ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಪಂದ್ಯ ನಿನ್ನೆ ಮುತ್ತಿ ನಗರಿ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಟಿ20 ಸರಣಿಯನ್ನು ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡುವ ಅವಕಾಶ ಸ್ಪಲ್ಪದ್ರಲ್ಲೇ ಕೈತಪ್ಪಿ ಹೋಗಿದೆ. ಆದ್ರೆ ಈ ದಾಖಲೆಯನ್ನು ಇದುವರೆಗೆ ಯಾವುದೇ ಭಾರತೀಯ ಬ್ಯಾಟರ್ಗಳು ತಮ್ಮ ಹೆಸರಿನಲ್ಲಿ ಮಾಡಲು ಸಾಧ್ಯವಾಗಿಲ್ಲ.
ವಿರಾಟ್ ಕೊಹ್ಲಿ ಕೈತಪ್ಪಿದ ಅವಕಾಶ.. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 85 ರನ್ ಗಳಿಸಿದ್ದರೆ, ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಅವಕಾಶ ಸ್ವಲ್ಪದರಲ್ಲೇ ಕೈ ತಪ್ಪಿತು. ಇಲ್ಲಿಯವರೆಗೆ ಯಾವುದೇ ಭಾರತೀಯ ಬ್ಯಾಟರ್ ಈ ಶ್ರೇಷ್ಠ ದಾಖಲೆಯನ್ನು ಮಾಡಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅಮೋಘ ಸಾಧನೆಯಾಗಿ ಉಳಿಯುತ್ತಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 63 ರನ್ ಗಳಿಸಿ ಔಟಾದರು. ಹೀಗಾಗಿ ಈ ದಾಖಲೆಯನ್ನು ಮಾಡಲು ವಿರಾಟ್ಗೆ ಇನ್ನು 22 ರನ್ಗಳು ಬೇಕಾಗಿದ್ದು, ಅಭಿಮಾನಿಗಳು ಇನ್ನೊಂದು ಟಿ-20 ಪಂದ್ಯಕ್ಕಾಗಿ ಕಾಯಬೇಕಾಗಿದೆ.
ವಿರಾಟ್ ಕೊಹ್ಲಿ ಇದುವರೆಗೆ 351 ಟಿ20 ಪಂದ್ಯಗಳಲ್ಲಿ 40.12 ಸರಾಸರಿಯಲ್ಲಿ 10978 ರನ್ ಗಳಿಸಿದ್ದಾರೆ. ಇನ್ನು, 22 ರನ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 11000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಮತ್ತು ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಒಟ್ಟಾರೆ T20 ಕ್ರಿಕೆಟ್‌ನಲ್ಲಿ ಇದುವರೆಗೆ ಕ್ರಿಸ್ ಗೇಲ್, ಶೋಯೆಬ್ ಮಲಿಕ್ ಮತ್ತು ಕೀರಾನ್ ಪೊಲಾರ್ಡ್ ಮಾತ್ರ 11000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 463 ಪಂದ್ಯಗಳಲ್ಲಿ 14562 ರನ್
- ಶೋಯೆಬ್ ಮಲಿಕ್ (ಪಾಕಿಸ್ತಾನ) - 481 ಪಂದ್ಯಗಳಲ್ಲಿ 11902 ರನ್
- ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್) - 613 ಪಂದ್ಯಗಳಲ್ಲಿ 11902 ರನ್
- ವಿರಾಟ್ ಕೊಹ್ಲಿ (ಭಾರತ) - 351 ಪಂದ್ಯಗಳಲ್ಲಿ 10915 ರನ್
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 328 ಪಂದ್ಯಗಳಲ್ಲಿ 10870 ರನ್
ಓದಿ: ವಿರಾಟ್, ಸೂರ್ಯಕುಮಾರ್ ಹೋರಾಟಕ್ಕೆ ಒಲಿದ ಸರಣಿ.. ಭಾರತಕ್ಕೆ 6 ವಿಕೆಟ್ ಜಯ