ETV Bharat / sports

T-20 ವಿಶ್ವಕಪ್​​ನಲ್ಲಿ ಸೂಪರ್​-12 ಫೈಟ್​​​: ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ - ಆಫ್ರಿಕಾ ಮುಖಾಮುಖಿ

author img

By

Published : Oct 22, 2021, 9:45 PM IST

ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​-12 ಹಂತದ ಮೊದಲ ಪಂದ್ಯದಲ್ಲಿ ಬಲಿಷ್ಠ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗುತ್ತಿವೆ.

T20 World Cup
T20 World Cup

ಅಬುಧಾಬಿ: ಐಸಿಸಿ ಟಿ- 20 ಕ್ರಿಕೆಟ್​​ನಲ್ಲಿ ಇದೀಗ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಳೆಯಿಂದ ಸೂಪರ್​​-12 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿವೆ. ಅಬುಧಾಬಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಆರಂಭಗೊಳ್ಳಲಿದೆ.

ಎರಡೂ ತಂಡಗಳು ಜಯ ದಾಖಲು ಮಾಡುವ ಮೂಲಕ ಚುಟುಕು ವಿಶ್ವಕಪ್​​ನಲ್ಲಿ ಶುಭಾರಂಭ ಪಡೆದುಕೊಳ್ಳುವ ಕನವರಿಕೆಯಲ್ಲಿವೆ. ಆಸ್ಟ್ರೇಲಿಯಾ ತಂಡಕ್ಕೆ ಹೋಲಿಕೆ ಮಾಡಿದಾಗ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದ್ದು, ಕಾಂಗರೂ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ಎದ್ದು ಕಾಣುತ್ತಿದೆ. ವಿಶ್ವಕಪ್​ ಆರಂಭಗೊಳ್ಳುವುದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಟಿ-20ಯಲ್ಲಿ ವೆಸ್ಟ್​ ಇಂಡೀಸ್​, ಬಾಂಗ್ಲಾ ವಿರುದ್ಧ ಸೋಲು ಕಂಡಿದೆ.

ಆದರೆ ದಕ್ಷಿಣ ಆಫ್ರಿಕಾ ಐರ್ಲೆಂಡ್​, ಶ್ರೀಲಂಕಾ ಹಾಗೂ ಹಾಲಿ ಚಾಂಪಿಯನ್​ ವೆಸ್ಟ್​ ಇಂಡೀಸ್​ ವಿರುದ್ಧ ಅಮೋಘ ಜಯ ಸಾಧಿಸಿ, ಗೆಲುವು ಸಾಧಿಸುವ ಉತ್ಸುಕದಲ್ಲಿದೆ.

ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಾರ್ನರ್​ ಹಾಗೂ ಶಸ್ತ್ರಚಿಕಿತ್ಸೆಗೊಳಗಾಗಿರುವ ಫಿಂಚ್​​ ಹೆಚ್ಚಿನ ಪಂದ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಗ್ಲೆನ್​ ಮ್ಯಾಕ್ಸ್​​ವೆಲ್​​ ಮತ್ತು ಮಿಚೆಲ್​ ಮಾರ್ಷಲ್, ಆ್ಯಷ್ಟನ್​​ ಆಗರ್​, ಆ್ಯಡಂ ಜಂಪಾ, ಹ್ಯಾಜಲ್​ವುಡ್​, ರಿಚರ್ಡ್ಸನ್​​​ ಉತ್ತಮ ಫಾರ್ಮ್​​ನಲ್ಲಿರುವುದು ತಂಡಕ್ಕೆ ಫ್ಲಸ್ ಪಾಯಿಂಟ್​ ಆಗಲಿದೆ. ಬೌಲಿಂಗ್ ವಿಭಾಗ ಸಮರ್ಥವಾಗಿದ್ದು, ತಂಡಕ್ಕೆ ಆಧಾರ ಸ್ತಂಭವಾಗಬಹುದು.

