ETV Bharat / sports

ಆ್ಯಶಸ್‌ ಸರಣಿ: ಆಟಗಾರರ ಕುಟುಂಬಕ್ಕಿರುವ ನಿಷೇಧ ತೆರವು ಮಾಡಿ- ಆಸ್ಟ್ರೇಲಿಯಾಗೆ ಇಂಗ್ಲೆಂಡ್‌ ಮನವಿ

ಮುಂಬರುವ ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆದರೆ ಕೋವಿಡ್​ 19 ಸಾಂಕ್ರಾಮಿಕ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರ ಕಠಿಣ ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಈ ನಿರ್ಬಂಧದ ಪ್ರಕಾರ, ಕೇವಲ ಆಟಗಾರರಿಗೆ ಮಾತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕುಟುಂಬ ಸದಸ್ಯರಿಗೆ ಹೇರಿರುವ ನಿರ್ಬಂಧವನ್ನು ವಿರೋಧಿಸಿರುವ ಇಂಗ್ಲೆಂಡ್​ನ 10 ಮಂದಿ ಕ್ರಿಕೆಟಿಗರು ನಿಯಮ ಬದಲಿಸದಿದ್ದರೆ ಆ್ಯಶಸ್ ಆಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

UK PM Boris Johnson
ಯುಕೆ ಪಿಎಂ ಬೋರಿಸ್ ಜಾನ್ಸನ್​
author img

By

Published : Sep 23, 2021, 3:49 PM IST

ಲಂಡನ್​: ಡಿಸೆಂಬರ್​​ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ಸಾಂಪ್ರದಾಯಿಕ ಆ್ಯಶಸ್​ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ಸರ್ಕಾರ ಕೋವಿಡ್ ಬಿಕ್ಕಟ್ಟಿನ ನೆಪವೊಡ್ಡಿ ಇಂಗ್ಲೆಂಡ್​ ಕ್ರಿಕೆಟಿಗರ ಕುಟುಂಬಸ್ಥರು ದೇಶಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿದೆ.

ಆದರೆ ಆಟಗಾರರ ಹಿತದೃಷ್ಟಿಯಿಂದ ಕುಟುಂಬಸ್ಥರಿಗೂ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಯುಕೆ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್ ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ​ ಪ್ರವಾಸ ಕೈಗೊಳ್ಳಲಿದೆ. ಕೋವಿಡ್​ ಸಾಂಕ್ರಾಮಿಕ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರ ಕಠಿಣ ಪ್ರಯಾಣ ನಿರ್ಬಂಧಗಳನ್ನು ವಿಧಿಸಿದೆ. ಈ ನಿರ್ಬಂಧಗಳ ಪ್ರಕಾರ, ಕೇವಲ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕುಟುಂಬ ಸದಸ್ಯರಿಗೆ ವಿಧಿಸಿರುವ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿರುವ ಇಂಗ್ಲೆಂಡ್​ನ 10 ಕ್ರಿಕೆಟಿಗರು ನಿಯಮ ಬದಲಿಸದಿದ್ದರೆ, ನಾವು ಆ್ಯಶಸ್ ಆಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ ಸ್ವದೇಶಿ ಕ್ರಿಕೆಟಿಗರ ಬೆನ್ನಿಗೆ ನಿಂತಿರುವ ಪ್ರಧಾನಿ ಬೋರಿಸ್ ಜಾನ್ಸನ್, ಕ್ರಿಸ್​ಮನ್​ ಸಮಯದಲ್ಲಿ ಕುಟುಂಬದಿಂದ ದೂರವಿರುವುದರಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಆಟಗಾರರೊಂದಿಗೆ ಕುಟುಂಬ ಸದಸ್ಯರು ಪ್ರಯಾಣಿಸಲು ಅವಕಾಶ ನೀಡಬೇಕೆಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ರಾಜತಾಂತ್ರಿಕರ ಭೇಟಿಯ ವೇಳೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಜಾನ್ಸನ್​ ಈ ವಿಷಯ ಪ್ರಸ್ತಾಪಿಸಿದ್ದಾರೆ. ಉಭಯ ದೇಶಗಳ ಮಾಧ್ಯಮಗಳು ವರದಿ ಮಾಡಿದಂತೆ, ಮಾರಿಸನ್ ಶೀಘ್ರದಲ್ಲೇ ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

'ನಾನು ಈ ವಿಚಾರವನ್ನು ಮಾರಿಸನ್ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಆಟಗಾರರೊಂದಿಗೆ ಕುಟುಂಬ ಸದಸ್ಯರು ಪ್ರಯಾಣಿಸಲು ಪೂರಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಕ್ರಿಸ್​ಮಸ್​ ಸಮಯದಲ್ಲಿ ತಮ್ಮ ಕುಟುಂಬದಿಂದ ದೂರ ಉಳಿಯುವುದು ಕ್ರಿಕೆಟಿಗರಿಗೆ ಕಠಿಣವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಆದಷ್ಟು ಬೇಗ ಇದಕ್ಕೆ ಪರಿಹಾರ ಹುಡುಕುವ ಭರವಸೆ ನೀಡಿದ್ದಾರೆ' ಎಂದು ಜಾನ್ಸನ್​ ವಾಷಿಂಗ್ಟನ್​ನಲ್ಲಿ ವರದಿಗಾರರಿಗೆ ಹೇಳಿದರು.

ಇದನ್ನೂ ಓದಿ: ಟಿ20 ಜೊತೆಗೆ ODI ನಾಯಕತ್ವವನ್ನೂ ತ್ಯಜಿಸುವಂತೆ 6 ತಿಂಗಳ ಹಿಂದೆಯೇ ಕೊಹ್ಲಿಗೆ ಸಲಹೆ ನೀಡಿದ್ರಂತೆ ಶಾಸ್ತ್ರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.