ETV Bharat / sports

ಹರ್ಮನ್​ಪ್ರೀತ್​ ಕೌರ್​, ಸೂರ್ಯ ಕುಮಾರ್​ ಯಾದವ್​ಗೆ ವಿಸ್ಡನ್ ಗೌರವ - ETV Bharath Kannada news

ಕ್ರಿಕೆಟ್​ನ ಪ್ರತಿಷ್ಠಿತ ವಿಸ್ಡನ್ ವರ್ಷದ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮಹಿಳಾ ತಂಡ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರನ್ನು ಹೆಸರಿಸಿದೆ.

Suryakumar Yadav and Harmanpreet Kaur Wisden Almanack  awards
ಹರ್ಮನ್​ಪ್ರೀತ್​ ಕೌರ್​ ಮತ್ತು ಸೂರ್ಯ ಕುಮಾರ್​ ಯಾದವ್​ಗೆ ವಿಸ್ಡನ್ ಅಲ್ಮಾನಾಕ್‌ ಗೌರವ
author img

By

Published : Apr 18, 2023, 10:04 PM IST

ಲಂಡನ್ (ಯುಕೆ): ಭಾರತದ ಕ್ರಿಕೆಟ್​ ತಾರೆಯರಾದ ಹರ್ಮನ್‌ಪ್ರೀತ್ ಕೌರ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಪ್ರತಿಷ್ಠಿತ ವಿಸ್ಡನ್ ಪ್ರಶಸ್ತಿ ಸಂದಿದೆ. ಹರ್ಮನ್‌ಪ್ರೀತ್ ಕೌರ್ ಅವರಿಗೆ ವರ್ಷದ ಕ್ರಿಕೆಟ್ ಆಟಗಾರ್ತಿ ಗೌರವ ನೀಡಿದರೆ, ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ ಗೌರವ ಸೂರ್ಯಕುಮಾರ್ ಯಾದವ್​ಗೆ ಸಿಕ್ಕಿದೆ. ಹರ್ಮನ್‌ಪ್ರೀತ್ ಕೌರ್ ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಕೌರ್ 2023 ರ ವಿಸ್ಡನ್ ಕ್ರಿಕೆಟರ್ಸ್‌ನಲ್ಲಿ ಘೋಷಿಸಲಾದ ವರ್ಷದ ಐವರು ಕ್ರಿಕೆಟಿಗರಲ್ಲಿ ಒಬ್ಬರು. 2022 ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಇಂಗ್ಲಿಷರ ನೆಲದಲ್ಲಿ 3-0ಯಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. 1999ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್​ ಪರಿಚಯವಾದ ನಂತರ 2022 ರಲ್ಲಿ ಭಾರತದ ಮಹಿಳಾ ತಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. 2022 ರಲ್ಲಿ ಕೌರ್ ಏಕದಿನದಲ್ಲಿ 754 ರನ್ ಗಳಿಸಿದ್ದು, ಅದರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಸಹ ಸೇರಿದೆ. ಟಿ20ಯಲ್ಲಿ ಇವರು 524ರನ್​ ಗಳಿಸಿದ್ದಾರೆ.

ಕಳೆದ ವರ್ಷವನ್ನು ಸೂರ್ಯ ಕುಮಾರ್‌ ಯಾದವ್​ ಅವರಿಗೆ ಗೋಲ್ಡನ್​ ಇಯರ್​ ಎಂದೇ ಕೆರೆಯಬಹುದು. 2022 ರ ಟಿ 20 ವಿಶ್ವಕಪ್‌ನಲ್ಲಿ ಮೂರು, ಕಳೆದ ವರ್ಷ ಭಾರತ ಆಡಿರುವ 40 ಪಂದ್ಯಗಳಲ್ಲಿ 28 ಗೆಲುವಿಗೆ ಯಾದವ್‌ ಕಾರಣರಾಗಿದ್ದರು. 2022ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ 55 ಎಸೆತಗಳಲ್ಲಿ 117 ರನ್ ಗಳಿಸಿದ್ದು, ಅವರ ಚೊಚ್ಚಲ ಟಿ20 ಶತಕವಾಗಿದೆ. 187.43 ಸ್ಟ್ರೈಕ್ ರೇಟ್​ನಲ್ಲಿ 1164 ಗಳಿಸಿದ್ದಾರೆ. ಅಲ್ಲದೇ ಐಸಿಸಿ ನೀಡುವ ಟಿ20 ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸ್ಟೋಕ್ಸ್​, ಬೆತ್​ ಮೋನಿಗೆ ಲೀಡಿಂಗ್​ ಕ್ರಿಕೆಟರ್​ ಆಫ್​ ದಿ ವರ್ಲ್ಡ್​ ಗೌರವ: ಇಂಗ್ಲಿಷ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ಯಶಸ್ವಿ ನಾಯಕಿ ಬೆತ್ ಮೂನಿ ಅವರಿಗೆ ವಿಸ್ಡನ್ ವಿಶ್ವದ ಪ್ರಮುಖ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಬೆನ್ ಸ್ಟೋಕ್ಸ್ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ವಿಸ್ಡನ್‌ನ ವಿಶ್ವದ ಪ್ರಮುಖ ಕ್ರಿಕೆಟಿಗ ಎಂಬ ಹೆಸರು ಪಡೆದಿದ್ದಾರೆ.

ಈ ಮೊದಲು ಆಲ್​ರೌಂಡರ್​ ಆಟಕ್ಕೆ ಈ ಪ್ರಶಸ್ತಿ ಸ್ಟೋಕ್ಸ್​ಗೆ ಸಿಕ್ಕಿತ್ತು. ಈ ಬಾರಿ ಅವರ ಯಶಸ್ವಿ ನಾಯಕತ್ವಕ್ಕೆ ಮನ್ನಣೆ ಸಿಕ್ಕಿದೆ. ಇವರ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ 12 ಟೆಸ್ಟ್​ ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದೆ. ಈ ಮೂಲಕ 10 ಟೆಸ್ಟ್​ಗಳನ್ನು ವೇಗವಾಗಿ ಗೆದ್ದ ನಾಯಕನ ಸ್ಥಾನ ಪಡೆದಿದ್ದಾರೆ. ಈ ಮೊದಲು ಮೈಕೆಲ್ ವಾನ್ 16 ಟೆಸ್ಟ್ ಪಂದ್ಯಗಳಲ್ಲಿ 10ನ್ನು ಗೆದ್ದಿದ್ದರು.

ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಬೆತ್​ ಮೂನಿ ಸತತ ಐಸಿಸಿ ಟ್ರೋಪಿಗಳನ್ನು ಗೆಲ್ಲುತ್ತಾ ಬಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಗಳಿಸಿದ 330 ರನ್​ಗೆ ಈ ಗೌರವ ಸಂದಿದೆ. ಕಳೆದ ವರ್ಷ ಟಿ20ಯಲ್ಲಿ ಅವರು 13 ಇನ್ನಿಂಗ್ಸ್​ನಿಂದ 449 ರನ್ ಗಳಿಸಿದ್ದಾರೆ.

ಇದನ್ನೂ ಓದಿ: IPLಗಿಂದು 16 ವರ್ಷ: ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯ ನೆನಪಿದೆಯೇ ನಿಮಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.