ETV Bharat / sports

Vijay Hazare Trophy: ಸಮರ್ಥ ಬ್ಯಾಟಿಂಗ್​​ ವೈಖರಿ.. ಮುಂಬೈ ವಿರುದ್ಧ ಗೆದ್ದ ಕರ್ನಾಟಕ - ಮುಂಬೈ ವಿರುದ್ಧ ಗೆದ್ಧ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಸೋಲು ಕಂಡಿದ್ದ ಮನೀಷ್​ ಪಾಂಡೆ ನೇತೃತ್ವದ ಕರ್ನಾಟಕ ತಂಡದ ಇಂದು ಬಲಿಷ್ಠ ಮುಂಬೈ ತಂಡದ ವಿರುದ್ಧದ 7 ವಿಕೆಟ್​​ಗಳ ಗೆಲುವು ದಾಖಲು ಮಾಡಿದೆ.

Karnataka befeat mumbaiKarnataka befeat mumbai
Karnataka befeat mumbai
author img

By

Published : Dec 11, 2021, 7:15 PM IST

ಮಂಗಲಪುರಂ(ಆಂಧ್ರಪ್ರದೇಶ): ವಿಜಯ್​ ಹಜಾರೆ ಟ್ರೋಫಿಯ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬೈ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದ್ದು, ಈ ಮೂಲಕ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ದಾಖಲು ಮಾಡಿದೆ.

ಮುಂಬೈ ನೀಡಿದ್ದ 209 ರನ್​​ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕರಾದ ರವಿಕುಮಾರ್​ ಸಮರ್ಥ ಮತ್ತು ರೋಹನ್ ಕದಂ ಅವರ ಜವಾಬ್ದಾರಿಯುತ ಬ್ಯಾಟಿಂಗ್​​ ಪ್ರದರ್ಶನದಿಂದ 45.3 ಓವರ್​​​​ಗಳಲ್ಲಿ ಕೇವಲ 3 ವಿಕೆಟ್​​ ಕಳೆದುಕೊಂಡು ಗುರಿ ಮುಟ್ಟಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮುಂಬೈ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​​​ ಹಾಗೂ ಅರ್ಮಾನ್​​ ಜಾಫರ್​​ ತಂಡಕ್ಕೆ 95ರನ್​ಗಳ ಜೊತೆಯಾಟ ನೀಡಿದರು. ಈ ವೇಳೆ, 43 ರನ್​​ಗಳಿಕೆ ಮಾಡಿದ್ದ ಜಾಫರ್​​ ವಿಕೆಟ್​​ ಒಪ್ಪಿಸಿದ್ರೆ, ಬೆನ್ನಲ್ಲೇ ಜೈಸ್ವಾಲ್​ 61ರನ್​​ಗಳಿಕೆ ಮಾಡಿದ್ದ ವೇಳೆ ಸಮರ್ಥ್ ಓವರ್​​ನಲ್ಲಿ ಔಟ್​ ಆದರು.

ಇದಾದ ಬಳಿಕ ಮೈದಾನಕ್ಕಿಳಿದ ಅನುಭವಿ ಸೂರ್ಯಕುಮಾರ್ ಯಾದವ್​​​ 8, ಶಿವಂ ದುಬೆ 6, ದವಳ್ ಕುಲಕರ್ಣಿ 10ರನ್​ಗಳಿಕೆ ಮಾಡಿ ವಿಕೆಟ್​​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಹಾರ್ದಿಕ್​ ತಾಮೊರೆ 46ರನ್​​ಗಳಿಕೆ ಮಾಡಿ ತಂಡ 200ರ ಗಡಿ ದಾಟುವಂತೆ ಮಾಡಿದರು.

ತಂಡ ಕೊನೆಯದಾಗಿ 50 ಓವರ್​​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 208ರನ್​ಗಳಿಕೆ ಮಾಡಿತು. ಕರ್ನಾಟಕದ ಪರ ಪ್ರವೀಣ್ ದುಬೆ 4 ವಿಕೆಟ್ ಪಡೆದುಕೊಂಡರೆ,ಕೌಶಿಕ್​, ಸಮರ್ಥ್,ಸುಚಿತ್ರ, ಕಾರ್ಯಪ್ಪ ತಲಾ 1 ವಿಕೆಟ್ ಪಡೆದುಕೊಂಡರು.

209ರನ್​​ಗಳ ಗುರಿ ಬೆನ್ನತ್ತಿದ ಕರ್ನಾಟಕ ಮುಂಬೈ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ರವಿಕುಮಾರ್​ ಸರ್ಮರ್ಥ್​ ಹಾಗೂ ರೋಹನ್ ಕದಂ ತಂಡಕ್ಕೆ 95 ರನ್​​ಗಳ ಭದ್ರ ಬುನಾದಿ ಹಾಕಿದರು. 44ರನ್​ಗಳಿಕೆ ಮಾಡಿದ ವೇಳೆ ಕದಂ ವಿಕೆಟ್​​ ಒಪ್ಪಿಸಿದ್ರೆ, ಸಮರ್ಥ್​ 96ರನ್​​ಗಳ ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು.

ಇವರಿಗೆ ಸಾಥ್​​ ನೀಡಿದ ಸಿದ್ಧಾರ್ಥ್​​​​ 17ರನ್​, ಪಾಂಡೆ 5 ಹಾಗೂ ಕರುಣ್ ನಾಯರ್ ಅಜೇಯ 39ರನ್​​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕರ್ನಾಟಕ 45.3 ಓವರ್​​ಗಳಲ್ಲಿ 3ವಿಕೆಟ್​ನಷ್ಟಕ್ಕೆ 211ರನ್​​ಗಳಿಕೆ ಮಾಡಿ, ಗೆಲುವು ದಾಖಲು ಮಾಡಿತು.

ಕರ್ನಾಟಕ ತಂಡ ಈಗಾಗಲೇ ಪುದುಚೇರಿ ವಿರುದ್ಧ ಗೆಲುವು ಸಾಧಿಸಿದ್ದು, ತಮಿಳುನಾಡು ವಿರುದ್ಧ ಸೋಲು ಕಂಡಿತ್ತು. ಆದರೆ ಇದೀಗ ಬಲಿಷ್ಠ ಮುಂಬೈ ವಿರುದ್ಧ ಗೆಲುವಿನ ನಗೆ ಬೀರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.