ETV Bharat / sports

ಹುಟ್ಟೂರಿನಲ್ಲಿ ಎಲ್ಲ ಸೌಲಭ್ಯವುಳ್ಳ ಕ್ರಿಕೆಟ್​ ಮೈದಾನ ನಿರ್ಮಿಸಿದ ಟಿ.ನಟರಾಜನ್​! - ಕ್ರಿಕೆಟ್ ಮೈದಾನ ನಿರ್ಮಿಸಿದ ನಟರಾಜನ್

ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್​​ ಈ ಕ್ರಿಕೆಟ್​ ಮೈದಾನವನ್ನು ನಿರ್ಮಿಸಿದ್ದಾರೆ. 2020ರ ಐಪಿಎಲ್​ನಲ್ಲಿ ತಮ್ಮ ಕರಾರುವಕ್​​​​ ಯಾರ್ಕರ್​ ದಾಳಿಯಿಂದ ದೇಶದ ಮನೆಮಾತಾಗಿದ್ದ ನಟರಾಜನ್​ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನಿರೀಕ್ಷಿತವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದು ಮೂರೂ ಮಾದರಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು.

T Natarajan announces setting up a Cricket Ground in his village
ಟಿ ನಟರಾಜನ್ ಕ್ರಿಕೆಟ್ ಮೈದಾನ
author img

By

Published : Dec 15, 2021, 7:43 PM IST

ಸೇಲಂ(ತಮಿಳುನಾಡು): ಕಳೆದ ವರ್ಷ ಅನಿರೀಕ್ಷಿತವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡಕ್ಕ ಪದಾರ್ಪಣೆ ಮಾಡಿದ್ದ ಎಡಗೈ ವೇಗಿ ಟಿ. ನಟರಾಜನ್​​ ತಮ್ಮ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಒಂದು ಸುಸಜ್ಜಿತ ಕ್ರಿಕೆಟ್​ ಮೈದಾನ ನಿರ್ಮಿಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್​​ ಈ ಕ್ರಿಕೆಟ್​ ಮೈದಾನ ನಿರ್ಮಿಸಿದ್ದಾರೆ. 2020ರ ಐಪಿಎಲ್​ನಲ್ಲಿ ತಮ್ಮ ಕರಾರುವಕ್​​ ಯಾರ್ಕರ್​ ದಾಳಿಯಿಂದ ದೇಶದ ಮನೆ ಮಾತಾಗಿದ್ದ ನಟರಾಜನ್​ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನಿರೀಕ್ಷಿತವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದು ಮೂರೂ ಮಾದರಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಗಾಯದ ಕಾರಣ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ.

  • Happy to Announce that am setting up a new cricket ground with all the facilities in my village, Will be named as *NATARAJAN CRICKET GROUND(NCG)❤️
    * #DreamsDoComeTrue🎈Last year December I Made my debut for India, This year (December) am setting up a cricket ground💥❤️ #ThankGod pic.twitter.com/OdCO7AeEsZ

    — Natarajan (@Natarajan_91) December 15, 2021 " class="align-text-top noRightClick twitterSection" data=" ">

ಇನ್ನು ಬುಧವಾರ ತಮ್ಮ ಊರಿನಲ್ಲಿ ಮೈದಾನ ನಿರ್ಮಿಸಿರುವ ವಿಷಯವನ್ನು ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ." ನನ್ನ ಹಳ್ಳಿಯಲ್ಲಿ ಎಲ್ಲ ರೀತಿಯ ಸೌಲಭ್ಯವುಳ್ಳ ಹೊಸ ಕ್ರಿಕೆಟ್​ ಮೈದಾನವನ್ನು ನಿರ್ಮಿಸಿದ್ದೇನೆಂದು ಹೇಳುವುದಕ್ಕೆ ನನಗೆ ತುಂಬಾ ಖುಷಿಯಿದೆ. ಈ ಮೈದಾನಕ್ಕೆ ನಟರಾಜನ್​ ಕ್ರಿಕೆಟ್​ ಗ್ರೌಂಡ್​(NCG) ಎಂದು ನಾಮಕರಣ ಮಾಡಿದ್ದೇನೆ. ಕನಸು ನನಸಾಗಿದೆ. ಕಳೆದ ವರ್ಷ ಡಿಸೆಂಬರ್​ 1ರಂದು ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಈ ವರ್ಷ ಕ್ರಿಕೆಟ್​ ಮೈದಾನವನ್ನು ನಿರ್ಮಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ನಟರಾಜನ್​ 2020ರ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ 16 ವಿಕೆಟ್​ ಪಡೆದ ನಂತರ ಭಾರತದಾದ್ಯಂತ ಹೆಸರಾಗಿದ್ದರು.

ಇದನ್ನೂ ಓದಿ:ಮಹಿಳೆಯರ ಏಕದಿನ ವಿಶ್ವಕಪ್: ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.