ಶ್ರೀಲಂಕಾ ತಂಡವನ್ನು ಬಗ್ಗುಬಡಿದು ಏಳನೇ ಬಾರಿಗೆ ಏಷ್ಯಾ ಕಪ್ ಎತ್ತಿಹಿಡಿದ ಭಾರತದ ವನಿತೆಯರು ದಾಖಲೆ ಬರೆದರು. 8 ನೇ ಅವತರಣಿಕೆಯ ಏಷ್ಯಾಕಪ್ನಲ್ಲಿ ಭಾರತ 7 ಬಾರಿ ಪ್ರಶಸ್ತಿ ಜಯಿಸಿದೆ. ಅದರಲ್ಲೂ 5 ನೇ ಸಲ ಶ್ರೀಲಂಕಾವನ್ನು ಮಣಿಸಿರುವುದು ವಿಶೇಷವಾಗಿದೆ.
ಭಾರತದ ಪುರುಷರು ಕೂಡ 7 ಬಾರಿ ಪ್ರಶಸ್ತಿ ಜಯಿಸಿದ್ದಾರೆ. ವನಿತೆಯರೂ ಕೂಡ ಸತತ ಬಾರಿ ಸೇರಿ 7 ಸಲ ಟ್ರೋಫಿ ಗೆದ್ದಿದ್ದಾರೆ. ಇದು ಮಹಿಳಾ ಕ್ರಿಕೆಟ್ನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಫೈನಲ್ ಪಂದ್ಯದ ಗೆಲುವಿನ ಬಳಿಕ ಭಾರತದ ಮಹಿಳಾ ಕ್ರಿಕೆಟಿಗರು ಸಂತಸದಿಂದ ಕುಣಿದಾಡಿದ ವಿಡಿಯೋ ವೈರಲ್ ಆಗಿದೆ.
ಗೆದ್ದ ಖುಷಿಯಲ್ಲಿ ಮ್ಯೂಸಿಕ್ಗೆ ವನಿತೆಯರು ಹೆಜ್ಜೆ ಹಾಕಿದ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಗೆಲುವಿನ ಬಳಿಕ ಸಂಭ್ರಮ ಹೀಗಿರುತ್ತದೆ ಎಂದು ಬರೆದುಕೊಂಡಿದೆ.
-
Post-win vibes, be like 🎉 🙌#TeamIndia | #AsiaCup2022 | #INDvSL pic.twitter.com/LsUG1PxNiO
— BCCI Women (@BCCIWomen) October 15, 2022 " class="align-text-top noRightClick twitterSection" data="
">Post-win vibes, be like 🎉 🙌#TeamIndia | #AsiaCup2022 | #INDvSL pic.twitter.com/LsUG1PxNiO
— BCCI Women (@BCCIWomen) October 15, 2022Post-win vibes, be like 🎉 🙌#TeamIndia | #AsiaCup2022 | #INDvSL pic.twitter.com/LsUG1PxNiO
— BCCI Women (@BCCIWomen) October 15, 2022
ಎಲ್ಲ ಆಟಗಾರ್ತಿಯರು ಸುತ್ತಲೂ ನಿಂತಿದ್ದು, ಟ್ರೋಫಿಯನ್ನು ಮಧ್ಯದಲ್ಲಿ ಇಡಲಾಗಿದೆ. ಟ್ರೋಫಿ ಜಯಿಸಿದ ಗತ್ತಿನಲ್ಲಿ ನಿಂತಿದ್ದು, ತಕ್ಷಣವೇ ಖುಷಿಯಿಂದ ಕೇಕೆ ಹಾಕುತ್ತಾ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿದೆ.
ಇನ್ನು ಶ್ರೀಲಂಕಾ ನೀಡಿದ 65 ರನ್ಗಳ ಸಾಧಾರಣ ಗುರಿಯನ್ನು 8.3 ಓವರ್‌ಗಳಲ್ಲಿ ಭಾರತ ದಾಟಿತು. ಬ್ಯಾಟಿಂಗ್ನಲ್ಲಿ ಮಿಂಚಿದ ಮಂದಾನಾ 51 ರನ್ ಬಾರಿಸಿದರು. ಭಾರತದ ಬೌಲರ್ಗಳಾದ ರೇಣುಕಾ ಸಿಂಗ್ 3 ಓವರ್‌ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಶ್ರೀಲಂಕಾದ ಪತನಕ್ಕೆ ಕಾರಣವಾದರು.
ಓದಿ: ಭಾರತಕ್ಕೆ ಸುಲಭ ತುತ್ತಾದ ಲಂಕಾ.. ಏಳನೇ ಬಾರಿ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತೀಯ ವನಿತೆಯರು