ETV Bharat / sports

ಅಂಡರ್​ 19 ವನಿತೆಯರ ವಿಶ್ವಕಪ್​: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಇಂಗ್ಲೆಂಡ್ ತಂಡವನ್ನು 17.1 ಓವರ್​ಗೆ ಆಲ್​ ಔಟ್​ ಮಾಡಿದ್ದ ಭಾರತದ ವನಿತೆಯರ ತಂಡ ​ಮೂರು ವಿಕೆಟ್​ಗಳನ್ನು ಕಳೆದುಕೊಂಡು ಆಂಗ್ಲರ ವಿರುದ್ಧ ಜಯಭೇರಿ ಭಾರಿಸಿತ್ತು.

under 19 cricketer sowmya tiwari grand welcome at native
ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ
author img

By

Published : Feb 3, 2023, 1:39 PM IST

Updated : Feb 3, 2023, 3:15 PM IST

ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಭೋಪಾಲ್(ಮಧ್ಯಪ್ರದೇಶ): ಚೊಚ್ಚಲ ಅಂಡರ್-19 ವಿಶ್ವಕಪ್‌ ಗೆದ್ದು, ತನ್ನೂರಿಗೆ ಆಗಮಿಸಿದ ಭಾರತದ ವನಿತೆಯರ ತಂಡದ ಪ್ರಮುಖ ಆಟಗಾರ್ತಿ ಸೌಮ್ಯಾ ತಿವಾರಿ ಅವರನ್ನು ಭೋಪಾಲ್‌ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೇಶದ ಗೆಲುವನ್ನು ಸಂಭ್ರಮಿಸಲು ಅಲ್ಲಿ ಜನಸಮೂಹವೇ ಸೇರಿತ್ತು. ವಿಮಾನ ನಿಲ್ದಾಣದಿಂದ ಗೌತಮ್​ ನಗರದವೆರೆಗೆ ಸೌಮ್ಯಾ ತಿವಾರಿ ಅವರನ್ನು ಅಪಾರ ಕ್ರಿಕೆಟ್​ ಪ್ರೇಮಿಗಳು, ರಾಜಕೀಯ ವ್ಯಕ್ತಿಗಳು ಹಾಗೂ ಆಕೆಯ ಬೆಂಬಲಿಗರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕರೆದೊಯ್ದರು.

ಮನೆ ತಲುಪಿದ ಸೌಮ್ಯಾ ಅವರಿಗೆ ತಾಯಿ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಿದರು. ತಂದೆ ಹೂವಿನ ಹಾರ ಹಾಕಿ ಮಗಳ ಜಯವನ್ನು ತಮ್ಮ ಜಯ ಎಂಬಂತೆ ಸಂಭ್ರಮಿಸಿದರು. ಸಹೋದರಿ ದೀಕ್ಷಾ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರೊಂದಿಗೆ ನೃತ್ಯ ಮಾಡಿ ದೇಶದ ವಿಜಯವನ್ನು ಆಚರಿಸಿದರು. ಸಂಭ್ರಮಾಚರಣೆಯ ನಂತರ ಈಟಿವಿ ಭಾರತದೊಂದಿಗೆ ಸೌಮ್ಯಾ ತಿವಾರಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.

ವಿಶ್ವಕಪ್​ ಗೆದ್ದ ದೇಶದ ಈ ಚೊಚ್ಚಲ ಗೆಲುವಿಗಾಗಿ ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ತನ್ನ ಪದಕವನ್ನು ತೋರಿಸುತ್ತಾ, ’’ಇದು ತನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಸಲ್ಲುತ್ತದೆ ಎಂದು ಅಭಿಮಾನದಿಂದ ಸೌಮ್ಯ ಹೇಳಿಕೊಂಡರು. ವಿಶ್ವಕಪ್​ ಗೆದ್ದ ಖುಷಿಯಲ್ಲಿರುವ ಸೌಮ್ಯಾ ತಿವಾರಿ ಅವರು ತಮ್ಮ ಮುಂದಿನ ಕನಸುಗಳು, ಗುರಿ, ಅದನ್ನು ಸಾಧಿಸುವಲ್ಲಿ ತಮ್ಮ ನಿರಂತರ ಪ್ರಯತ್ನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಹಿರಿಯ ಮಹಿಳಾ ಕ್ರಿಕೆಟ್ ತಂಡ ಸೇರುವ ಗುರಿ: ಇದೀಗ ಅಂಡರ್​ 10 ಗೆದ್ದು ಬೀಗುತ್ತಿರುವ ನನಗೆ ಹಿರಿಯ ಮಹಿಳಾ ಕ್ರಿಕೆಟ್ ತಂಡವನ್ನು ಸೇರಿಕೊಂಡು ದೇಶಕ್ಕೆ ವಿಶ್ವದರ್ಜೆಯ ರೆಕಾರ್ಡ್​ ಗಳಿಸಿಕೊಡಬೇಕು ಎನ್ನುವುದು ನನ್ನ ಜೀವನದ ಮುಂದಿನ ಗುರಿಯಾಗಿದೆ. ಆ ಗುರಿ ತಲುಪಲು ನಾನು ಇದೇ ರೀತಿಯ ಕಠಿಣ ಪ್ರಯತ್ನ ಮಾಡುತ್ತೇನೆ. ಆ ಪ್ರಯತ್ನ ನಿರಂತರವಾಗಿರುತ್ತದೆ.

