ETV Bharat / sports

ಟಿ-20 ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ಜಯ ಸಾಧಿಸಿದ ನಮೀಬಿಯಾ - ನೆದರ್ಲೆಂಡ್ಸ್​ಗೆ ಗೆಲುವು

ವಿಶ್ವಕಪ್​ನಲ್ಲಿ ಸತತ ಎರಡು ಸೋಲು ಕಂಡಿರುವ ನೆದರ್ಲೆಂಡ್ಸ್ ತಂಡದ ಅಭಿಯಾನ ಭಾಗಶಃ ಅಂತ್ಯವಾಯಿತು. ನೆದರ್ಲೆಂಡ್ಸ್ ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ. ನಮೀಬಿಯಾ, ಐರ್ಲೆಂಡ್​ ವಿರುದ್ಧ ಆಡಲಿದ್ದು, ಸೂಪರ್ 12 ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಬೇಕಿದೆ..

T20 world cup
ನಮೀಬಿಯಾಗೆ ಗೆಲುವು
author img

By

Published : Oct 20, 2021, 8:24 PM IST

ಅಬುಧಾಬಿ : ಡೇವಿಡ್​ ವೀಸ್​ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ನೆದೆರ್ಲೆಂಡ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸುವ ಮೂಲಕ ನಮೀಬಿಯಾ ತಂಡ ಟಿ20 ವಿಶ್ವಕಪ್​ ಇತಿಹಾಸದಲ್ಲಿ ತನ್ನ ಮೊದಲ ಜಯ ದಾಖಲಿಸಿದೆ.

ಅಬುಧಾಬಿಯ ಸೇಕ್ ಜಾಯೇದ್​ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಕ್ವಾಲಿಫೈಯರ್​ನಲ್ಲಿ ನೆದರ್ಲೆಂಡ್ಸ್​ ನೀಡಿದ್ದ 165 ರನ್​ಗಳ ಗುರಿಯನ್ನ ನಮೀಬಿಯಾ 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್​ಗೆ ಪದಾರ್ಪಣೆ ಮಾಡಿರುವ ನಮೀಬಿಯಾ ಮೊದಲ ಜಯ ಸಾಧಿಸಿತು. 2019ರಲ್ಲಿ ಚುಟುಕು ಕ್ರಿಕೆಟ್​ಗೆ ಪದಾರ್ಪಣೆ ಮಾಡಿತ್ತು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ಮೂಲದ ಡೇವಿಡ್​ ವೀಸ್​ 40 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 66 ರನ್​ ಗಳಿಸಿ ನಮೀಬಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ಗೆರಾಡ್​ ಎರಾಸ್ಮಸ್​ 22 ಎಸೆತಗಳಲ್ಲಿ 32 ರನ್​, ಸ್ಟೇಫನ್​ ಬಾರ್ಡ್​ 19, ಜೆಜೆ ಸ್ಮಿತ್ ಅಜೆಯ 14 ರನ್​ಗಳಿಸಿದರು.

ನೆದರ್ಲೆಂಡ್ಸ್ ಪರ ಫ್ರೆಡ್​ ಕ್ಲಾಸೆನ್ 4 ಓವರ್​ಗಳಲ್ಲಿ 14ರನ್​ ನೀಡಿ 1ವಿಕೆಟ್ ಪಡೆದರು. ಆದರೆ, ಉಳಿದ ಬೌಲರ್​ಗಳ ಸಾಥ್ ನೀಡದ ಕಾರಣ ನೆದರ್ಲೆಂಡ್ಸ್ ಸೋಲು ಕಂಡಿತು. ನಾಯಕ ಸೀಲರ್ 8ಕ್ಕೆ1, ವಾನ್ ಡರ್ ಗಗ್ಟನ್ 32ಕ್ಕೆ1, ಅಕೆರ್ಮನ್​ 32ಕ್ಕೆ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನೆದರ್ಲೆಂಡ್ಸ್ ತಂಡ​ ಆರಂಭಿಕ ಬ್ಯಾಟರ್​ ಮ್ಯಾಕ್ಸ್ ಒಡೌಡ್(70)​ ಅವರ ಅರ್ಧಶತಕ, ಅಕೆರ್ಮನ್ 35 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡ 164 ರನ್​ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು.

ವಿಶ್ವಕಪ್​ನಲ್ಲಿ ಸತತ ಎರಡು ಸೋಲು ಕಂಡಿರುವ ನೆದರ್ಲೆಂಡ್ಸ್ ತಂಡದ ಅಭಿಯಾನ ಭಾಗಶಃ ಅಂತ್ಯವಾಯಿತು. ನೆದರ್ಲೆಂಡ್ಸ್ ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ. ನಮೀಬಿಯಾ, ಐರ್ಲೆಂಡ್​ ವಿರುದ್ಧ ಆಡಲಿದ್ದು, ಸೂಪರ್ 12 ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಬೇಕಿದೆ.

ಇದನ್ನು ಓದಿ:ವಿಶ್ವಕಪ್ ಅಭ್ಯಾಸ ಪಂದ್ಯ: ಆಸೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಸುಲಭ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.