿಗೆ ಈ ಪಂದ್ಯ ವಿಶೇಷವಾಗಿದ್ದು, ಅವರ ಮುಂದಿನ ವೃತ್ತಿ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಲಿದೆ.
1,024 ದಿನಗಳಿಂದ ಶತಕ ಬರ ಎದುರಿಸುತ್ತಿದ್ದ ರನ್ ಮಷಿನ್ ಖ್ಯಾತಿಯ ಬ್ಯಾಟರ್ ಪಂದ್ಯದಲ್ಲಿ ಅಬ್ಬರಿಸಿದರು. ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಸೆಂಚುರಿ ಸಿಡಿಸಿರುವ ಸಾಧನೆಯನ್ನೂ ಮಾಡಿದರು. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 61 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಅಜೇಯ 122 ರನ್ ಕಲೆ ಹಾಕಿದರು. 53 ಎಸೆತಗಳನ್ನು ಎದುರಿಸಿ ದಾಖಲಿಸಿದ ಈ ಶತಕದಲ್ಲಿ 6 ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು. 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವುದು ಕೊಹ್ಲಿ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತ್ತು.
ಪತ್ನಿ ಅನುಷ್ಕಾ, ಮಗಳಿಗೆ ಶತಕ ಅರ್ಪಣೆ: 71ನೇ ಶತಕ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮಿಸಿದ ವಿರಾಟ್, ಸಾಧನೆಯನ್ನು ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುಟ್ಟ ಮಗಳು ವಮಿಕಾಗೆ ಅರ್ಪಿಸಿದರು. ಇದರ ಜೊತೆಗೆ ಮೈದಾನದಲ್ಲಿ ತಮ್ಮ ಕೊರಳಲ್ಲಿರುವ ಸರಕ್ಕೆ ಮುತ್ತಿಕ್ಕಿದ್ದರು.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಾ, "ಈ ಶತಕ ವಿಶೇಷವಾಗಿ ಅವಳಿಗೆ(ಪತ್ನಿ) ಮತ್ತು ಮಗಳು ವಮಿಕಾಗೆ ಸಮರ್ಪಿತ. ಇಂದು ನಾನಿಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ. ಆ ವ್ಯಕ್ತಿ ಬೇರಾರೂ ಅಲ್ಲ, ಅನುಷ್ಕಾ" ಎಂದು ಭಾವುಕರಾದರು.
-
There it is! ❤️
— Anurag Avishek Das (@AvishekAnurag) September 8, 2022 " class="align-text-top noRightClick twitterSection" data="
😍😍 *1019days* 😍😍
1st T20 international 💯
The wait for #71 is over as Virat Kohli has amassed a magnificent century
Journey from #70 to #71 was long and painful for fans but King is back to his best#GOAT𓃵 #ViratKohli𓃵 #KingKohli pic.twitter.com/lJWDyeqkcy
">There it is! ❤️
— Anurag Avishek Das (@AvishekAnurag) September 8, 2022
😍😍 *1019days* 😍😍
1st T20 international 💯
The wait for #71 is over as Virat Kohli has amassed a magnificent century
Journey from #70 to #71 was long and painful for fans but King is back to his best#GOAT𓃵 #ViratKohli𓃵 #KingKohli pic.twitter.com/lJWDyeqkcyThere it is! ❤️
— Anurag Avishek Das (@AvishekAnurag) September 8, 2022
😍😍 *1019days* 😍😍
1st T20 international 💯
The wait for #71 is over as Virat Kohli has amassed a magnificent century
Journey from #70 to #71 was long and painful for fans but King is back to his best#GOAT𓃵 #ViratKohli𓃵 #KingKohli pic.twitter.com/lJWDyeqkcy
"ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ನನಗೀಗ 34 ವರ್ಷ. ಶತಕ ಸಂಭ್ರಮಾಚರಣೆಯ ವಿಧಾನವೂ ಬದಲಾಗಿದೆ" ಎಂದರು. ಇದೇ ವೇಳೆ, ಇಂಗ್ಲೆಂಡ್ ಪ್ರವಾಸದ ಬಳಿಕ ವಿರಾಮ ತೆಗೆದುಕೊಂಡಿರುವುದು ಸಹಾಯ ಮಾಡಿತು ಎಂದು ಕೊಹ್ಲಿ ತಿಳಿಸಿದರು.