ETV Bharat / sports

ಗುಡ್​ನ್ಯೂಸ್​: ಮೈದಾನದಲ್ಲಿ ಕುಳಿತುಕೊಂಡು T-20 ವಿಶ್ವಕಪ್​ ವೀಕ್ಷಣೆಗೆ ಅವಕಾಶ - ಶೇ. 70ರಷ್ಟು ಸಾಮರ್ಥ್ಯ

ಇದೇ ತಿಂಗಳು 17ರಿಂದ ಐಸಿಸಿ ಟಿ-20 ವಿಶ್ವಕಪ್ ಟೂರ್ನಾಮೆಂಟ್ ಆರಂಭಗೊಳ್ಳುತ್ತಿದ್ದು, ಇದರ ವೀಕ್ಷಣೆ ಮಾಡಲು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.

T20 World Cup
T20 World Cup
author img

By

Published : Oct 4, 2021, 2:58 PM IST

ದುಬೈ: ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಅನೇಕ ಕ್ರಿಕೆಟ್​ ಪಂದ್ಯಗಳು ಕ್ರೀಡಾಭಿಮಾನಿಗಳಿಲ್ಲದೇ ನಡೆದು ಹೋಗಿವೆ. ಆದರೆ, ಇದೀಗ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ವೀಕ್ಷಣೆ ಮಾಡಲು ದುಬೈನಲ್ಲಿರುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್​​ನಲ್ಲಿ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಲು ಈಗಾಗಲೇ ಅವಕಾಶ ನೀಡಲಾಗಿದೆ.

ಅದೇ ರೀತಿಯಾಗಿ ವಿಶ್ವಕಪ್​ನ ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಶೇ. 70ರಷ್ಟು ಸಾಮರ್ಥ್ಯದೊಂದಿಗೆ ಪಂದ್ಯ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.

ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಇದಕ್ಕಾಗಿ ಐಸಿಸಿ ಜೊತೆ ಸೇರಿ ಮಹತ್ವದ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿರಿ: ಫಿಫಾ ವರ್ಲ್ಡ್​ ಕಪ್ ಟೂರ್ನಿ: ಅರ್ಹತಾ ಪಂದ್ಯಗಳಿಗೆ ಧಾರವಾಡದ ವೈದ್ಯ ಮೆಡಿಕಲ್ ಆಫಿಸರ್

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಐಸಿಸಿ ಸಿಇಒ, ಕ್ರೀಡಾಭಿಮಾನಿಗಳನ್ನ ಮೈದಾನಕ್ಕೆ ಸ್ವಾಗತ ಮಾಡಲು ನಾವು ಸಜ್ಜಾಗಿದ್ದು, ಇದಕ್ಕಾಗಿ ನಾವು ಭಾರತೀಯ ಕ್ರಿಕೆಟ್ ಮಂಡಳಿಗೆ ವಿಶೇಷ ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ. ಅಕ್ಟೋಬರ್​ 17ರಿಂದ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್​ ಆರಂಭಗೊಳ್ಳಲಿದ್ದು, ಅಕ್ಟೋಬರ್​ 24ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಈ ಸಲದ ವಿಶ್ವಕಪ್​ನಲ್ಲಿ ರೌಂಡ್​ 1ರಗ್ರೂಪ್​ನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ, ಗ್ರೂಪ್ ಬಿ ತಂಡದಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಯಾನಾ (ಪಿಎನ್ ಜಿ) ಮತ್ತು ಓಮನ್ ಇವೆ

ಸೂಪರ್ -12 ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, A-1 ಮತ್ತು B-2

ಗುಂಪು 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, A2 ಮತ್ತು B1 ತಂಡಗಳು ಮುಖಾಮುಖಿಯಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.