ದುಬೈ: ಅಂಡರ್-19 ಏಕದಿನ ಏಷ್ಯಾಕಪ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಕಿರಿಯರ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರುದ್ಧ ಕೊನೆ ಎಸೆತದಲ್ಲಿ ಸೋಲು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲು ಸೋಲು ದಾಖಲು ಮಾಡಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 14 ರನ್ಗಳಿಕೆ ಮಾಡುವಷ್ಟರಲ್ಲಿ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆರಂಭಿಕರಾಗಿ ಕಣಕ್ಕಿಳಿದ ರಘುವಂಶಿ(0), ಶಿಖಾ ರಾಶೀದ್(6), ಕ್ಯಾಪ್ಟನ್ ಯಶ್ ದುಲ್(0) ಹಾಗೂ ನಿಶಾಂತ್ ಸಿಂಧು(8)ರನ್ಗಳಿಕೆ ಮಾಡಿ ನಿರಾಶೆ ಮೂಡಿಸಿದರು.
ಆದರೆ ತಂಡಕ್ಕೆ ಆಸರೆಯಾದ ಹರ್ನೂರ್ ಸಿಂಗ್ 46ರನ್ ಹಾಗೂ ರಾಜ ಭಾವ್ 25ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಇದಾದ ಬಳಿಕ ಕಣಕ್ಕಿಳಿದ ವಿಕೆಟ್ ಕೀಪರ್ ಆರಾಧ್ಯ ಯಾದವ್ 50ರನ್ಗಳಿಕೆ ಮಾಡಿ ತಂಡ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕೊನೆಯದಾಗಿ ತಂಡದ ಪರ ಕೌಶಲ್ ತಾಂಬೆ 32ರನ್, ರಾಜವರ್ಧನ್ 33ರನ್ಗಳಿಕೆ ಮಾಡಿದರು. ಈ ಮೂಲಕ ತಂಡ 49 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 237 ರನ್ಗಳಿಕೆ ಮಾಡಿತು. ಪಾಕ್ ಪರ ಜಮೀರ್ 5 ವಿಕೆಟ್, ಆವಾಸ್ ಅಲಿ 2 ವಿಕೆಟ್ ಪಡೆದುಕೊಂಡರೆ, ಅಕ್ರಮ್ ಹಾಗೂ ಸಾದಿಕ್ತ್ ತಲಾ 1 ವಿಕೆಟ್ ಪಡೆದುಕೊಂಡರು.
-
After a spirited fightback that saw them recover from 14/3 to post 237, India U19 lost to Pakistan U19 on the final ball of the match by 2 wickets. #BoysInBlue #ACC #U19AsiaCup #INDvPAK
— BCCI (@BCCI) December 25, 2021 " class="align-text-top noRightClick twitterSection" data="
Up next: Afghanistan U19 on Monday.
📸 📸: ACC
Details ▶️ https://t.co/BKDyB2lSAp pic.twitter.com/OtYSxckSBu
">After a spirited fightback that saw them recover from 14/3 to post 237, India U19 lost to Pakistan U19 on the final ball of the match by 2 wickets. #BoysInBlue #ACC #U19AsiaCup #INDvPAK
— BCCI (@BCCI) December 25, 2021
Up next: Afghanistan U19 on Monday.
📸 📸: ACC
Details ▶️ https://t.co/BKDyB2lSAp pic.twitter.com/OtYSxckSBuAfter a spirited fightback that saw them recover from 14/3 to post 237, India U19 lost to Pakistan U19 on the final ball of the match by 2 wickets. #BoysInBlue #ACC #U19AsiaCup #INDvPAK
— BCCI (@BCCI) December 25, 2021
Up next: Afghanistan U19 on Monday.
📸 📸: ACC
Details ▶️ https://t.co/BKDyB2lSAp pic.twitter.com/OtYSxckSBu
238 ರನ್ಗಳ ಗುರಿ ಬೆನ್ನಟ್ಟಿದ ಪಾಕ್ ಕೂಡ ಆರಂಭದಲ್ಲೇ ಅಬ್ದುಲ್ ವಾಹಿದ್ ವಿಕೆಟ್ ಕಳೆದು ಕೊಂಡಿತು. ಆದರೆ, ಈ ವೇಳೆ ಒಂದಾದ ಸಾದಿಕ್ತ್ ಹಾಗೂ ಮೊಹ್ಮದ್ ತಂಡಕ್ಕೆ ಎಚ್ಚರಿಕೆ ಜೊತೆಯಾಟ ನೀಡಿದರು. ಸಾದಿಕ್ತ್ 29ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರೆ, ಮೊಹ್ಮದ್ 81ರನ್ಗಳಿಕೆ ಮಾಡಿದರು. ಇದಾದ ಬಳಿಕ ಕ್ಯಾಪ್ಟನ್ ಅಕ್ರಮ್ 22, ಇರ್ಫಾನ್ ಖಾನ್ 32, ರಿಜ್ವಾನ್ 29ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.
ಕೊನೆ ಓವರ್ನಲ್ಲಿ ಪಂದ್ಯ ಕೈಚೆಲ್ಲಿದ ಭಾರತ
ಪಾಕ್ ಗೆಲುವಿಗೆ ಕೊನೆ ಓವರ್ನಲ್ಲಿ 8 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ, ಮೊದಲ ಎಸೆತದಲ್ಲಿ ವಿಕೆಟ್ ಪಡೆದುಕೊಂಡ ರವಿ ಕುಮಾರ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಇದಾದ ಬಳಿಕ ಮುಂದಿನ ನಾಲ್ಕು ಎಸೆತಗಳಲ್ಲಿ 6 ರನ್ ಬಿಟ್ಟುಕೊಟ್ಟರು. ಆದರೆ, ಕೊನೆ ಎಸೆತದಲ್ಲಿ ಎರಡು ರನ್ಗಳ ಅವಶ್ಯಕತೆ ಇದ್ದಾಗ ಬೌಂಡರಿ ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಈ ಮೂಲಕ ಪಾಕ್ ಗೆಲುವಿನ ನಗೆ ಬೀರಿತು.