ಸೆಂಚುರಿಯನ್: ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಸೋಲಿನ ನಡುವೆಯೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೆಲವು ಅದ್ಭುತ ಹೊಡೆತಗಳೊಂದಿಗೆ ಆಕರ್ಷಕ ಅರ್ಧಶತಕ ಬಾರಿಸಿದ್ದು, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ ಸಂಗಕ್ಕಾರ ಅವರ ಹೆಸರಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಕೊಹ್ಲಿ ಗುರುವಾರ ಏಳನೇ ಬಾರಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ 2000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಅಪರೂಪದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಆರು ಬಾರಿ 2000+ ರನ್ ಗಳಿಸಿದ್ದ ಸಂಗಕ್ಕಾರ ಅವರನ್ನು ವಿರಾಟ್ ಹಿಂದಿಕ್ಕಿದರು.
-
A statement victory from South Africa to kick off their #WTC25 campaign in style 💪
— ICC (@ICC) December 28, 2023 " class="align-text-top noRightClick twitterSection" data="
How the first #SAvIND Test played out 👇https://t.co/ErgbetWUiu
">A statement victory from South Africa to kick off their #WTC25 campaign in style 💪
— ICC (@ICC) December 28, 2023
How the first #SAvIND Test played out 👇https://t.co/ErgbetWUiuA statement victory from South Africa to kick off their #WTC25 campaign in style 💪
— ICC (@ICC) December 28, 2023
How the first #SAvIND Test played out 👇https://t.co/ErgbetWUiu
ಮೊದಲ ಬಾರಿಗೆ 2012 ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್, 53.31 ಸರಾಸರಿಯೊಂದಿಗೆ 2186 ರನ್ ಗಳಿಸಿದ್ದರು. 2014 ರಲ್ಲಿಯೂ ಸ್ಟಾರ್ ಬ್ಯಾಟರ್ 55.75 ಸರಾಸರಿಯೊಂದಿಗೆ 2286 ರನ್ ಬಾರಿಸಿದ್ದರು. ಒಂದೆರಡು ವರ್ಷಗಳ ನಂತರ 2016ರಿಂದ 2019ರ ತನಕ ಸತತ ನಾಲ್ಕು ವರ್ಷಗಳ ಕಾಲ 2000 ಕ್ಕೂ ಹೆಚ್ಚು ರನ್ ಗಳಿಸಿದ ಕೊಹ್ಲಿ ಸ್ಥಿರ ಪ್ರದರ್ಶನ ತೋರಿದ್ದರು. ಬಳಿಕ ಫಾರ್ಮ್‌ನಲ್ಲಿ ಸ್ವಲ್ಪ ಕುಸಿತ ಕಂಡು ಬಂದಿತ್ತು. ಆ ಬಳಿಕ 2023ರಲ್ಲಿ ಪುನಃ ಬ್ಯಾಟಿಂಗ್ ವೈಭವ ತೋರಿದ ವಿರಾಟ್ ಮತ್ತೊಮ್ಮೆ ತಮ್ಮ ಕ್ಲಾಸ್ ಸಾಬೀತು ಮಾಡಿದ್ದಾರೆ.
ಕುಮಾರ ಸಂಗಕ್ಕಾರ ಅವರನ್ನು ಕೊಹ್ಲಿ ಹಿಂದಿಕ್ಕಿ ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದು, ಮಹೇಲಾ ಜಯವರ್ಧನೆ 5 ಬಾರಿ ಈ ಸಾಧನೆ ಮಾಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ 5 ಸಲ 2000+ ರನ್ ಗಳಿಸಿದ್ದರು. ಇದೇ ವೇಳೆ ಕೊಹ್ಲಿ, 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಮಾತ್ರ ವಿರಾಟ್ಗಿಂತ ಮುಂದಿದ್ದು, ರನ್ ಗಳಿಕೆಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
ಸೆಂಚುರಿಯನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಏಕಾಂಗಿ ಹೋರಾಟದ ನಡುವೆಯೂ ಭಾರತ ತಂಡ ಇನ್ನಿಂಗ್ಸ್ ಹಾಗೂ 32 ರನ್ಗಳಿಂದ ಸೋತಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಜೊತೆಗೆ ಹರಿಣಗಳ ನಾಡಿನಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಕನಸು ಈ ಬಾರಿಯೂ ಸಹ ನನಸಾಗಲಿಲ್ಲ.
ಇದನ್ನೂ ಓದಿ: '400 ರನ್ ನೀಡುವ ಪಿಚ್ ಆಗಿರಲಿಲ್ಲ': ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್