ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್​ ಕೊಹ್ಲಿ​ ಶತಕ ಭರವಸೆ: ಆಸಿಸ್​ ಮೇಲೆ "ವಿರಾಟ" ದಾಖಲೆ

ನಾಲ್ಕನೇ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಶತಕ ದಾಖಲಿಸಿ ಫಾರ್ಮ್​ಗೆ ಮರಳಿರುವುದು ಜೂನ್​ 7ಕ್ಕೆ ನಡೆಯಲಿರುವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲುವಿನ ಭರವಸೆ ಹೆಚ್ಚಿಸಿದೆ. ​​

Virat Kohli Century Before WTC Final 2023
ಟೆಸ್ಟ್​ ಚಾಂಪಿಯನ್​ಶಿಪ್​ ಕೊಹ್ಲಿ​ ಶತಕ ಭರವಸೆ
author img

By

Published : Mar 15, 2023, 7:57 PM IST

ನವದೆಹಲಿ: ಭಾರತದ ಬ್ಯಾಟರ್​ ವಿರಾಟ್ ಕೊಹ್ಲಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 186 ರನ್‌ಗಳ ಸುದೀರ್ಘ ಇನ್ನಿಂಗ್ಸ್ ಆಡುವ ಮೂಲಕ ಟೀಕಾಕಾರರಿಗೆ ಉತ್ತರಿಸಿ, ಭವಿಷ್ಯದ ಸುಳಿವು ನೀಡಿದರು. ಟಿ20 ಹಾಗೂ ಏಕದಿನದಲ್ಲಿ ಶತಕ ಬಾರಿಸಿದ ಅವರು ಸುದೀರ್ಘ ಕಾಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವಲ್ಲಿ ಎಡವಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಲು ಕೊಹ್ಲಿ 1205 ದಿನ ಕಾಯಬೇಕಾಯಿತು.

ಕೊಹ್ಲಿಯ ಈ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತು. ಜೂನ್​ 7 ರಂದು ಓವೆಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬ್ಯಾಟರ್​ಗಳು ಆಸ್ಟ್ರೇಲಿಯಾವನ್ನು ಕಾಡಲಿದ್ದಾರೆ ಎಂಬ ಸಂದೇಶವನ್ನು ನಾಲ್ಕನೇ ಟೆಸ್ಟ್​ನಲ್ಲಿ ನೀಡಿದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 28ನೇ ಟೆಸ್ಟ್ ಶತಕ ಸಿಡಿಸುತ್ತಿದ್ದಂತೆ ಟೀಕಾಕಾರರು ಅಭಿಮಾನಿಗಳನ್ನು ಕೆಣಕಿದರು, ವೀಕ್ಷಕ ವಿವರಣೆಗಾರ ಮತ್ತು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಬಹಳ ಸಮಯದ ನಂತರ ಕೊಹ್ಲಿ ಶತಕ ಬಾರಿಸುವ ಮೂಲಕ ದೊಡ್ಡ ಹೊರೆಯನ್ನು ಇಳಿಸಿದ್ದಾರೆ. ಈಗ ಅವರು ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದಿದ್ದರು. ಅಹಮದಾಬಾದ್‌ನಲ್ಲಿ ಈ ಶತಕ 41 ಇನ್ನಿಂಗ್ಸ್‌ಗಳ ನಂತರ ಬಂದಿತ್ತು. ನವೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದರು.

Virat Kohli Century Before WTC Final 2023
ನಾಲ್ಕನೇ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಶತಕ

ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ನಂತರ, ಕೊಹ್ಲಿ ಒಂದು ರೀತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಹೆಚ್ಚಿನ ಭರವಸೆಯಿಂದ ಹೋಗಲಿದ್ದಾರೆ. ಭಾರತದ ಪರ ಗಿಲ್​ ಕೂಡ ಶತಕ ಗಳಿಸಿದ್ದು, ಹಾಗೇ ಆಲ್​ರೌಂಡರ್​ ಸ್ಥಾನದಲ್ಲಿ ಅಕ್ಷರ್​ ಮತ್ತು ಜಡೇಜಾ ಅವರ ಬ್ಯಾಟಿಂಗ್​ ಮತ್ತು ಬೌಲಿಂಗ್​ ತಂಡಕ್ಕೆ ಹೆಚ್ಚು ಆಸರೆಯಾಗಿ ಕಂಡುಬರುತ್ತಿದೆ.

ಆಸಿಸ್​ ಮೇಲೆ "ವಿರಾಟ" ದಾಖಲೆ

ಅಹಮದಾಬಾದ್​ ಇನ್ನಿಂಗ್ಸ್​ನಲ್ಲಿ, ನಾಥನ್ ಲಿಯಾನ್, ಟಾಡ್ ಮರ್ಫಿ ಮತ್ತು ಮ್ಯಾಥ್ಯೂ ಅವರ ಸ್ಪಿನ್ ಬೌಲಿಂಗ್ ಅನ್ನು ಕೊಹ್ಲಿ ಅತ್ಯಂತ ಶಾಂತವಾಗಿ ಎದುರಿಸಿದರು. ವಿರಾಟ್​ ಆಡಿದ ಎರಡನೇ ಬೃಹತ್​ ಇನ್ನಿಂಗ್ಸ್​ ಶತಕ ಇದಾಗಿತ್ತು. ಭಾನುವಾರ ವಿರಾಟ್​ 4 ದೊಡ್ಡ ಜೊತೆಯಾಟಗಳ ಮಾಡಿದರು. ಗಿಲ್ ಜೊತೆ 58 ರನ್, ಜಡೇಜಾ ಜೊತೆ 64 ರನ್, ಭರತ್ ಜೊತೆ 84 ರನ್ ಮತ್ತು ಅಕ್ಷರ್ ಪಟೇಲ್ ಜೊತೆ 162 ರನ್ ದಾಖಲೆಯ ಜೊತೆಯಾಟ ಆಡಿದರು.

28ನೇ ಟೆಸ್ಟ್ ಶತಕ ಮಾತ್ರವಲ್ಲ, ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ 75 ನೇ ಶತಕವಾಗಿದೆ. ಅಲ್ಲದೇ ತವರಿನಲ್ಲಿ 14 ನೇ ಶತಕವಾಗಿದೆ. ತವರಿನಲ್ಲಿ 4000 ರನ್​ ಗಳಿಸಿದ ವಿರಾಟ್​ 5ನೇ ಭಾರತೀಯ ಆಟಗಾರ ಎನಿಕೊಂಡರು ಅಲ್ಲದೇ, ಮೂರನೇ ಟೆಸ್ಟ್​ ಸಂದರ್ಭಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನ 25,000 ರನ್​ ಪೂರೈಸಿದ್ದರು.

ಇದನ್ನೂ ಓದಿ: ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ: ಗುಜರಾತ್​ ​ವಿರುದ್ಧ 55 ರನ್​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.