ಪಂದ್ಯದ ವೇಳೆಯಲ್ಲಿದ್ದ ಒತ್ತಡ ಹಾಗೂ ಇತರ ವಿಷಯಗಳನ್ನು ಹಂಚಿಕೊಂಡ ಸೌಮ್ಯಾ, ನಾನು ಆಟದ ವೇಳೆ ಕೆಲವೊಂದು ತಂತ್ರಗಾರಿಕೆ ಮಾಡಿದ್ದೇನೆ. ಹೇಗಾದರೂ ಮಾಡಿ ಪಿಚ್​ನಲ್ಲಿಯೇ ಇದ್ದು ಆದಷ್ಟು ಬೇಗ ಗುರಿ ಸಾಧಿಸಬೇಕು ಎಂದು ತಂಡದ ಎಲ್ಲರೂ ನಿರ್ಧರಿಸಿದ್ದೆವು. ಇಡೀ ಪಂದ್ಯವನ್ನು ಮುಗಿಸಬೇಕು ಎಂಬುದಷ್ಟೇ ನನ್ನ ಮನಸಿನಲ್ಲಿದ್ದು, ವಿನ್ನಿಂಗ್​ ಶಾಟ್​ ಬಾರಿಸಿದಾಗಲೂ ಅದನ್ನೇ ಮಾಡಿದೆ ಎಂದು ಸೌಮ್ಯಾ ಹೇಳಿದ್ದಾರೆ.

ಹುಟ್ಟುಹಬ್ಬದಂದು ತಾಯಿಗೆ ನೀಡಿದ ಗೆಲುವಿನ ಉಡುಗೊರೆ: ಸೌಮ್ಯಾ ಅವರ ತಾಯಿಯ ಹುಟ್ಟುಹಬ್ಬವೂ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಈ ಗೆಲುವನ್ನು ತಾಯಿಗೆ ಉಡುಗೊರೆಯಾಗಿ ನೀಡುತ್ತೇನೆ. ಇದು ನನ್ನ ತಾಯಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಉಡುಗೊರೆ ಎನ್ನುವ ಮೂಲಕ ಸೌಮ್ಯಾ ಸಂತಸ ಹಂಚಿಕೊಂಡರು.

ಸೌಮ್ಯಾ ತಿವಾರಿ ಅವರ ಕೋಚ್ ಸುರೇಶ್ ಚೆನಾನಿ ಮಾತನಾಡಿ, 'ಸೌಮ್ಯಾ ಪಂದ್ಯವನ್ನು ಮುಗಿಸಿದ ರೀತಿ ನೋಡಿ, ನನಗೂ ಅವರ ಮೇಲೆ ಹೆಚ್ಚಿನ ಭರವಸೆ ಇತ್ತು. ಏಕೆಂದರೆ ಸೌಮ್ಯಾ ಮೊದಲಿನಿಂದ ಇಲ್ಲಿಯವರೆಗೆ ಪ್ರತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮತ್ತು ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲಿಯೂ ಸೌಮ್ಯಾ ಅವರು ಹಿರಿಯರ ತಂಡವನ್ನು ಸೇರಿಕೊಂಡು ಎಲ್ಲರಿಗೂ ಕೀರ್ತಿ ತರಲಿ ಎಂದು ಸುರೇಶ್ ಚೆನಾನಿ ಹಾರೈಸಿದ್ದಾರೆ.

ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಭಾರತದ ವನಿತೆಯರು: ಐಸಿಸಿ ಮಹಿಳಾ ಅಂಡರ್ -19 ಟಿ 20 ವಿಶ್ವಕಪ್‌ನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಟಾಸ್​ ಗೆದ್ದಿದ್ದ ಭಾರತದ ವನಿತೆಯರು ಇಂಗ್ಲೆಂಡ್​ಗೆ ಬ್ಯಾಟಿಂಗ್​ ಅವಕಾಶ ನೀಡಿತ್ತು. ಬೌಲಿಂಗ್​ ಮಾಡಿದ್ದ ಭಾರತದ ತಂಡ 17.1 ಓವರ್​ಗೆ 68 ರನ್​ಗೆ ಇಂಗ್ಲೆಡ್​ ತಂಡವನ್ನು ಆಲ್​ ಔಟ್​ ಮಾಡಿತ್ತು. ಈ ಗುರಿಯನ್ನು ಭಾರತದ ವನಿತೆಯರ ತಂಡದ 3 ವಿಕೆಟ್​ಗಳನ್ನು ಕಳೆದುಕೊಂಡು, ಆಟಗಾರ್ತಿಯರಾದ ಸೌಮ್ಯಾ ತಿವಾರಿ ಹಾಗೂ ತ್ರಿಶಾ ಅವರು 14 ಓವರ್​ನಲ್ಲೇ ಮುಗಿಸಿದ್ದರು.

ಇದನ್ನೂ ಓದಿ: U19W T20 World Cup: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರು, ತಂಡಕ್ಕೆ 5 ಕೋಟಿ ಬಹುಮಾನ

Last Updated : Feb 3, 2023, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.