ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ತನ್ನ ಅಮೋಘ ಆಟವನ್ನು ಮುಂದುವರಿಸಿರುವ ಕರ್ನಾಟಕ ತಂಡ ಇಂದು ನಡೆದ ಸೆಮಿಫೈನಲ್ನಲ್ಲಿ ವಿದರ್ಭವನ್ನು 4 ರನ್ಗಳಿಂದ ಮಣಿಸಿ 4 ವರ್ಷಗಳಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ನವದೆಹಲಿಯ ಅರುಣ್ ಜೇಟ್ಲೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ಗಳಿಸಿತ್ತು. ಆರಂಭಿಕ ರೋಹನ್ ಕಡಮ್ 56 ಎಸೆತಗಳಲ್ಲಿ 7 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಹಿತ 87 ರನ್, ನಾಯಕ ಮನೀಶ್ ಪಾಂಡೆ 42 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 54 ಮತ್ತು ಅಭಿನವ್ ಮನೋಹರ್ 23 ಎಸೆತಗಳಲ್ಲಿ 27 ರನ್ಗಳಿಸಿದರು.
-
WHAT. A. WIN! 👏 👏
— BCCI Domestic (@BCCIdomestic) November 20, 2021 " class="align-text-top noRightClick twitterSection" data="
The @im_manishpandey-led Karnataka beat Vidarbha by 4 runs & seal a place in the #SyedMushtaqAliT20 #Final. 👍 👍 #KARvVID #SF2 pic.twitter.com/RRVA9oaM1g
">WHAT. A. WIN! 👏 👏
— BCCI Domestic (@BCCIdomestic) November 20, 2021
The @im_manishpandey-led Karnataka beat Vidarbha by 4 runs & seal a place in the #SyedMushtaqAliT20 #Final. 👍 👍 #KARvVID #SF2 pic.twitter.com/RRVA9oaM1gWHAT. A. WIN! 👏 👏
— BCCI Domestic (@BCCIdomestic) November 20, 2021
The @im_manishpandey-led Karnataka beat Vidarbha by 4 runs & seal a place in the #SyedMushtaqAliT20 #Final. 👍 👍 #KARvVID #SF2 pic.twitter.com/RRVA9oaM1g
ವಿದರ್ಭ ಪರ ದರ್ಶನ ನಾಲ್ಕಂಡೆ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಲಲಿತ್ ಎಂ ಯಾದವ್ 36ಕ್ಕೆ2, ಯಶ್ ಠಾಕೂರ್ 35ಕ್ಕೆ 1 ವಿಕೆಟ್ ಪಡೆದರು.
177 ರನ್ಗಳ ಗುರಿ ಬೆನ್ನಟ್ಟಿದ ವಿದರ್ಭ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಹೊರೆತಾಗಿಯೂ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್ಗಳಿಸಲಷ್ಟೇ ಶಕ್ತವಾಯಿತು.
ಅಥರ್ವ ತೈದೆ 32, ಗಣೇಶ್ ಸತೀಶ್ 31, ಅಕ್ಷಯ್ ವಾಡ್ಕರ್ 15, ಶುಭಮ್ ದುಬೆ 24, ಅಪೂರ್ವ ವಾಂಖೆಡೆ 27 ಮತ್ತು ಅಕ್ಷಯ್ ಕರ್ನೇವರ್ 22 ರನ್ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರಾದೂ ಗಡಿದಾಟಿಸುವಲ್ಲಿ ವಿಫಲರಾದರು.
ಕರ್ನಾಟಕ ಪರ ಕೆಸಿ ಕಾರಿಯಪ್ಪ 27 ರನ್ ನೀಡಿ 2 ವಿಕೆಟ್ ಪಡೆದರೆ, ದರ್ಶನ್ ಎಂಬಿ 39ಕ್ಕೆ1, ವಿದ್ಯಾದರ್ ಪಾಟೀಲ್ 29ಕ್ಕೆ1, ಸುಚೀತ್ 34ಕ್ಕೆ1 ಮತ್ತು ಕರುಣ್ ನಾಯರ್ 10ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಮೂರನೇ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಫೈನಲ್ ತಲುಪಿತು. ಸೋಮವಾರ ನಡೆಯಲಿರುವ ಫೈನಲ್ನಲ್ಲಿ ಹಾಲಿ ಚಾಂಪಿಯನ್ ತಮಿಳುನಾಡಿನ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ. 2019ರ ಆವೃತ್ತಿಯಲ್ಲೂ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದು, ರಾಜ್ಯ ತಂಡ 1 ರನ್ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು. ಸೋಮವಾರ ಯಾವುದೇ ತಂಡ ಗೆದ್ದರೂ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದನ್ನು ಓದಿ:ನಾಯಕ, ಉಪ ನಾಯಕನ ಸ್ಫೋಟಕ ಆಟಕ್ಕೆ ಒಲಿದ ಗೆಲುವು ; ಕಿವೀಸ್ ವಿರುದ್ಧ ಟಿ-20 ಸರಣಿ ಗೆದ್ದ ಟೀಂ ಇಂಡಿಯಾ