ETV Bharat / sports

ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತದ ಬ್ಯಾಟರ್​ ಸೂರ್ಯಕುಮಾರ್​ ಯಾದವ್​

ಗಾಯಗೊಂಡಿರುವ ಭಾರತ ತಂಡದ ಕ್ರಿಕೆಟಿಗ ಸೂರ್ಯಕುಮಾರ್​ ಯಾದವ್​, ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ.

ಸೂರ್ಯಕುಮಾರ್​ ಯಾದವ್​
ಸೂರ್ಯಕುಮಾರ್​ ಯಾದವ್​
author img

By ETV Bharat Karnataka Team

Published : Jan 18, 2024, 7:35 PM IST

ಮ್ಯೂನಿಚ್ (ಜರ್ಮನಿ): ಗಾಯಗೊಂಡು ತಿಂಗಳಿನಿಂದ ಕ್ರಿಕೆಟ್​​ ಮೈದಾನದಿಂದ ದೂರ ಉಳಿದಿರುವ ಭಾರತ ತಂಡದ ಅಗ್ರಕ್ರಮಾಂಕದ ಟಿ20 ಬ್ಯಾಟರ್​ ಸೂರ್ಯಕುಮಾರ್​ ಯಾದವ್​, ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಾದದ ಗಾಯಕ್ಕೆ ತುತ್ತಾಗಿರುವ ಭಾರತ ಕ್ರಿಕೆಟಿಗ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಈಚೆಗೆ ತೆರಳಿದ್ದರು. ಅದರಂತೆ ಜನವರಿ 17 ರಂದು ಮ್ಯೂನಿಚ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಪತ್ನಿ ದೇವಿಶಾ ಅವರೊಂದಿಗೆ ಸದ್ಯ ಅವರು ಜರ್ಮನಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಫೋಟೋ ಸಮೇತ ಮಾಹಿತಿ ಖಚಿತಪಡಿಸಿದ್ದಾರೆ.

  • Surgery done✅

    I want to thank everyone for their concerns and well wishes for my health, and I am happy to tell you all that I will be back very soon 💪 pic.twitter.com/fB1faLIiYT

    — Surya Kumar Yadav (@surya_14kumar) January 17, 2024 " class="align-text-top noRightClick twitterSection" data=" ">

"ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನನ್ನ ಆರೋಗ್ಯದ ಬಗ್ಗೆ ಅವರ ಕಾಳಜಿ ವಹಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಶಸ್ತ್ರಚಿಕಿತ್ಸೆ ಮುಗಿದಿದೆ. ಶೀಘ್ರವೇ ಮೈದಾನಕ್ಕೆ ಹಿಂತಿರುಗುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ 56 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದ ನಂತರ ಫೀಲ್ಡಿಂಗ್ ಮಾಡುವಾಗ ಎಡ ಪಾದದ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಅರ್ಧದಲ್ಲೇ ಹೊರಬಿದ್ದಿದ್ದರು. ನಂತರ, ತಂಡದ ವೈದ್ಯರು ಕ್ರೀಡಾ ಹರ್ನಿಯಾ ಎಂದು ಗುರುತಿಸಿದ್ದರು. ಇಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದ ಅವರು, ಕೆಲ ದಿನಗಳ ಹಿಂದೆ ಜರ್ಮನಿಗೆ ತೆರಳುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ಪ್ರಯಾಣಿಸುವ ಮೊದಲು ಸೂರ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇನ್ನಷ್ಟು ದಿನಗಳ ಕಾಲ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.

ಐಪಿಎಲ್​, ವಿಶ್ವಕಪ್​ಗೆ ವಾಪಸ್​?: ಮಾರ್ಚ್ ಮೂರನೇ ವಾರದಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) 2024 ಆವೃತ್ತಿಗೂ ಮೊದಲು ಸೂರ್ಯಕುಮಾರ್ ತಂಡ ಸೇರಿಕೊಳ್ಳಲಿದ್ದಾರೆಯೇ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪರ ಆಡುವ ಸೂರ್ಯಕುಮಾರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅವರು ಆಡುವ ನಿರೀಕ್ಷೆಯನ್ನೂ ತಂಡ ಹೊಂದಿದೆ.

ಇದರೊಂದಿಗೆ ಜೂನ್ 1 ರಿಂದ 29 ರವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ಗೂ ಸಜ್ಜಾಗಬೇಕಿದೆ. ಚುಟುಕು ಮಾದರಿಯ ವಿಶ್ವದ ನಂಬರ್​ 1 ಬ್ಯಾಟರ್​ ಆಗಿರುವ ಸ್ಕೈ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇತ್ತ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ಗಾಯಕ್ಕೆ ತುತ್ತಾಗಿದ್ದು, ವಿಶ್ವಕದನ ಹೊತ್ತಿಗೆ ಇಬ್ಬರೂ ತಂಡ ಸೇರುವ ವಿಶ್ವಾಸವಿದೆ.

ಇದನ್ನೂ ಓದಿ: ಬುಮ್ರಾ ಬೌಲಿಂಗ್​ ಶೈಲಿಯಲ್ಲಿ ಕೊಹ್ಲಿ ಫೀಲ್ಡಿಂಗ್​: ಅಭಿಮಾನಿಗಳಿಂದ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.