ನಾಗ್ಪುರ, ಮಹಾರಾಷ್ಟ್ರ: ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಾಗ್ಪುರಕ್ಕೆ ತಲುಪಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಸಿಎ ಸ್ಟೇಡಿಯಂ ಐದು ವರ್ಷಗಳ ನಂತರ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರ ನಡೆಸುತ್ತಿದೆ.
-
பார்டர்-கவாஸ்கர் டெஸ்ட் தொடர் வரும் 9ம் தேதி தொடங்கும் நிலையில் விராட் கோலி, கே.எல்.ராகுல் இருவரும் நேற்று முதல் போட்டி நடைபெறும் நாக்பூருக்கு புறப்பட்டனர்.#ViratKohli #KLRahul #INDvsAUS #BGT2023 #BorderGavaskarTrophy #Nagpur @BCCI @imVkohli @klrahul pic.twitter.com/4zqDRFpazq
— Viji Nambai (@vijinambai) February 2, 2023 " class="align-text-top noRightClick twitterSection" data="
">பார்டர்-கவாஸ்கர் டெஸ்ட் தொடர் வரும் 9ம் தேதி தொடங்கும் நிலையில் விராட் கோலி, கே.எல்.ராகுல் இருவரும் நேற்று முதல் போட்டி நடைபெறும் நாக்பூருக்கு புறப்பட்டனர்.#ViratKohli #KLRahul #INDvsAUS #BGT2023 #BorderGavaskarTrophy #Nagpur @BCCI @imVkohli @klrahul pic.twitter.com/4zqDRFpazq
— Viji Nambai (@vijinambai) February 2, 2023பார்டர்-கவாஸ்கர் டெஸ்ட் தொடர் வரும் 9ம் தேதி தொடங்கும் நிலையில் விராட் கோலி, கே.எல்.ராகுல் இருவரும் நேற்று முதல் போட்டி நடைபெறும் நாக்பூருக்கு புறப்பட்டனர்.#ViratKohli #KLRahul #INDvsAUS #BGT2023 #BorderGavaskarTrophy #Nagpur @BCCI @imVkohli @klrahul pic.twitter.com/4zqDRFpazq
— Viji Nambai (@vijinambai) February 2, 2023
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಪನಾಯಕನ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸಿಕೊಳ್ಳಲಿದ್ದಾರೆ. ಜನವರಿ 23 ರಂದು ಅಥಿಯಾ ಶೆಟ್ಟಿ ಅವರೊಂದಿಗೆ ರಾಹುಲ್ ಸಪ್ತಪದಿ ತುಳಿದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ 11 ದಿನಗಳ ನಂತರ ಮತ್ತೆ ಆಟದ ಕ್ಷೇತ್ರಕ್ಕೆ ಮರಳಿದ್ದಾರೆ. ಟೆಸ್ಟ್ ಸರಣಿಯಿಂದಾಗಿ ಅವರು ಹನಿಮೂನ್‌ಗೂ ಹೋಗಿಲ್ಲ ಎಂಬ ಮಾತಿದೆ. ಮದುವೆಯ ಆರತಕ್ಷತೆ ಇನ್ನೂ ನಡೆದಿಲ್ಲ. ರಾಹುಲ್ 2014ರಲ್ಲಿ ಮೆಲ್ಬೋರ್ನ್‌ನಲ್ಲಿ ಟೀಂ ಇಂಡಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಹುಲ್ ಅವರಿಗೆ ಡೆಬ್ಯೂ ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡಿದ್ದರು.
ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಬಾರ್ಡರ್ ಗವಾಸ್ಕರ್ ಸರಣಿಗೆ ಫಿಟ್ ಆಗಿದ್ದಾರೆ. ಹಲವು ತಿಂಗಳು ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಆಲ್ ರೌಂಡರ್ ಜಡೇಜಾ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅನುಮತಿ ನೀಡಿದೆ. ಜಡೇಜಾ ಆಗಸ್ಟ್ 2022 ರಲ್ಲಿ ಹಾಂಕಾಂಗ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. ಪಂದ್ಯದ ವೇಳೆ ಮೊಣಕಾಲಿಗೆ ಗಾಯವಾಗಿತ್ತು. ಗಾಯದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರಿಂದಾಗಿ ಅವರು 5 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದರು.
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ
1 ನೇ ಟೆಸ್ಟ್ - 9 ರಿಂದ 13 ಫೆಬ್ರವರಿ, ನಾಗ್ಪುರ
2 ನೇ ಟೆಸ್ಟ್ - 17 ರಿಂದ 21 ಫೆಬ್ರವರಿ, ದೆಹಲಿ
3 ನೇ ಟೆಸ್ಟ್ - 1 ರಿಂದ 5 ಮಾರ್ಚ್, ಧರ್ಮಶಾಲಾ
4 ನೇ ಟೆಸ್ಟ್ - 9 ರಿಂದ 13 ಮಾರ್ಚ್, ಅಹಮದಾಬಾದ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ಸಿ), ಆಶ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾತ್, ಸ್ಮಿತ್ , ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
ಓದಿ: ಅಂಡರ್ 19 ವನಿತೆಯರ ವಿಶ್ವಕಪ್: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