ಇನ್ನು ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ದಾಖಲು ಮಾಡಿದೆ. ತಂಡದ ಕ್ವಿಂಟನ್ ಡಿಕಾಕ್​, ಹೆಂಡ್ರಿಕ್ಸ್​​, ಮಾರ್ಕ್ರಮ್ ಸೇರಿದಂತೆ ಅನೇಕರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲರ್​ಗಳಾದ ಶಮ್ಸಿ, ಕಗಿಸೋ ರಬಾಡಾ, ನಾರ್ಟ್ಜೆ, ಲುಂಗಿ ನಿಗ್ಡಿ ಕೂಡ ಎದುರಾಳಿ ತಂಡಕ್ಕೆ ಮಾರಕವಾಗಿ ಕಾಣಬಲ್ಲರು.

ಇದನ್ನೂ ಓದಿರಿ: ಅಮಿತ್​​ ಶಾ ಬರ್ತಡೇಗೆ ವಿಶ್ ಮಾಡಿ ಟ್ರೋಲ್​ಗೆ ಗುರಿಯಾದ ಸಾರಾ​.. NCB ರೈಡ್​​ ಆಗಲ್ಲ ಬಿಡಿ ಎಂದು ಕಾಲೆಳೆದ ನೆಟ್ಟಿಗರು!

ಟಿ-20ಯಲ್ಲಿ ಉಭಯ ತಂಡ ಮುಖಾಮುಖಿ

ಟಿ-20 ವಿಶ್ವಕಪ್​ನಲ್ಲಿ ಉಭಯ ತಂಡಗಳು 22 ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾ 13 ಪಂದ್ಯಗಳಲ್ಲಿ ಹಾಗೂ ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಡೆವಿಡ್ ವಾರ್ನರ್​ ಅದ್ಭುತ ಪ್ರದರ್ಶನ ನೀಡಿದ್ದು, ನಾಳೆಯ ಪಂದ್ಯದಲ್ಲಿ ಮಿಂಚು ಹರಿಸುವ ಸಾಧ್ಯತೆ ಇದೆ.

ಉಭಯ ತಂಡಗಳು ಇಂತಿವೆ

ಆಸ್ಟ್ರೇಲಿಯಾ: ಆ್ಯರನ್​ ಫಿಂಚ್​(ಕ್ಯಾಪ್ಟನ್​), ಆ್ಯಷ್ಟನ್​​ ಆಗರ್, ಪ್ಯಾಟ್ ಕಮಿನ್ಸ್​​, ಜೋಶ್​ ಹ್ಯಾಜಲ್​ವುಡ್​, ಜೋಶ್​ ಇಂಗ್ಲಿಸ್​, ಮಿಷಲ್ ಮಾರ್ಷ್​, ಗ್ಲೆನ್​ ಮ್ಯಾಕ್ಸ್​ವೆಲ್​, ಕೇನ್​ ರಿಚರ್ಡ್ಸನ್​, ಸ್ಟಿವ್ ಸ್ಮಿತ್, ಮಿಷೆಲ್​ ಸ್ಟಾರ್ಕ್​, ಮಾರ್ಕಸ್​ ಸ್ಟೋಯಿನಿಸ್​, ಮಿಷೆಲ್​ ಸ್ಟೆಪ್ಸನ್​, ಮ್ಯಾಥ್ಯೂ ವೇಡ್​, ಡೇವಿಡ್​ ವಾರ್ನರ್​, ಆ್ಯಡಂ ಜಂಪಾ

ದಕ್ಷಿಣ ಆಫ್ರಿಕಾ: ತೆಂಬಾ ಬವುಮ(ಕ್ಯಾಪ್ಟನ್​), ಕೇಶವ್ ಮಹಾರಾಜ್​, ಕ್ವಿಂಟನ್ ಡಿಕಾಕ್​(ವಿ,ಕೀ)ಜಾನ್​ ಫಾರ್ಟ್ಯೂನ್​, ರೀಜಾ ಹೆಂಡ್ರಿಕ್ಸ್​​, ಹೆನ್ರಿಕ್​ ಕ್ಲಾಸೆನ್, ಏಡನ್​ ಮರ್ಕರಮ್​, ಡೇವಿಡ್​​ ಮಿಲ್ಲರ್​, ಲುಂಗಿ ನಿಗ್ಡಿ, ಆನ್ರಿಚ್​, ಕಗಿಸೋ ರಬಾಡಾ, ಶಮ್ಸಿ, ಡರ್ ಡುಸೆನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.