ದುಬೈ: ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ನ ಸೂಪರ್ 12ನಲ್ಲಿ ಶ್ರೀಲಂಕಾ ತಂಡವನ್ನು 154 ರನ್ಗಳಿಗೆ ನಿಯಂತ್ರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಮೂರನೇ ಓವರ್ನಲ್ಲೇ ಆರಂಭಿಕ ಪತುಂ ನಿಸಾಂಕ(7) ಅವರ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ಗೆ ಜೊತೆಯಾದ ಕುಸಾಲ್ ಪೆರೆರಾ ಮತ್ತು ಅಸಲಂಕಾ 63 ರನ್ಗಳ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು. ಆದರೆ 35 ರನ್ಗಳಿಸಿದ್ದ ಅಸಲಂಕಾ ವಿಕೆಟ್ ಬೀಳುತ್ತಿದ್ದಂತೆ ಲಂಕಾ ಪತನ ಆರಂಭವಾಯಿತು. ಇವರ ಬೆನ್ನಲ್ಲೇ 27 ಎಸೆತಗಳಲ್ಲಿ 35 ರನ್ಗಳಿಸಿದ್ದ ಪೆರೆರಾ ಕೂಡ ಔಟಾದರು.
-
Sri Lanka end up with a score of 154/6.
— T20 World Cup (@T20WorldCup) October 28, 2021 " class="align-text-top noRightClick twitterSection" data="
Will it prove to be enough? 🤔
#T20WorldCup | #AUSvSL | https://t.co/dkIIjDEJLc pic.twitter.com/3qmTCPLdhu
">Sri Lanka end up with a score of 154/6.
— T20 World Cup (@T20WorldCup) October 28, 2021
Will it prove to be enough? 🤔
#T20WorldCup | #AUSvSL | https://t.co/dkIIjDEJLc pic.twitter.com/3qmTCPLdhuSri Lanka end up with a score of 154/6.
— T20 World Cup (@T20WorldCup) October 28, 2021
Will it prove to be enough? 🤔
#T20WorldCup | #AUSvSL | https://t.co/dkIIjDEJLc pic.twitter.com/3qmTCPLdhu
ನಂತರ ಬಂದ ಅವಿಷ್ಕಾ ಫರ್ನಾಂಡೊ ಕೇವಲ 4 ರನ್ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. ಶನಕಾ 19 ಎಸೆತಗಳನ್ನೆದುರಿಸದರೂ ಕೇವಲ 12 ರನ್ಗಳಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಭಾನುಕ ರಾಜಪಕ್ಷೆ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 33 ರನ್ಗಳಿಸಿ 155ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 27ಕ್ಕೆ2, ಆ್ಯಡಂ ಜಂಪಾ 12ಕ್ಕೆ 2 ಮತ್ತು ಕಮ್ಮಿನ್ಸ್ 34ಕ್ಕೆ 2 ವಿಕೆಟ್ ಪಡೆದರು.
ಇದನ್ನು ಓದಿ: ಇದೊಂದು ಕಾರಣಕ್ಕೆ ಡೆಲ್ಲಿ ತಂಡ ಬಿಡಲಿದ್ದಾರೆ ಶ್ರೇಯರ್ ಅಯ್ಯರ್!