ETV Bharat / sports

ಜಡೇಜಾ ಅಲ್ಲ, ಧೋನಿ ನಂತರ ಈತ ಸಿಎಸ್​ಕೆ ನಾಯಕನಾಗಬೇಕಿತ್ತು: ರವಿ ಶಾಸ್ತ್ರಿ - ರವೀಂದ್ರ ಜಡೇಜಾ ಸಿಎಸ್​ಕೆ ನಾಯಕ

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಸೋಲು ಕಾಣುತ್ತಿದ್ದಂತೆ ಭಾರತ ತಂಡದ ಮಾಜಿ ಕೋಚ್​ ರವಿಶಾಸ್ತ್ರಿ ಮಾತನಾಡಿ, ದಕ್ಷಿಣ ಆಫ್ರಿಕಾ ತಂಡದ ಅನುಭವಿ ಬ್ಯಾಟರ್​ ಫಾಫ್​ ಡು ಪ್ಲೆಸಿಸ್​ರನ್ನು ತಂಡದಿಂದ ಹೊರಬಿಟ್ಟು ಸಿಎಸ್​ಕೆ ದೊಡ್ಡ ಪ್ರಮಾದ ಎಸಗಿದೆ. ಜೊತೆಗೆ, ರವೀಂದ್ರ ಜಡೇಜಾ ನಾಯಕತ್ವಕ್ಕಿಂತ ಕ್ರಿಕೆಟ್​​ನತ್ತ ಹೆಚ್ಚು ಗಮನ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

Ravi Shastri on CSK captaincy
ರವೀಂದ್ರ ಜಡೇಜಾ-ಎಂಎಸ್ ಧೋನಿ
author img

By

Published : Apr 11, 2022, 4:01 PM IST

ಮುಂಬೈ: ಹಾಲಿ ಚೆನ್ನೈ ಸೂಪರ್ ಕಿಂಗ್ಸ್ 2022ರ ಐಪಿಎಲ್​ನಲ್ಲಿ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಸೋಲು ಕಂಡು ಹೀನಾಯ ಪ್ರದರ್ಶನ ತೋರಿದೆ. ಪ್ರಸ್ತುತ ಲೀಗ್​ನ ಅಂಕಪಟ್ಟಿಯಲ್ಲಿ ಇನ್ನೂ ಖಾತೆಯನ್ನು ತೆರೆಯಲಾಗದೇ ಕೊನೆಯ ಸ್ಥಾನದಲ್ಲಿದೆ. ಶನಿವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಸೋಲು ಕಾಣುತ್ತಿದ್ದಂತೆ ಭಾರತ ತಂಡದ ಮಾಜಿ ಕೋಚ್​ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

'ಸಿಎಸ್​ಕೆ, ದಕ್ಷಿಣ ಆಫ್ರಿಕಾ ತಂಡದ ಅನುಭವಿ ಬ್ಯಾಟರ್​ ಫಾಫ್​ ಡು ಪ್ಲೆಸಿಸ್​ರನ್ನು ತಂಡದಿಂದ ಹೊರ ಬಿಟ್ಟು ದೊಡ್ಡ ಪ್ರಮಾದ ಎಸಗಿದೆ. ಜೊತೆಗೆ, ರವೀಂದ್ರ ಜಡೇಜಾ ನಾಯಕತ್ವಕ್ಕಿಂತ ಕ್ರಿಕೆಟ್​​ನತ್ತ ಹೆಚ್ಚು ಗಮನ ನೀಡಬೇಕಿತ್ತು' ಎಂದರು. 2022ರ ಐಪಿಎಲ್​ಗೆ ಕೆಲವೇ ದಿನಗಳಿರುವಾಗ ಎಂ.ಎಸ್.ಧೋನಿ ತಂಡದ ನಾಯಕತ್ವ ತ್ಯಜಿಸಿದ್ದು, ರವೀಂದ್ರ ಜಡೇಜಾ ಆ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದರು. ಒಂದು ವೇಳೆ ಧೋನಿ ನಾಯಕನಾಗಿ ಮುಂದುವರಿಯಲು ಬಯಸದಿದ್ದರೆ, ಡುಪ್ಲೆಸಿಸ್​ ಸಿಎಸ್​ಕೆ ತಂಡದ ನಾಯಕನಾಗಬೇಕಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.

'ಜಡೇಜಾರಂತಹ ಆಟಗಾರ ತಮ್ಮ ಕ್ರಿಕೆಟ್​​ನತ್ತ ಗಮನ ಕೇಂದ್ರೀಕರಿಸಬೇಕೆಂದು ನಾನು ನಂಬುತ್ತೇನೆ. ಚೆನ್ನೈ ತಂಡ ಫಾಫ್​ ಡುಪ್ಲೆಸಿಸ್​ರನ್ನು ಹೊರ ಹೋಗಲು ಬಿಡಬಾರದಿತ್ತು. ಏಕೆಂದರೆ, ಆತ ಮ್ಯಾಚ್​ ವಿನ್ನರ್​ ಮತ್ತು ಸಾಕಷ್ಟು ಕ್ರಿಕೆಟ್​ ಆಡಿದ್ದರು. ಒಂದು ಧೋನಿ ತಾವು ನಾಯಕತ್ವ ವಹಿಸಿಕೊಳ್ಳುವುದು ಬೇಡ ಎನಿಸಿದ್ದರೆ, ಆಗ ಫಾಫ್​ ಸಿಎಸ್​ಕೆ ನಾಯಕನಾಗಬೇಕಿತ್ತು. ಜಡೇಜಾ ಆಟಗಾರನಾಗಿ ಆಡಬೇಕಿತ್ತು. ಏಕೆಂದರೆ ಆತ ನಾಯಕತ್ವದ ಹೊರೆಯಿಲ್ಲದೆ, ಮುಕ್ತವಾಗಿ ಆಡುತ್ತಿದ್ದರು ಎಂದು ಇಎಸ್​ಪಿಎನ್​ಕ್ರಿಕ್​ಇನ್ಫೋದ ಟಿ20 ಟೈಮ್ ಔಟ್​ನಲ್ಲಿ ತಿಳಿಸಿದರು.

ಈ ಋತುವಿನಲ್ಲಿ ಸಿಎಸ್​ಕೆಗೆ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಕಳೆದ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದ ಋತುರಾಜ್ ಗಾಯಕ್ವಾಡ್ ಶೋಚನೀಯವಾಗಿ ಫಾರ್ಮ್‌ ಕಳೆದುಕೊಂಡಿದ್ದಾರೆ. ಇತರ ಆಟಗಾರರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದಕ್ಕೆ ಹೆಣಗಾಡುತ್ತಿದ್ದಾರೆ.

ಇದನ್ನೂ ಓದಿ: ಮೆಗಾ ಹರಾಜಿಗೂ ಮುಂಬೈ ಇಂಡಿಯನ್ಸ್​ಗೂ ಆಗಿಬರಲ್ವಾ? ಹೌದು ಎನ್ನುತ್ತಿವೆ ದಾಖಲೆಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.