ದುಬೈ(ಯುಎಇ): ಭಾರತ-ಪಾಕಿಸ್ತಾನ ನಡುವಿನ ನಿನ್ನೆ ನಡೆದ ಸೂಪರ್ 4 ಏಷ್ಯಾ ಕಪ್ ಪಂದ್ಯ ಸಿಕ್ಕಾಪಟ್ಟೆ ರೋಚಕತೆಯಿಂದ ಕೂಡಿತ್ತು. ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ಆಟಗಾರನೋರ್ವ ಮಾಡಿರುವ ಸಣ್ಣ ತಪ್ಪಿನಿಂದಾಗಿ ಈ ಪಂದ್ಯವನ್ನು ರೋಹಿತ್ ಶರ್ಮಾ ಬಳಗ ಕೈಚೆಲ್ಲಿದೆ ಎಂಬ ಮಾತು ಕೇಳಿ ಬರಲು ಶುರುವಾಗಿವೆ. ಜೊತೆಗೆ ಯುವ ಆಟಗಾರ ಅರ್ಷ್‌ದೀಪ್ ವಿರುದ್ಧ ಆಕ್ರೋಶ ವ್ಯಕ್ತವಾಗಲು ಶುರುವಾಗಿದೆ.
- — Guess Karo (@KuchNahiUkhada) September 5, 2022 " class="align-text-top noRightClick twitterSection" data="
— Guess Karo (@KuchNahiUkhada) September 5, 2022
">— Guess Karo (@KuchNahiUkhada) September 5, 2022
ಆಗಿದ್ದೇನು?: ಟೀಂ ಇಂಡಿಯಾ ನೀಡಿದ್ದ 182 ರನ್ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಕೊನೆಯ ಮೂರು ಓವರ್ಗಳಲ್ಲಿ ಒತ್ತಡಕ್ಕೊಳಗಾಗಿತ್ತು. ರವಿ ಬಿಷ್ಣೋಯ್ ಎಸೆದ 18ನೇ ಓವರ್ನಲ್ಲಿ ಆಸೀಫ್ ಅಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ, ಅರ್ಷದೀಪ್ ಸಿಂಗ್ ಕ್ಯಾಚ್ ಕೈಚೆಲ್ಲಿದ್ದರು. ಈ ವಿಚಾರವಾಗಿ ಮೈದಾನದಲ್ಲೇ ರೋಹಿತ್ ಶರ್ಮಾ ಬೌಲರ್ ಅರ್ಷ್‌ದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅತ್ಯಂತ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಅರ್ಷ್‌ದೀಪ್ ಡ್ರಾಪ್ ಮಾಡಿದ್ದರಿಂದ ಅದರ ಸದುಪಯೋಗ ಪಡೆದುಕೊಂಡ ಆಸೀಫ್ 19ನೇ ಓವರ್ನಲ್ಲಿ ಮಿಂಚು ಹರಿಸಿದರು. 1 ಸಿಕ್ಸರ್, 2 ಬೌಂಡರಿ ಸಿಡಿಸಿ, 16ರನ್ಗಳಿಸಿ, ಪಂದ್ಯದ ಚಿತ್ರಣ ಬದಲಿಸಿದ್ದರು.
ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಪಾಕ್: ಸೋತ ಪಂದ್ಯದಲ್ಲೂ ವಿಶ್ವದಾಖಲೆ ಬರೆದ ಕೊಹ್ಲಿ
ಅರ್ಷ್‌ದೀಪ್ ಬೆನ್ನಿಗೆ ನಿಂತ ವಿರಾಟ್: ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿರಾಟ್ ಕೊಹ್ಲಿ ಮಾತನಾಡಿದರು. ಈ ವೇಳೆ ಒತ್ತಡದ ಸಂದರ್ಭದಲ್ಲಿ ಯಾವುದೇ ಪ್ಲೇಯರ್ ತಪ್ಪು ಮಾಡುವುದು ಸಹಜ. ಆದರೆ, ಅದರಿಂದ ಕಲಿತು ಮುಂದುವರೆಯುವುದು ತುಂಬಾ ಅವಶ್ಯಕ ಎಂದರು. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಸಂದರ್ಭ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೇ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದೇನೆ. ಆ ಸಂದರ್ಭದಲ್ಲಿ ನನ್ನ ಕ್ರಿಕೆಟ್ ಜೀವನ ಮುಗಿಯಿತು ಎಂದು ಬೆಳಗ್ಗೆ 5 ಗಂಟೆಯವರೆಗೆ ನಿದ್ರೆ ಮಾಡಿರಲಿಲ್ಲ ಎಂಬ ವಿಚಾರವನ್ನು ಅವರು ಮೆಲುಕು ಹಾಕಿದರು.
-
#ViratKohli @arshdeepsinghh
— Harpinder Singh (@HarpinderTohra) September 5, 2022 " class="align-text-top noRightClick twitterSection" data="
की स्पोर्ट में उतरे। #arshadeepsingh#IStandWithArshdeep#INDvsPAKpic.twitter.com/ZigSPePyBL
">#ViratKohli @arshdeepsinghh
— Harpinder Singh (@HarpinderTohra) September 5, 2022
की स्पोर्ट में उतरे। #arshadeepsingh#IStandWithArshdeep#INDvsPAKpic.twitter.com/ZigSPePyBL#ViratKohli @arshdeepsinghh
— Harpinder Singh (@HarpinderTohra) September 5, 2022
की स्पोर्ट में उतरे। #arshadeepsingh#IStandWithArshdeep#INDvsPAKpic.twitter.com/ZigSPePyBL
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ(60) ಅರ್ಧಶತಕದ ನೆರವಿನಿಂದ 181 ರನ್ಕಲೆ ಹಾಕಿತ್ತು. ಇದರ ಬೆನ್ನತ್ತಿದ್ದ ಪಾಕ್ ಮೊಹಮ್ಮದ್ ರಿಜ್ವಾನ್(71)ರನ್ಗಳ ನೆರವಿನಿಂದ ಒಂದು ಎಸೆತ ಬಾಕಿ ಇರುವಾಗಲೇ ಗೆದ್ದು ಬೀಗಿದೆ.