ETV Bharat / sports

ಪಾಕ್​​ನ ಪ್ರತಿ ಗಲ್ಲಿಯಲ್ಲೂ ಇಂಥವರು ಇದ್ದಾರೆ; ವರುಣ್​ ಚಕ್ರವರ್ತಿ ಅಣಕಿಸಿದ ಪಾಕ್​ ಮಾಜಿ ಕ್ರಿಕೆಟರ್​

ಟೀಂ ಇಂಡಿಯಾ ಮಿಸ್ಟ್ರೀ ಸ್ಪಿನ್ನರ್​ ಎಂದು ಕರೆಯಿಸಿಕೊಂಡಿರುವ ವರುಣ್​​ ಚಕ್ರವರ್ತಿ ಕುರಿತಾಗಿ ಪಾಕ್​​ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​​ ವ್ಯಂಗ್ಯವಾಡಿದ್ದಾರೆ.

Varun Chakaravarthy
Varun Chakaravarthy
author img

By

Published : Oct 27, 2021, 1:47 AM IST

ಕರಾಚಿ: ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದೆ. ಈ ಮೂಲಕ ಅನೇಕ ರೀತಿಯ ಟೀಕೆಗೊಳಗಾಗಿದೆ. ಇದರ ಬೆನ್ನಲ್ಲೇ ಪಾಕ್​​ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​ ಸಲ್ಮಾನ್ ಭಟ್​ ಇದೀಗ ವರುಣ್​ ಚಕ್ರವರ್ತಿ ಕುರಿತು ಲೇವಡಿ ಮಾಡಿದ್ದಾರೆ.

ಯೂಟ್ಯೂಬ್​ ಚಾನಲ್​ನಲ್ಲಿ ಉಭಯ ತಂಡದ ಪಂದ್ಯದ ವಿಶ್ಲೇಷಣೆ ಮಾಡಿರುವ ಸಲ್ಮಾನ್​ ಭಟ್​, ವರುಣ್​ ಚಕ್ರವರ್ತಿ ಕುರಿತು ಮಾತನಾಡಿದ್ದು, ಈ ರೀತಿಯಾಗಿ ಬೌಲಿಂಗ್ ಮಾಡುವವರು ಪಾಕಿಸ್ತಾನದ ಗಲ್ಲಿಗಲ್ಲಿಯಲ್ಲೂ ಸಿಗುತ್ತಾರೆಂದು ಹೇಳಿದ್ದಾರೆ.

ವರುಣ್​ ಚಕ್ರವರ್ತಿ ಮಿಸ್ಟ್ರೀ ಸ್ಪಿನ್ನರ್​ ಆಗಿರಬಹುದು. ಆದರೆ ಪಾಕ್​ ವಿರುದ್ಧದ ಪಂದ್ಯದ ವೇಳೆ ಅವರ ಬೌಲಿಂಗ್​ನಲ್ಲಿ ಯಾವುದೇ ರೀತಿಯ ಅಚ್ಚರಿ ಇರಲಿಲ್ಲ ಎಂದಿರುವ ಸಲ್ಮಾನ್ ಭಟ್​, ಪಾಕಿಸ್ತಾನದ ಗಲ್ಲಿಯಲ್ಲಿ ಮಕ್ಕಳು ಟ್ಯಾಪ್​ ಬಾಲ್​ ಕ್ರಿಕೆಟ್​ ಆಡ್ತಾರೆ. ಈ ರೀತಿಯ ಬೌಲಿಂಗ್​ ಎದುರಿಸುವ ಕಲೆ ಪಾಕ್​ಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.ಇದೇ ವೇಳೆ ವರುಣ್​​ ಚಕ್ರವರ್ತಿಯನ್ನ ಶ್ರೀಲಂಕಾದ ಅಂಜತಾ ಮೆಂಡಿಸ್​ಗೆ ಹೋಲಿಕೆ ಮಾಡಿರುವ ಸಲ್ಮಾನ್ ಭಟ್​, ಆರಂಭದಲ್ಲಿ ಅಂಜತಾ ಮೆಂಡಿಸ್​ ಅನೇಕ ತಂಡಗಳ ತಲೆ ಕೆಡಿಸಿದ್ದರು. ಆದರೆ ಪಾಕ್​ ವಿರುದ್ಧ ಅವರ ಆಟ ನಡೆಯಲಿಲ್ಲ. ಹೀಗಾಗಿ ಅವರನ್ನ ಪಾಕ್​ ವಿರುದ್ಧ ಕಣಕ್ಕಿಳಿಸುವುದನ್ನೇ ಲಂಕಾ ಕೈಬಿಟ್ಟಿತ್ತು ಎಂದಿದ್ದಾರೆ.

ಇದನ್ನೂ ಓದಿರಿ: ಟಿ-20 ವಿಶ್ವಕಪ್​: ನ್ಯೂಜಿಲ್ಯಾಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿ, ಸೇಡು ತೀರಿಸಿಕೊಂಡ ಪಾಕ್​

ಜೊತೆಗೆ ಮುಂದಿನ ಪಂದ್ಯಗಳಲ್ಲಿ ವರುಣ್​ ಚಕ್ರವರ್ತಿಯನ್ನ ಪಾಕ್​ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಸಿದ್ರೆ ಗೆಲುವು ನಮ್ಮದಾಗಲಿದೆ ಎಂದಿದ್ದಾರೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಅನುಭವಿ ಆರ್​.ಅಶ್ವಿನ್​ ಬದಲಿಗೆ ಮಿಸ್ಟ್ರಿ ಸ್ಪಿನ್ನರ್​ ವರುಣ್​ ಚಕ್ರವರ್ತಿಗೆ ಮಣೆ ಹಾಕಲಾಗಿತ್ತು. ಆದರೆ ಯಾವುದೇ ರೀತಿಯ ವಿಕೆಟ್ ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.