ದುಬೈ: ಏಷ್ಯಾಕಪ್, ಆಸ್ಟ್ರೇಲಿಯಾ ಸರಣಿಯಲ್ಲಿ ಭರ್ಜರಿ ಬ್ಯಾಟ್ ಬೀಸಿರುವ ಭಾರತದ ಸೂರ್ಯಕುಮಾರ್ ಯಾದವ್ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಬುಧವಾರ ಐಸಿಸಿ ಬಿಡುಗಡೆ ಮಾಡಿದ ಬ್ಯಾಟ್ಸ್ಮನಗಳ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್, ಪಾಕ್ನ ಬಾಬರ್ ಅಜಂ, ದಕ್ಷಿಣ ಆಫ್ರಿಕಾದ ಆ್ಯಂಡಂ ಮಾರ್ಕ್ರಮ್ ಅವರನ್ನು ಹಿಂದಿಕ್ಕಿ 2 ಸ್ಥಾನ ಜಿಗಿತ ಕಂಡರು. ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್ಗಿಂತಲೂ ಬರೀ 60 ರೇಟಿಂಗ್ ಪಾಯಿಂಟ್ಸ್ ಹಿಂದಿದ್ದಾರೆ.
-
India and Pakistan stars among the big movers in the latest @MRFWorldwide ICC Men's T20I Player Rankings 🇮🇳 🇵🇰
— ICC (@ICC) September 28, 2022 " class="align-text-top noRightClick twitterSection" data="
Full story 👇
">India and Pakistan stars among the big movers in the latest @MRFWorldwide ICC Men's T20I Player Rankings 🇮🇳 🇵🇰
— ICC (@ICC) September 28, 2022
Full story 👇India and Pakistan stars among the big movers in the latest @MRFWorldwide ICC Men's T20I Player Rankings 🇮🇳 🇵🇰
— ICC (@ICC) September 28, 2022
Full story 👇
ಹೈದರಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 69 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದ್ದರು. ಈ ಬಿರು ಬೀಸಾದ ಬ್ಯಾಟಿಂಗ್ನಿಂದಾಗಿ ಶ್ರೇಯಾಂಕ ಪಟ್ಟಿಯಲ್ಲಿ ದಿಢೀರ್ ಏರಿಕೆ ಕಂಡರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ. ವಿರಾಟ್ ಕೊಹ್ಲಿ ಕೂಡ 1 ಸ್ಥಾನ ಹೆಚ್ಚಿಸಿಕೊಂಡು 15 ನೇ ಸ್ಥಾನ ಪಡೆದಿದ್ದಾರೆ. ಮೊಹಮದ್ ರಿಜ್ವಾನ್ ಅಗ್ರಸ್ಥಾನಿಯಾಗುವ ಮೊದಲು 1155 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಬಾಬರ್ ಅಜಂ ಕೆಲ ಪಂದ್ಯಗಳಲ್ಲಿ ವಿಫಲರಾದ ಕಾರಣ 1 ಸ್ಥಾನ ಕುಸಿದು 3 ಕ್ಕೆ ಇಳಿದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ 11 ಸ್ಥಾನ ಹೆಚ್ಚಳ ಕಂಡು 18 ನೇ ಸ್ಥಾನಕ್ಕೆ ಪಡೆದರೆ, ಯಜುವೇಂದ್ರ ಚಹಲ್ 6 ಸ್ಥಾನ ಏರಿ 26 ರಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಬೌಲರ್ ಭುನವೇಶ್ವರ್ ಕುಮಾರ್ 1 ಸ್ಥಾನ ಇಳಿದು 10ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಅಗ್ರಸ್ಥಾನದಲ್ಲಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯಾ 5 ನೇ ಸ್ಥಾನದಲ್ಲಿದ್ದಾರೆ.
ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಪರಿಷ್ಕ್ರತ ಭಾರತ ತಂಡ ಪ್ರಕಟ