ETV Bharat / sports

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಸ್ಥಾನ್ ರಾಯಲ್ಸ್ ಆಲ್​ರೌಂಡರ್ ತೆವಾಟಿಯಾ - ರಿಧಿ ಪಣ್ಣು ರಾಹುಲ್ ತೆವಾಟಿಯಾ ವಿವಾಹ

ತೆವಾಟಿಯಾ-ರಿಧಿ ವಿವಾಹಕ್ಕೆ ಭಾರತ ತಂಡದ ಆಟಗಾರರಾದ ಯುಜ್ವೇಂದ್ರ ಚಹಲ್​, ರಿಷಭ್ ಪಂತ್, ನಿತೀಶ್ ರಾಣಾ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಹಾಜರಾಗಿದ್ದರು..

Rajasthan Royals all-rounder Rahul Tewatia ties knots with Ridhi Pannu
ರಾಹುಲ್ ತೆವಾಟಿಯಾ ವಿವಾಹ
author img

By

Published : Nov 29, 2021, 10:15 PM IST

ನವದೆಹಲಿ : ಭಾರತ, ರಾಜಸ್ಥಾನ್​ ರಾಯಲ್ಸ್​ ಆಲ್​ರೌಂಡರ್ ರಾಹುಲ್ ತೆವಾಟಿಯಾ ತಮ್ಮ ಗೆಳತಿ ರಿಧಿ ಮಣ್ಣು ಅವರೊಂದಿಗೆ ಸೋಮವಾರ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆವಾಟಿಯಾ-ರಿಧಿ ವಿವಾಹಕ್ಕೆ ಭಾರತ ತಂಡದ ಆಟಗಾರರಾದ ಯುಜ್ವೇಂದ್ರ ಚಹಲ್​, ರಿಷಭ್ ಪಂತ್, ನಿತೀಶ್ ರಾಣಾ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಹಾಜರಾಗಿದ್ದರು.

ಈ ಜೋಡಿ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇಂದು ಇವರ ವಿವಾಗದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟ್​ ಅಭಿಮಾನಿಗಳು ನವದಂಪತಿಗೆ ಶುಭ ಕೋರುತ್ತಿದ್ದಾರೆ.

ರಾಹುಲ್ ತೆವಾಟಿಯಾ ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. 2020ರಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಬೌಲರ್​ ಶೆಲ್ಡಾನ್ ಕಾಟ್ರೆಲ್​ ಓವರ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದಲ್ಲದೇ ರಾತ್ರೋರಾತ್ರಿ ಸ್ಟಾರ್​ ಆಗಿ ಹೊರ ಹೊಮ್ಮಿದ್ದರು.

ಈ ಪ್ರದರ್ಶನದ ನಂತರ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದರೂ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ, ಕೊಹ್ಲಿ, ರೋಹಿತ್​ ಅಂತಹ ಸೀನಿಯರ್ ಆಟಗಾರರ ಕೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ಆತನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಐಪಿಎಲ್​ನಲ್ಲಿ 48 ಪಂದ್ಯಗಳನ್ನಾಡಿರುವ ಅವರು 32 ವಿಕೆಟ್​ ಮತ್ತು 521 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಪ್ರೇಯಸಿಯೊಂದಿಗೆ ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ,ವಿಶ್ವಕಪ್​ ನಂತರ ವಿವಾಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.