ETV Bharat / sports

ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್​ ಕ್ರಿಕೆಟಿಗನ ಜತೆ ಡೇಟಿಂಗ್​ ವದಂತಿ..​ ಅಭಿಮಾನಿಗಳಿಂದ ಕಮೆಂಟ್​​ - ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ನಟಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಈ ಹಿಂದೆ ಹರಡಿತ್ತು. ಆದರೆ, ನಸೀಮ್​ ಮಾತ್ರ ಊರ್ವಶಿ ಬಗ್ಗೆ ನನಗೆ ತಿಳಿದಿಲ್ಲ ಎಂದು ಆರಂಭದಲ್ಲಿ ಹೇಳಿದರೂ ಬಳಿಕ ವರಸೆ ಬದಲಾಯಿಸಿದ್ದರು.

Urvashi Rautela gets groovy at airport, Naseem Shah's fans have the most hilarious reaction

author img

By

Published : Apr 18, 2023, 12:20 PM IST

ಮುಂಬೈ​: ಬಾಲಿವುಡ್​ ಬೆಡಗಿ ಊರ್ವಶಿ ರೌಟೇಲಾ ತಮ್ಮದೇ ಆದ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಜನಪ್ರಿಯ ನಟಿ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಆಗ್ಗಿಂದಾಗ್ಗೆ ತಮ್ಮ ಹಾಟ್​ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುವಂತೆ ಮಾಡುವುದು ಸುಳ್ಳಲ್ಲ. ಸದ್ಯ ಈ ಊರ್ವಶಿ ರೌಟೇಲಾ ಅವರ ಹೆಸರು ಪಾಕಿಸ್ತಾನದ ಕ್ರಿಕೆಟಿಗ ನಸೀಮ್​ ಜೊತೆಗೆ ತಳುಕು ಹಾಕಿ, ಫ್ಯಾನ್​ಗಳು ಕಮೆಂಟ್​ ಮಾಡಿರುವುದು ವಿಶೇಷ.

ವಿಮಾನ ನಿಲ್ದಾಣದಲ್ಲಿ ನಟಿ ಫೋಸ್​: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ಯಾಪಾರಾಜಿಗಳ ಕಣ್ಣಿಗೆ ಬಿದ್ದ ನಟಿ, ಒಂದೆರಡು ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಎಂದಿನಂತೆ ತಮ್ಮ ಗ್ಲಾಮರಸ್​ ಲುಕ್​ನಲ್ಲಿ ಕೆಂಪು ಬಣ್ಣದ ಸ್ಲಿಟ್​ ಡ್ರೆಸ್​ನಲ್ಲಿ, ಗಾಗಲ್ಸ್​, ಮಾಸ್ಕ್​ನೊಂದಿಗೆ ಕಾಣಿಸಿಕೊಂಡಿರುವ ನಟಿಯ ವಿಡಿಯೋಗೆ ಅಭಿಮಾನಿಗಳು ಕಮೆಂಟ್​ ಮಾಡಿದ್ದು, ಪಾಕಿಸ್ತಾನಿ ಕ್ರಿಕೆಟಿಗ ನಸೀಮ್​ ಶಾ ಅಭಿಮಾನಿಗಳು ಗಮನ ಕೂಡ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಾಪಟ್ಟೆ ಒಳ್ಳೆ ಮೂಡ್​ನಲ್ಲಿರುವ ಊರ್ವಶಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕ ಭಾರತೀಯರು ಸೇರಿದಂತೆ ದೇಶದ ಗಡಿ ಹೊರಗಿನ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಊರ್ವಶಿಗೆ ಹೇಳುತ್ತೇನೆ ನಮ್ಮ ನಸೀಮ್​ ಹಿಂಬಾಲಿಸಬೇಡ ಎಂದು ಒಬ್ಬರು ಕಮೆಂಟ್​ ಮಾಡಿದ್ರೆ, ಮತ್ತೊಬ್ಬರು, ನಸೀಮ್​ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.

ನಟಿ ಊರ್ವಶಿ ನಸೀಮ್​ ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ ಬಳಿಕ, ನಟಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ, ನಸೀಮ್​ ಮಾತ್ರ ಊರ್ವಶಿ ಬಗ್ಗೆ ನನಗೆ ತಿಳಿದಿಲ್ಲ ಎಂದು ಆರಂಭದಲ್ಲಿ ಹೇಳಿದರೂ ಬಳಿಕ ವರಸೆ ಬದಲಾಯಿಸಿದ್ದರು.

ಈ ಹಿಂದೆ ರಿಷಬ್ ಪಂತ್​ ಜೊತೆಗೆ ಕೂಡ ನಟಿ ಊರ್ವಶಿ ರೌಟೆಲಾ ಹೆಸರು ಕೇಳಿ ಬಂದಿತು. ಆದರೆ, ಇದನ್ನು ಕ್ರಿಕೆಟಿಗ ರಿಷಬ್​ ಪಂತ್​ ಅಲ್ಲ ಗಳೆದಿದ್ದರು. ಅಲ್ಲದೇ, ಇತ್ತೀಚೆಗೆ ಕಳೆದ ಡಿಸೆಂಬರ್​ನಲ್ಲಿ ಕ್ರಿಕೆಟಿಗ ರಿಷಭ್​ ಅಪಘಾತಕ್ಕೆ ಒಳಗಾದಾಗ ಅವರ ಹೆಸರು ಸೂಚಿಸದೇ, ಅವರಿಗೆ ಶುಭ ಹಾರೈಕೆಯನ್ನು ನಟಿ ಕೋರಿದ್ದರು. ಅಲ್ಲದೇ, ಮಾಧ್ಯಮಗಳ ಮುಂದೆ ಅವರು ನಮ್ಮ ದೇಶದ ಆಸ್ತಿ ಎಂದಿದ್ದರು.

ಕನ್ನಡದಲ್ಲೂ ನಟನೆಗೆ ಸಜ್ಜು: ಇನ್ನು ಒಂದರ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿ ಊರ್ವಶಿ ಬ್ಯುಸಿಯಾಗಿದ್ದಾರೆ. ಅಮೆರಿಕನ್​ ಹಾಡುಗಾರ್ತಿ ಸೊನಿಯೆ ಜೊತೆ ಊರ್ವಶಿ ಅವರು ಅಂತರಾಷ್ಟ್ರೀಯ ಮ್ಯೂಸಿಕ್​ ವಿಡಿಯೋದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ವಿಡಿಯೋ ಸಾಂಗ್​ ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ ನಟಿ ಊರ್ವಶಿ ಕನ್ನಡದಲ್ಲಿ ಕೂಡ ನಟಿಸಲು ಮುಂದಾಗಿದ್ದಾರೆ. ಕಾಂತಾರಾ 2 ಸಿನಿಮಾದಲ್ಲಿ ಅವರು ಬಣ್ಣ ಹಚ್ಚುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ನಟಿ ಜೊತೆಗಿನ ಫೋಟೋವನ್ನು ನಟ, ನಿರ್ದೇಶಕ ರಿಷಭ್​ ಶೆಟ್ಟಿ ಹಂಚಿಕೊಂಡಿದ್ದರು. ಆದರೆ, ಪಾತ್ರ ಮತ್ತು ಇನ್ನಿತರ ವಿವರಗಳ ಕುರಿತು ತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಎಲ್​ ರಾಹುಲ್​; ಅಳಿಯನ ಕೊಂಡಾಡಿದ ಸುನೀಲ್​ ಶೆಟ್ಟಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.