ETV Bharat / sports

ವಿಶ್ವಕಪ್​ನಲ್ಲಿ ಹೆಚ್ಚು ರನ್​​ಗಳ​ ದಾಖಲೆ ಬರೆದ ‘ವಿರಾಟ’: ಸಚಿನ್ ತೆಂಡೂಲ್ಕರ್​ ರೆಕಾರ್ಡ್​​ ಮುರಿದ ಕಿಂಗ್​ ಕೊಹ್ಲಿ - ETV Bharath Karnataka

Virat Kohli break Sachin Tendulkar records: ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್​ ಕೊಹ್ಲಿ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್​ ದೇವರು ತೆಂಡೂಲ್ಕರ್​ ದಾಖಲೆಯನ್ನು ಪುಡಿಗಟ್ಟಿದ್ದಾರೆ.

Virat Kohli
Virat Kohli
author img

By ETV Bharat Karnataka Team

Published : Nov 15, 2023, 4:54 PM IST

ಮುಂಬೈ (ಮಹಾರಾಷ್ಟ್ರ): 2023ರ ವಿಶ್ವಕಪ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಕಪ್​ನಲ್ಲಿ 49ನೇ ಏಕದಿನ ಶತಕವನ್ನು ದಾಖಲಿಸಿರುವ ಕೊಹ್ಲಿ, ಸಚಿನ್​ ದಾಖಲೆ ಸರಿಗಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ ಸೆಮೀಸ್​ ಪಂದ್ಯದಲ್ಲಿ ವಿಶ್ವಕಪ್​ವೊಂದರಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆಯನ್ನು ವಿರಾಟ್​ ಬರೆದಿದ್ದಾರೆ.

2003ರ ವಿಶ್ವಕಪ್​ನಲ್ಲಿ ಸಚಿನ್​ ತೆಂಡೂಲ್ಕರ್​ 673 ರನ್​ಗಳಿಸಿದ್ದರು. ವಿರಾಟ್​ ನ್ಯೂಜಿಲೆಂಡ್​ ವಿರುದ್ಧದ ಸೆಮೀಸ್​ ಪಂದ್ಯದಲ್ಲಿ 80 ರನ್​ ಕಲೆಹಾಕುತ್ತಿದ್ದಂತೆ ಈ ದಾಖಲೆ ಮುರಿದರು. 20 ವರ್ಷದ ನಂತರ ಭಾರತೀಯ ಆಟಗಾರನೇ ಸಚಿನ್​ ಅವರ ಈ ದಾಖಲೆಯನ್ನು ಮುರಿದಿರುವುದು ವಿಶೇಷ. ವಿರಾಟ್​ ಈ ವಿಶ್ವಕಪ್​ನಲ್ಲಿ ಆಡಿದ 10 ಇನ್ನಿಂಗ್ಸ್​ನಲ್ಲಿ ಇದುವರೆಗೆ 6 ಅರ್ಧಶತಕ ಮತ್ತು 2 ಶತಕ ಗಳಿಸಿ 674*ಕ್ಕೂ ಹೆಚ್ಚು ರನ್​ ಕಲೆಹಾಕಿದ್ದಾರೆ.

ಇದನ್ನೂ ಓದಿ: ಸಿಕ್ಸ್​ ವೀರ ರೋಹಿತ್​ ಶರ್ಮಾ: ಯುನಿವರ್ಸಲ್​ ಬಾಸ್ ದಾಖಲೆ ಉಡೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.