ETV Bharat / sports

ವಿಂಡ್ಸರ್ ಪಾರ್ಕ್‌ನಲ್ಲಿ ಭಾರತಕ್ಕೆ ಮೊದಲ 'ಟೆಸ್ಟ್'; ನೆಟ್ಸ್​ನಲ್ಲಿ ಕಸರತ್ತು

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಉದ್ದೇಶದಿಂದ ಭಾರತ ಕ್ರಿಕೆಟ್ ತಂಡ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ.

Team Net Practice India vs west indies first test match windsor park

author img

By

Published : Jul 10, 2023, 2:21 PM IST

ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. ಜುಲೈ 12ರಿಂದ ಡೊಮಿನಿಕಾದಲ್ಲಿ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮತ್ತು ಕ್ರೆಗ್ ಬ್ರಾಥ್‌ವೈಟ್ ನಾಯಕತ್ವದ ವಿಂಡೀಸ್ ತಂಡಗಳು ಪರಸ್ಪರ ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಮೊದಲ ಟೆಸ್ಟ್‌ಗೆ ತಂಡ ಪ್ರಕಟಿಸಿರುವ ಕೆರಿಬಿಯನ್​ ಕ್ರಿಕೆಟ್​ ಮಂಡಳಿ ಅನುಭವಿಗಳ ಜೊತೆ ಯುವ ಪ್ರತಿಭೆಗಳಿಗೂ ಮಣೆ ಹಾಕಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2023-25ರ ಸರಣಿಯ ಮೊದಲ ಪಂದ್ಯವಿದು. ಎರಡು ಬಾರಿಯ ಚಾಂಪಿಯನ್​ಶಿಪ್​ನ ರನ್ನರ್​ ಅಪ್​ ತಂಡ ಭಾರತಕ್ಕೆ ದೊಡ್ಡ ಸವಾಲಾಗದು ಎಂದು ಹೇಳಲು ಸಾಧ್ಯವಿಲ್ಲ. ತವರು ನೆಲದಲ್ಲಿ ವೆಸ್ಟ್​​ ಇಂಡೀಸ್​​ ತಂಡವನ್ನು ವೀಕ್​ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜುಲೈ 12ರಂದು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡವು ತನ್ನ ಇಬ್ಬರು ಸ್ಟಾರ್​ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಹೊರತಾಗಿ ಮೈದಾನಕ್ಕಿಳಿಯುತ್ತಿದೆ.

ಶಮಿ ಮತ್ತು ಬುಮ್ರಾ ಬದಲಿಗೆ ನವದೀಪ್ ಸೈನಿ ಮತ್ತು ಜಯದೇವ್​ ಉನಾದ್ಕತ್​ ಸ್ಥಾನ ಪಡೆದಿದ್ದು, ಇವರ ಮೇಲೆ ನಿರೀಕ್ಷೆ ಹೆಚ್ಚಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ತಂಡದಲ್ಲಿ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ ಬೌಲರ್‌ಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತ ಎನ್ನಲಾಗಿದೆ. ಆಲ್​ರೌಂಡರ್​ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಅವರೂ ಸಹ ಸ್ಥಾನ ಪಡೆಯುವ ಸಂಭವವಿದೆ. ಠಾಕೂರ್​ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ವೇಗದ ಬೌಲಿಂಗ್ ಜವಾಬ್ದಾರಿ ನಿಭಾಯಿಸುವ ಸಾಧ್ಯತೆಗಳನ್ನು ಚರ್ಚಿಸಲಾಗುತ್ತಿದೆ.

ಅಡುವ ಹನ್ನೊಂದರ ವೇಗದ ಬೌಲಿಂಗ್​ ಆಯ್ಕೆಯಲ್ಲಿ ನವದೀಪ್ ಸೈನಿಗೆ ಹೆಚ್ಚಿನ ಪ್ರಶಸ್ತ್ಯ ನಿರೀಕ್ಷೆ ಇದೆ. ಸೈನಿ ಟೆಸ್ಟ್​ ಮಾದರಿ ಪಂದ್ಯದಲ್ಲಿ ಹೆಚ್ಚು ಪರಿಣಾಮಕಾರಿ ಪ್ರದರ್ಶನ ನೀಡಿದ್ದು, ನಿಧಾನಗತಿಯ ಪಿಚ್‌ನಲ್ಲಿ ಡ್ಯೂಕ್ಸ್ ಬಾಲ್‌ನೊಂದಿಗೆ ವಿಕೆಟ್​ ಕಬಳಿಸುವಲ್ಲಿ ಮತ್ತು ರನ್​ ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಉನದ್ಕತ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೂ, ಅವರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ವಿಂಡ್ಸರ್ ಪಾರ್ಕ್‌ ಮೈದಾನದಲ್ಲಿ ಈವರೆಗೆ ಒಟ್ಟು 5 ಟೆಸ್ಟ್, 4 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಇಲ್ಲಿ ಕೊನೆಯ ಟೆಸ್ಟ್ 2017ರಲ್ಲಿ ನಡೆದಿತ್ತು. ಇದರಲ್ಲಿ ಪಾಕಿಸ್ತಾನ 3ನೇ ದಿನ 101 ರನ್‌ಗಳಿಂದ ಗೆದ್ದಿತ್ತು.

1 ನೇ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ: ಕ್ರೆಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಟೆಜೆನರ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆನ್ಜಿ, ಕೆಮರ್ ಮೆಕೆಂಜಿ, ಕೆಮರ್ ರೊಚೆರ್, ಜೋಮೆಲ್ ವಾರಿಕನ್

ಇದನ್ನೂ ಓದಿ: India Vs West Indies: ಮೊದಲ ಟೆಸ್ಟ್​ಗೆ ವೆಸ್ಟ್​ ಇಂಡೀಸ್​ನ ತಂಡ ಪ್ರಕಟ.. ಗಾಯಾಳುಗಳ ಸಮಸ್ಯೆಯಿಂದ ಹೊಸಬರಿಗೆ ಮಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.