ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಹಂತದ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಆಫ್ಘನ್ ತಂಡ ದಾಖಲೆಯ 130ರನ್ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಟಿ-20 ಇತಿಹಾಸದಲ್ಲಿ ಅತಿ ದೊಡ್ಡ ಜಯ ಸಾಧಿಸಿರುವ ಸಾಧನೆ ಮಾಡಿದೆ.
-
Afghanistan with a comprehensive victory 🔥 #T20WorldCup | #AFGvSCO | https://t.co/qgmElzPLDG pic.twitter.com/ltJW8atadJ
— T20 World Cup (@T20WorldCup) October 25, 2021 " class="align-text-top noRightClick twitterSection" data="
">Afghanistan with a comprehensive victory 🔥 #T20WorldCup | #AFGvSCO | https://t.co/qgmElzPLDG pic.twitter.com/ltJW8atadJ
— T20 World Cup (@T20WorldCup) October 25, 2021Afghanistan with a comprehensive victory 🔥 #T20WorldCup | #AFGvSCO | https://t.co/qgmElzPLDG pic.twitter.com/ltJW8atadJ
— T20 World Cup (@T20WorldCup) October 25, 2021
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ ದಾಖಲೆಯ 190ರನ್ಗಳಿಕೆ ಮಾಡಿತು. ತಂಡದ ಪರ ಆರಂಭಿಕರಾದ ಹಜರುತುಲ್ಲಾ 44 ರನ್ ಹಾಗೂ ಮಿಹಮ್ಮದ್ ಸಹ್ಜಾದ್ 22ರನ್ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಗುರ್ಬಾಜ್ ಸ್ಪೋಟಕ 46ರನ್ಗಳಿಕೆ ಮಾಡಿದ್ರೆ, ನಜಿಬುಲ್ಲಾ 59ರನ್ಗಳ ಕಾಣಿಕೆ ನೀಡಿದರು. ಕ್ಯಾಪ್ಟನ್ ನಬಿ ಕೂಡ 4 ಎಸೆತಗಳಲ್ಲಿ 11ರನ್ಗಳಿಕೆ ಮಾಡಿದರು.
191ರನ್ಗಳ ಗುರಿ ಬೆನ್ನತ್ತಿದ್ದ ಸ್ಕಾಟ್ಲೆಂಡ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಜಾರ್ಜ್ 25ರನ್, ಕೈಲಿ 10ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದಾದ ಬಳಿ ಬಂದ ನಾಲ್ವರು ಬ್ಯಾಟರ್ಗಳು ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿಲ್ಲ. ಕ್ಲೂಮಾ, ರಿಚಿ, ಮ್ಯಾಥಿವ್ ಹಾಗೂ ಮಿಚೆಲ್ ಶೂನ್ಯ ಸುತ್ತಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರಿಸ್ 12ರನ್ಗಳಿಸಿದರೆ, ಉಳಿದಂತೆ ಮಾರ್ಕ್ 1ರನ್, ಜೋಶ್ 4, ಶರೀಫ್ 3ರನ್ಗಳಿಕೆ ಮಾಡಿತು. ತಂಡ ಕೊನೆಯದಾಗಿ 10.2 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 60ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.
ಟಿ-20 ಕ್ರಿಕೆಟ್ನಲ್ಲಿ ಅತಿ ದೊಡ್ಡ ಗೆಲುವು
ಆಫ್ಘಾನಿಸ್ತಾನ ಟಿ-20 ಕ್ರಿಕೆಟ್ನಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದೆ. ಈ ಹಿಂದೆ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 2007ರಲ್ಲಿ 172ರನ್ಗಳ ಅಂತರದ ಜಯ ದಾಖಲು ಮಾಡಿತ್ತು. ಇದಾದ ಬಳಿಕ ಇಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 130ರನ್ಗಳ ಜಯ ಸಾಧಿಸಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ(2009)ತಂಡ ಸ್ಕಾಟ್ಲೆಂಡ್ ವಿರುದ್ಧ 130ರನ್ಗಳ ಗೆಲುವು ದಾಖಲು ಮಾಡಿತು.
ಅಫ್ಘಾನಿಸ್ತಾನದ ಪರ ಮುಜ್ಬೀರ್ ರಹಮಾನ್ 5 ವಿಕೆಟ್, ರಾಶೀದ್ ಖಾನ್ 4 ವಿಕೆಟ್ ಪಡೆದು ಮಿಂಚಿದ್ರೆ ಹಕ್ 1 ವಿಕೆಟ್ ಕಬಳಿಸಿದರು. ಆಫ್ಘಾನ್ ತಂಡದ ಮುಜ್ಬಿರ್ 5 ವಿಕೆಟ್ ಪಡೆದು ಮಿಂಚಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.