ETV Bharat / sports

ನನ್ನನ್ನು ಸಾಬೀತುಪಡಿಸಿಕೊಳ್ಳಲು ನನಗೆ ಅವಕಾಶಗಳು ಬೇಕು: ಯಶ್ ಧುಲ್

author img

By

Published : Feb 18, 2022, 5:49 PM IST

ಅಂಡರ್-19 ವಿಶ್ವಕಪ್ ವಿಜೇತ ನಾಯಕ ಯಶ್​ ಧುಲ್​ ವೃತ್ತಿಜೀವನದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ತಮಿಳುನಾಡಿನಂತಹ ಅಸಾಧಾರಣ ದೇಶೀಯ ತಂಡದ ವಿರುದ್ಧ113 ರನ್‌ಗಳೊಂದಿಗೆ ಉತ್ತಮ ಪ್ರದರ್ಶನ ತೋರಿಸಿದ್ದಾರೆ.

ಯಶ್ ಧುಲ್
ಯಶ್ ಧುಲ್

ನವದೆಹಲಿ: ಸವಾಲುಗಳನ್ನು ಎದುರಿಸಲು ಸಿದ್ಧರಿದ್ದರೆ ಮಾತ್ರ ವಯಸ್ಸಿಗೆ ಮಿತಿ ಇಲ್ಲದೇ ಪ್ರಥಮ ದರ್ಜೆ ಹಂತಕ್ಕೆ ಸುಗಮವಾಗಿ ಪರಿವರ್ತನೆಯಾಗಬಹುದು ಎಂಬುದಕ್ಕೆ ಯಶ್ ಧುಲ್ ಸಾಕ್ಷಿಯಾಗಿದ್ದಾರೆ.

ಟೀಮ್ ಇಂಡಿಯಾ ಅಂಡರ್-19 ತಂಡದ ನಾಯಕ ಯಶ್ ಧುಲ್ ರಣಜಿ ಟ್ರೋಫಿ ಕ್ರಿಕೆಟ್​ನಲ್ಲಿ ಶತಕದೊಂದಿಗೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ತಮಿಳುನಾಡು ವಿರುದ್ದದ ಪಂದ್ಯದಲ್ಲಿ ದೆಹಲಿ ಪರ ಆರಂಭಿಕನಾಗಿ ಹೊಸ ಇನ್ನಿಂಗ್ಸ್​​ ಆರಂಭಿಸಿರುವ ಅವರು, ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿದ್ದಾರೆ.

ಅಂಡರ್-19 ವಿಶ್ವಕಪ್ ವಿಜೇತ ನಾಯಕ, ವೃತ್ತಿಜೀವನದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ತಮಿಳುನಾಡಿನಂತಹ ಅಸಾಧಾರಣ ದೇಶೀಯ ತಂಡದ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಅವರು 113 ರನ್‌ ಪಡೆಯುವುದರೊಂದಿಗೆ ಉತ್ತಮವಾಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಇದನ್ನೂ ಓದಿ: 73ನೇ ಸ್ಟ್ರಾಂಡ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ ಭಾರತದ ತಂಡ

ನನ್ನ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ತರಬೇತುದಾರರು ಇದ್ದಾರೆ. ಆದರೆ, ನನಗೆ ಬಾಲ್ಯದಿಂದಲೂ ಮಾರ್ಗದರ್ಶನ ನೀಡಿದವರು ರಾಜೇಶ್ ನಗರ್ ಸರ್. ರಣಜಿ ಟ್ರೋಫಿ ಬಂದಾಗ ನನ್ನನ್ನು ನೈಜ ಸಾಮರ್ಥ್ಯ ತೋರಲು ಹೇಳಿದ್ದರು. ನಾನು ಅದಕ್ಕಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದು ಮುದ್ದು ಮುದ್ದಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಯಶ್ ಧುಲ್ .

ತಂಡವು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ನಮ್ಮ ಕೆಲಸವನ್ನು ಯಾವುದೇ ಮರು ಪ್ರಶ್ನೆ ಹಾಕದೇ ಮಾಡಬೇಕು. ನಾನು ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದೇನೆ ಒಳ್ಳೆಯ ಪ್ರದರ್ಶನಗಳೊಂದಿಗೆ ಛಾಪು ಮೂಡಿಸಬೇಕಾಗಿದೆ ಎನ್ನುತ್ತಾರೆ

ಬಾಲ್ಯದಿಂದಲೂ ನಾನು ಕೋಚಿಂಗ್ ಪಡೆಯುವಾಗ ಎಲ್ಲ ರೀತಿಯಲ್ಲೂ ಅಭ್ಯಾಸ ಮಾಡುತ್ತಿದ್ದೆ. ಯಾವಾಗಲೂ ನನ್ನ ಪ್ರಮುಖ ಕೌಶಲ್ಯಗಳಲ್ಲಿ ನಂಬಿಕೆ ಹೊಂದಿದ್ದೇನೆ. ಕಠಿಣ ಪರಿಸ್ಥಿತಿ ಉದ್ಭವಿಸಿದಾಗ ನಾನು ಅದನ್ನು ಎದುರಿಸಿ ನಿಲ್ಲುವಲ್ಲಿ ವಿಫಲನಾಗುವುದಿಲ್ಲ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ತಮ್ಮ ಆತ್ಮವಿಶ್ವಾಸವನ್ನು ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.