ದುಬೈ : ಭಾರತದ ವಿರುದ್ಧ ಶಾಹೀನ್ ಅಫ್ರಿದಿ ಬೌಲಿಂಗ್ ಮಾಡಿದ ರೀತಿಯಲ್ಲಿ ಎಡಗೈ ಬೌಲರ್ ಆಗಿರುವ ತಾವೂ ಕೂಡ ಕೊಹ್ಲಿ ಪಡೆಯನ್ನು ಕಾಡಲು ಸಿದ್ಧರಾಗಿರುವುದಾಗಿ ನ್ಯೂಜಿಲ್ಯಾಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.
ಭಾನುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೂಪರ್ 12ನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯ ಒಂದು ರೀತಿ ಎರಡೂ ತಂಡಗಳಿಗೂ ಕ್ವಾರ್ಟರ್ ಫೈನಲ್ ಪಂದ್ಯವಾಗಲಿದೆ.
ಗೆದ್ದ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಎರಡೂ ತಂಡಗಳೂ ತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲುಂಡಿವೆ.
ಇದನ್ನು ಓದಿ:ಟಿಕೆಟ್ ಇಲ್ಲದೇ ಕ್ರೀಡಾಂಗಣದೊಳಗೆ ಸಾವಿರಾರು ಪ್ರೇಕ್ಷಕರ ಪ್ರವೇಶ: ತನಿಖೆಗೆ ಸೂಚಿಸಿದ ಐಸಿಸಿ
ಶಾಹೀನ್ ಅಫ್ರಿದಿ ಮೊದಲ ಪಂದ್ಯದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಅವರನ್ನು ಪವರ್ ಪ್ಲೇ ಓವರ್ನಲ್ಲೇ ಪೆವಿಲಿಯನ್ಗಟ್ಟಿದ್ದರು. ಮತ್ತೆ ಕಮ್ಬ್ಯಾಕ್ ಮಾಡಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಭಾರತಕ್ಕೆ ಮರ್ಮಾಘಾತ ನೀಡಿದ್ದರು.
ಇದೀಗ ಎಡಗೈ ಸೀಮರ್ ಆಗಿರುವ ಬೌಲ್ಟ್ ಕೂಡ ಅಫ್ರಿದಿ ಅಂದು ಭಾರತದ ವಿರುದ್ಧ ನೀಡಿದ ಪ್ರದರ್ಶನವನ್ನು ನೀಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಇದು ನಾನು ಯಾವ ಹಂತದಲ್ಲಿ ಚೆಂಡನ್ನು ಪಡೆಯಲಿದ್ದೇನೆ ಎನ್ನುವುದರ ಮೇಲೆ ಎಲ್ಲಾ ನಿರ್ಧರಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಯಾವ ಬೌಲರ್ಗಳು ಯಾವ ಹಂತದಲ್ಲಿ ಬೌಲಿಂಗ್ ಮಾಡುತ್ತಾರೆ ಎನ್ನುವ ಯೋಜನೆ ಬಗ್ಗೆ ನನಗೆ ಖಚಿತವಿಲ್ಲ.
ಆದರೆ, ಭಾರತದ ವಿರುದ್ಧ ಶಾಹೀನ್ ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಆದರೆ, ಭಾರತ ತಂಡದಲ್ಲಿ ಉತ್ತಮ ಗುಣಮಟ್ಟದ ಬೌಲರ್ಗಳಿದ್ದಾರೆ. ಹಾಗಾಗಿ, ಬೇಗ ವಿಕೆಟ್ ಪಡೆಯುವುದರ ಕಡೆಗೆ ನಮ್ಮ ಗಮನವಿದೆ.
ಆದ್ದರಿಂದ ನಾವು ಅವರಿಗೆ ಎಲ್ಲಿ ಚೆಂಡನ್ನು ಹಾಕಲು ಪ್ರಯತ್ನಿಸುತ್ತಿದ್ದೇವೆ ಎನ್ನುವುದರ ಕುರಿತು ನಮಗೆ ನಿಖರತೆಯಿರಬೇಕು. ಆಶಾದಾಯಕವಾಗಿ ಅಲ್ಲಿ ಸ್ವಲ್ಪ ಸ್ವಿಂಗ್ ಇರುವುದರಿಂದ ಶಾಹೀನ್ ಅಂದು ಭಾರತದ ವಿರುದ್ಧ ಮಾಡಿದ್ದನ್ನ ನಾನು ಪ್ರತಿಬಿಂಬಿಸಲಬಲ್ಲೆ ಎಂದು ಶನಿವಾರ ನಡೆದ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಟಿ-20 ವಿಶ್ವಕಪ್: ಮಿಂಚಿದ ಆಸೀಫ್ ಅಲಿ... ಆಫ್ಘಾನ್ ವಿರುದ್ಧ ಪಾಕ್ಗೆ 5 ವಿಕೆಟ್ಗಳ ಜಯ