ಅಲ್ ಅಮೆರಾತ್: ಮುಹಮ್ಮದ್ ವಸೀಮ್ ಅವರ ಭರ್ಜರಿ ಶತಕದ ನೆರವಿನಿಂದ ಐರ್ಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಯುನೈಟೆಟ್ ಅರಬ್ ಎಮಿರೇಟ್ಸ್(ಯುಎಇ) 2022ರ ಟಿ20 ವಿಶ್ವಕಪ್ ಕ್ವಾಲಿಫೈಯರ್ ಟೈಟಲ್ ತನ್ನದಾಗಿಸಿಕೊಂಡಿದೆ.
ಓಮನ್ನ ಅಲ್ ಅಮೆರಾತ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ 2022ರ ಟಿ-20 ವಿಶ್ವಕಪ್ ಕ್ವಾಲಿಫೈಯರ್ ಎ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 159 ರನ್ಗಳಿಸಿತ್ತು. ಹ್ಯಾರಿ ಟಕ್ಟರ್ 37 ಎಸೆತಗಳಿಗೆ 50 ರನ್, ಲಾರ್ಕನ್ ಟಕ್ಕರ್ 20, ಗೆಟ್ಕೇಟ್ 19 ಎಸೆತಗಳಲ್ಲಿ 30 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ನೆರವಾಗಿದ್ದರು.
-
UAE are the 𝑾𝑰𝑵𝑵𝑬𝑹𝑺 of the ICC Men’s #T20WorldCup Qualifier A title 🏆
— ICC (@ICC) February 24, 2022 " class="align-text-top noRightClick twitterSection" data="
They beat Ireland by seven wickets in the final, chasing down a target of 160 👏 pic.twitter.com/ajuFkSeg9P
">UAE are the 𝑾𝑰𝑵𝑵𝑬𝑹𝑺 of the ICC Men’s #T20WorldCup Qualifier A title 🏆
— ICC (@ICC) February 24, 2022
They beat Ireland by seven wickets in the final, chasing down a target of 160 👏 pic.twitter.com/ajuFkSeg9PUAE are the 𝑾𝑰𝑵𝑵𝑬𝑹𝑺 of the ICC Men’s #T20WorldCup Qualifier A title 🏆
— ICC (@ICC) February 24, 2022
They beat Ireland by seven wickets in the final, chasing down a target of 160 👏 pic.twitter.com/ajuFkSeg9P
ಯುಎಇ ಪರ ಜಹೂರ್ ಖಾನ್ 29ಕ್ಕೆ 3, ಮುಸ್ತಾಫ 30ಕ್ಕೆ 3 ವಿಕೆಟ್ ಪಡೆದು ಮಿಂಚಿದರೆ, ಜುನೈದ್, ಕಾಶಿಫ್ ದೌಡ್, ಮೀಯಪ್ಪನ್ ಮತ್ತು ಬಾಸಿಲ್ ಹಮೀದ್ ತಲಾ ಒಂದು ವಿಕೆಟ್ ಪಡೆದರು.
ಇನ್ನು 160 ರನ್ಗಳ ಗುರಿಯನ್ನು ಯುಎಇ ಇನ್ನು 8 ಎಸೆತಗಳಿರುವಂತೆ ತಲುಪಿತು. ಮುಹಮ್ಮದ್ ವಸೀಮ್ 66 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸಹಿತ 112 ರನ್ಗಳಿಸಿದರೆ, ರೋಹನ್ ಮುಸ್ತಾಫ 35 ಎಸೆತಗಳಲ್ಲಿ 2 ಬೌಂಡರಿ ಸಹಿತ 37 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಸೋಲಿನ ಹೊರತಾಗಿಯೂ ಈಗಾಗಲೆ ಐರ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಸೂಪರ್ 12ಗೂ ಮುನ್ನ ವೆಸ್ಟ್ ಇಂಡೀಸ್, ಶ್ರೀಲಂಕಾ, ಯುಎಇ ಸೇರಿದಂತೆ 8 ತಂಡಗಳ ಜೊತೆ ಗುಂಪು ಹಂತದಲ್ಲಿ ಸೆಣಸಬೇಕಿದೆ. ಐರ್ಲೆಂಡ್ 2021ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಇದನ್ನೂ ಓದಿ:ಕರುಣ್ ನಾಯರ್ ಅಜೇಯ 152: ಜಮ್ಮು & ಕಾಶ್ಮೀರ ವಿರುದ್ಧ ಕರ್ನಾಟಕ ಮೊದಲ ದಿನ 268/8