ಲಂಡನ್: ಲಾರ್ಡ್ಸ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೀಷರ ಪ್ರದರ್ಶನವನ್ನು ಟೀಕಿಸಿರುವ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಇಬ್ಬರು ಆಟಗಾರರನ್ನು ಒಳಗೊಂಡಿರುವ ಈ ತಂಡದ ಎದುರು ಟೀಮ್ ಇಂಡಿಯಾ 4-0ಯಲ್ಲಿ ಸರಣಿಯನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ.
ಸೋಮವಾರ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್ಗಳಿಂದ ಗೆಲುವು ದಾಖಲಿಸಿದ ನಂತರ ಗವಾಸ್ಕರ್ ಪಂದ್ಯ ವಿಶ್ಲೇಷಣೆ ವೇಳೆ ಈ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಇಬ್ಬರು ಆಟಗಾರರ ತಂಡ, ಜೋ ರೂಟ್ ಮತ್ತು ಜೇಮ್ಸ್ ಆಂಡರ್ಸನ್ ಅವರನ್ನು ಒಳಗೊಂಡಿರುವ ತಂಡವಷ್ಟೇ. ಈ ಪಂದ್ಯದಲ್ಲಿ ಆಡಿರುವ ಎಲ್ಲ ಆಟಗಾರರನ್ನು ಗೌರವಿಸುತ್ತಿದ್ದೇನೆ, ಆದರೆ ಈ ಇದು ಸರಿಯಾದ ಟೆಸ್ಟ್ ತಂಡದ ರೀತಿ ಕಾಣಿಸುತ್ತಿಲ್ಲ ಎಂದು ಸೋನಿ ಸ್ಪೋರ್ಟ್ಸ್ನಲ್ಲಿ ಪಂದ್ಯದ ನಂತರ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅವರ ತಂತ್ರಗಾರಿಕೆಗಳು ಕೆಟ್ಟದಾಗಿವೆ. ಅವರ ಆರಂಭಿಕ ಬ್ಯಾಟ್ಸ್ಮನ್ಗಳು ಹಾಸ್ಯಸ್ಪದ ರೀತಿಯಲ್ಲಿ ಔಟಾಗಿದ್ದಾರೆ. 3ನೇ ಕ್ರಮಾಂಕದ ಬ್ಯಾಟ್ಸ್ಮನ್ ಹಸೀಬ್ ಹಮೀದ್ ಒತ್ತಡಕ್ಕೆ ಒಳಗಾಗಿದ್ದಾರೆ ಮತ್ತು ಅವರು ತಾತ್ಕಾಲಿಕ ಬ್ಯಾಟ್ಸ್ಮನ್, ಹಾಗಾಗಿ ಜೋ ರೂಟ್ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಇನ್ನು ಜಾನಿ ಬೈರ್ಸ್ಟೋವ್ ಸ್ಥಿರತೆಯಿಲ್ಲ ಒಮ್ಮೆ ಆಡುತ್ತಾರೆ, ಮತ್ತೊಮ್ಮೆ ಏನೂ ಇಲ್ಲ, ಬಟ್ಲರ್ ಒಬ್ಬ ಉತ್ತಮ ವೈಟ್ ಬಾಲ್ ಆಟಗಾರ. ಆದರೆ, ಕೆಂಪು ಚೆಂಡಿನ ಕ್ರಿಕೆಟ್ಗೆ ಸೂಕ್ತ ಎಂದು ನನಗನಿಸುವುದಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಎರಡೂವರೆ ಆಟಗಾರರ ತಂಡದಂತಿದೆ
ಇನ್ನು ಬೌಲಿಂಗ್ ಕೇವಲ ಜೇಮ್ಸ್ ಆಂಡರ್ಸನ್ ಮಾತ್ರ ಉತ್ತಮವಾಗಿ ಕಾಣಿಸುತ್ತಾರೆ. ಬೇರೆ ಯಾರೂ ಪರಿಣಾಮಕಾರಿಯಾಗಿಲ್ಲ. ಆಲ್ಲಿ ರಾಬಿನ್ಸನ್ ಟ್ರೆಂಟ್ಬ್ರಿಡ್ಜ್ನಲ್ಲಿ 5 ವಿಕೆಟ್ ಪಡೆದರು. ಆದರೂ ಇದು ಎರಡೂವರೆ ಆಟಗಾರರ ತಂಡದಂತಿದೆ ಎಂದು ಲಿಟ್ಲ್ ಮಾಸ್ಟರ್ ಹೇಳಿದ್ದಾರೆ.
ಈ ಕಾರಣದಿಂದಲೇ ನಾನು ಭಾರತ ತಂಡ ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕು ಎಂದು ಭಾವಿಸುತ್ತಿರುವೆ. ಹಿಂದೆಯೇ ನಾನು 4-0 ಅಥವಾ 3-1ರಲ್ಲಿ ಭಾರತ ಗೆಲ್ಲುತ್ತದೆ ಎಂಬು ಹೇಳಿದ್ದೇನೆ, ಈಗಲೂ ಮಳೆ ಅಡಚಣೆ ಮಾಡದಿದ್ದರೆ ಆ ಫಲಿತಾಂಶ ಸಿಗಲಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ಇದನ್ನು ಓದಿ:ಬುಮ್ರಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಆಂಗ್ಲರ ಈ ಮೂರ್ಖತನವೇ ಸೋಲಿಗೆ ಕಾರಣ : ಬಾಯ್ಕಾಟ್