ಮುಂಬೈ: ಮುಂಬರುವ ಐಸಿಸಿ ಟಿ - 20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿವೊಂದು ಹೊರಬಿದ್ದಿದ್ದು, ಯುಎಇನಲ್ಲಿ ಅಕ್ಟೋಬರ್ 17ರಿಂದ ಪಂದ್ಯಗಳು ಆರಂಭಗೊಳ್ಳಲಿವೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಐಸಿಸಿ, ಅಥವಾ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ವಿಶ್ವಕಪ್ ಟೂರ್ನಿ ಆರಂಭಗೊಳ್ಳುವುದಕ್ಕೂ ಕೆಲ ದಿನಗಳ ಮುಂಚಿತವಾಗಿ ಐಪಿಎಲ್ನ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿದ್ದು, ಇದರ ಬೆನ್ನಲ್ಲೇ ಚುಟುಕು ವಿಶ್ವಕಪ್ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ. ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್ ಟೂರ್ನಮೆಂಟ್ ಭಾರತದಲ್ಲಿ ನಡೆಯಬೇಕಾಗಿದೆ. ಆದರೆ, ಕೋವಿಡ್ ಅಲೆಯ ಭೀತಿ ಇರುವ ಕಾರಣ ಯುಎಇನಲ್ಲಿ ನಡೆಸಲು ಈಗಾಗಲೇ ಸಜ್ಜಾಗಿದೆ ಎಂದು ತಿಳಿದು ಬಂದಿದೆ.
-
#IPL2021 #T20WorldCup #TeamIndia schedule of t20 world Cup...🔥 pic.twitter.com/pFhyvr3EoM
— Viswam Official (@ViswaBai19) June 26, 2021 " class="align-text-top noRightClick twitterSection" data="
">#IPL2021 #T20WorldCup #TeamIndia schedule of t20 world Cup...🔥 pic.twitter.com/pFhyvr3EoM
— Viswam Official (@ViswaBai19) June 26, 2021#IPL2021 #T20WorldCup #TeamIndia schedule of t20 world Cup...🔥 pic.twitter.com/pFhyvr3EoM
— Viswam Official (@ViswaBai19) June 26, 2021
ಆದರೆ, ವಿದೇಶದಲ್ಲಿ ಟೂರ್ನಮೆಂಟ್ ನಡೆಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಅಂತಿಮ ನಿರ್ಧಾರ ಮಾಡಿಲ್ಲ ಎನ್ನಲಾಗಿದ್ದು, ತನ್ನ ಅಂತಿನ ನಿರ್ಧಾರ ತಿಳಿಸಲು ಐಸಿಸಿ ಜೂನ್ 28ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಇದರ ಮಧ್ಯೆ ವೇಳಾಪಟ್ಟಿಗೆ ಸಂಬಂಧಿಸಿದಂತೆ ಇಂತಹದೊಂದು ಮಹತ್ವದ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿರಿ: ಐಸಿಸಿ ಟಿ-20 ವಿಶ್ವಕಪ್ ಆಯೋಜಿಸಲು ಯುಎಇ ನಮ್ಮ 2ನೇ ಆಯ್ಕೆ : ಬಿಸಿಸಿಐ
ಅಕ್ಟೋಬರ್ 17ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 14ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನು ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯಗಳು ನಡೆಯಲಿವೆ.
ಈ ಸಲದ ಟಿ - 20 ವಿಶ್ವಕಪ್ನಲ್ಲಿ 16 ತಂಡಗಳು ಭಾಗಿಯಾಗುತ್ತಿದ್ದು, ಎರಡು ತಂಡಗಳಲ್ಲಿ ಮ್ಯಾಚ್ ಆಡಿಸಲು ಐಸಿಸಿ ನಿರ್ಧರಿಸಿದೆ. ಶ್ರೀಲಂಕಾ, ಐರ್ಲೆಂಡ್, ಬಾಂಗ್ಲಾದೇಶ, ನೇದರ್ಲ್ಯಾಂಡ್, ಓಮನ್, ಸ್ಕ್ಯಾಟ್ಲ್ಯಾಂಡ್, ನಮೆಬಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಇಂಗ್ಲೆಂಡ್, ಭಾರತ, ದಕ್ಷಿಣ ಆಪ್ರಿಕಾ, ಆಫ್ಘಾನಿಸ್ತಾನ ತಂಡಗಳು ಭಾಗಿಯಾಗುತ್ತಿವೆ.