ETV Bharat / sports

ಟಿ20 ವಿಶ್ವಕಪ್​ ಫೈನಲ್​ಗೆ ಪಾಕಿಸ್ತಾನ..ಕುಣಿದಾಡಿದ ಮಾಜಿ ಕ್ರಿಕೆಟರ್​ಗಳು: ವಿಡಿಯೋ - ಪಾಕಿಸ್ತಾನ ಫೈನಲ್​ ಪ್ರವೇಶ

ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದ ಪಾಕಿಸ್ತಾನ ಫೈನಲ್​ ತಲುಪಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವಿಮರ್ಶಕರಾಗಿ ಬಂದಿದ್ದ ಮಾಜಿ ಆಟಗಾರರು ಟಿವಿ ಪ್ಯಾನಲ್​ನಲ್ಲಿಯೇ ಡ್ಯಾನ್ಸ್​ ಮಾಡಿದ್ದಾರೆ.

pakistan-legends-dance-at-tv-panel
ಕುಣಿದಾಡಿದ ಮಾಜಿ ಕ್ರಿಕೆಟರ್​ಗಳು
author img

By

Published : Nov 9, 2022, 9:45 PM IST

ಸಿಡ್ನಿ(ಆಸ್ಟ್ರೇಲಿಯಾ): ಐಸಿಸಿ ಟಿ 20 ವಿಶ್ವಕಪ್​ನಲ್ಲಿ ಪಾಕಿಸ್ತಾನ, ನ್ಯೂಜಿಲ್ಯಾಂಡ್ ತಂಡವನ್ನು 7 ವಿಕೆಟ್​​ಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದೆ. ಇದು ಪಾಕ್​ ಅಭಿಮಾನಿಗಳು ಮತ್ತು ಮಾಜಿ ಆಟಗಾರರ ಸಂತಸಕ್ಕೆ ಕಾರಣವಾಗಿದ್ದು, ಪ್ಯಾನಲ್​ ಡಿಸ್ಕಷ​ನ್​ನಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ, ಕಿವೀಸ್​ ತಂಡಕ್ಕೆ ದುಸ್ವಪ್ನವಾಗಿ ಕಾಡಿ 4 ನೇ ಬಾರಿಗೆ ನಾಲ್ಕರ ಘಟ್ಟದಲ್ಲಿ ಸೋಲುಣಿಸಿತು. ಆರಂಭಿಕ ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನ ಪುಟಿದೆದ್ದು ಈಗ ಕ್ರಿಕೆಟ್​ ಲೋಕವೇ ಅಚ್ಚರಿಪಡುವಂತೆ ಫೈನಲ್​ಗೆ ತಲುಪಿದೆ.

ಸೆಮಿಫೈನಲ್​ ಪಂದ್ಯದಲ್ಲಿ ವಿಮರ್ಶಕರಾಗಿ ಕ್ರೀಡಾ ಚಾನಲ್​ನಲ್ಲಿ ಚರ್ಚೆ ನಡೆಸುತ್ತಿದ್ದ ಮಾಜಿ ಆಟಗಾರರಾದ ವಾಸೀಮ್ ಅಕ್ರಮ್, ಶೋಯೆಬ್ ಮಲಿಕ್, ಮಿಸ್ಬಾ ಉಲ್ ಹಕ್ ಮತ್ತು ವಕಾರ್ ಯೂನಿಸ್ ಕಿವೀಸ್ ವಿರುದ್ಧ ಜಯಗಳಿಸಿದ ಸಂಭ್ರಮದಲ್ಲಿ ಪ್ಯಾನಲ್​ನಲ್ಲಿಯೇ ಡ್ಯಾನ್ಸ್​ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಇವರಷ್ಟೇ ಅಲ್ಲ, "ಪಾಕಿಸ್ತಾನದ ಪ್ರತಿ ಪ್ರಜೆಯ ಸಂತಸ ಹೀಗೇ ಇದೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಪಾಕಿಸ್ತಾನ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ಬಳಿಕ 3 ಬಾರಿ ಫೈನಲ್​ ತಲುಪಿದ ಎರಡನೇ ತಂಡ ಎಂಬ ಖ್ಯಾತಿ ಗಳಿಸಿದೆ.

ನಾಳೆ ಅಡಿಲೇಡ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಎರಡನೇ ಸೆಮಿಫೈನಲ್​ ಪಂದ್ಯ ನಡೆಯಲಿದ್ದು, ಗೆದ್ದ ತಂಡ ನವೆಂಬರ್​ 13 ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.

ಓದಿ: ಸೆಮಿಫೈನಲ್​ನಲ್ಲಿ ಪರದಾಡಿದ ಕಿವೀಸ್​.. ಪಾಕ್​ಗೆ 153 ರನ್​ಗಳ ಸಾಧಾರಣ ಗುರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.