ETV Bharat / sports

ವಾರ್ನರ್​ ಬೆನ್ನಗೆ ಚೂರಿ ಹಾಕಿದ ಹೈದರಾಬಾದ್​​.. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ! - ಡೇವಿಡ್​ ವಾರ್ನರ್ ಕ್ಯಾಪ್ಟನ್​

2016ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಟ್ಟಿರುವ ಡೇವಿಡ್​ ವಾರ್ನರ್​ಗೆ ಇದೀಗ ಪ್ರಾಂಚೈಸಿ ನಾಯಕತ್ವದಿಂದ ಕೆಳಗಿಸಿದ್ದು, ಇದು ಅನೇಕ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

SunRisers Hyderabad
SunRisers Hyderabad
author img

By

Published : May 1, 2021, 8:21 PM IST

ಹೈದರಾಬಾದ್​​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಕಳಪೆ ಆರಂಭ ಪಡೆದುಕೊಂಡಿದೆ. ತಾನು ಆಡಿರುವ 6 ಪಂದ್ಯಗಳಿಂದ ಕೇವಲ 1ರಲ್ಲಿ ಗೆಲುವು ಸಾಧಿಸಿ, ಐದರಲ್ಲಿ ಸೋಲು ಕಂಡಿದೆ. ಇದರಿಂದ ಆಕ್ರೋಶಗೊಂಡಿರುವ ಪ್ರಾಂಚೈಸಿ ಇದೀಗ ತಂಡದ ಕ್ಯಾಪ್ಟನ್​ ಡೇವಿಡ್​ ವಾರ್ನರ್​ ತಲೆದಂಡ ಮಾಡಿದೆ.

ಸೋಲುಗಳಿಂದ ಕಂಗೆಟ್ಟ ಸನ್​ರೈಸರ್ಸ್ ಹೈದರಾಬಾದ್​ ಡೇವಿಡ್​ ವಾರ್ನರ್​​ ಅವರನ್ನ ನಾಯಕತ್ವದಿಂದ ಕೆಳಗಿಳಿಸಿ, ಕೇನ್​​ ವಿಲಿಯಮ್ಸನ್​ಗೆ ನಾಯಕತ್ವ ನೀಡಿದೆ. ಈ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಕ್ರೀಡಾಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ(2016) ಆರಂಭಗೊಂಡಾಗ ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವಲ್ಲಿ ವಾರ್ನರ್​ ಯಶಸ್ವಿಯಾಗಿದ್ದರು. ಇದಾದ ಬಳಿಕ ಅದ್ಭುತ ಪ್ರದರ್ಶನ ನೀಡಿ ತಂಡವನ್ನ ಪ್ಲೇ-ಆಫ್​ ಹಂತಕ್ಕೆ ತೆಗೆದುಕೊಂಡು ಹೋಗಿರುವ ಶ್ರೇಯ ಕೂಡ ಅವರಿಗೆ ಸಲ್ಲುತ್ತದೆ.

ಆದರೆ, ಸದ್ಯದ ಟೂರ್ನಿಯಲ್ಲಿ ಕೆಲ ಪಂದ್ಯಗಳಲ್ಲಿ ತಂಡ ಸೋಲು ಕಾಣುತ್ತಿದ್ದಂತೆ ಅವರ ತಲೆದಂಡ ಮಾಡಿರುವುದು ಸರಿಯಲ್ಲ ಎಂದು ಅನೇಕರ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಸತತ ಸೋಲಿನ ನಿರಾಸೆ: ವಿಲಿಯಮ್ಸನ್​ಗೆ ನಾಯಕತ್ವ ಬಿಟ್ಟುಕೊಟ್ಟ ವಾರ್ನರ್

ಕ್ಯಾಪ್ಟನ್​ ಆಗಿದ್ದ ಡೇವಿಡ್​ ವಾರ್ನರ್​ ರಾಷ್ಟ್ರೀಯ ತಂಡದಷ್ಟೇ ಹೈದರಾಬಾದ್​ ತಂಡದ ಮೇಲೆ ಪ್ರೀತಿ ಹೊಂದಿದ್ದರು. ಅದೇ ಕಾರಣಕ್ಕಾಗಿ ಅನೇಕ ಸಲ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಟ್ವೀಟ್ ಹಾಗೂ ವಿಡಿಯೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ ಪ್ರಾಂಚೈಸಿ ಇದೀಗ ದಿಢೀರ್​ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.