ಹೈದರಾಬಾದ್(ತೆಲಂಗಾಣ): ವೆಸ್ಟ್ ಇಂಡೀಸ್ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. "ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಘೋಷಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ" ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.
ಭಾವನಾತ್ಮಕ ಟ್ವೀಟ್: "ನಾನು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿ ನಾಲ್ಕು ವರ್ಷ ಕಳೆದಿವೆ. ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಕ್ರಿಕೆಟ್ ಮಂಡಳಿ, ನಮ್ಮ ತಂಡದ ಕೋಚಿಂಗ್ ಸಿಬ್ಬಂದಿ ಮತ್ತು ನನ್ನ ತಂಡದ ಸಹ ಆಟಗಾರರಿಗೆ ನಾನು ಕೃತಜ್ಞ. ದೇಶೀಯ ಕ್ರಿಕೆಟ್‌ನಲ್ಲಿ ನನ್ನ ತವರು ತಂಡವಾದ ಟ್ರಿನಿಡಾಡ್ ಮತ್ತು ಟೊಬಾಗೊವನ್ನು ಪ್ರತಿನಿಧಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು" ಎಂದು ನರೈನ್ ಹೇಳಿದ್ದಾರೆ.
-
Sunil Narine retires from International cricket!
— KolkataKnightRiders (@KKRiders) November 5, 2023 " class="align-text-top noRightClick twitterSection" data="
From T20 World Cup glory to now, a new chapter, we wish you the best, Sunny! 🏆👏#KnightRidersFamily #SunilNarine pic.twitter.com/58vu2gdFWI
">Sunil Narine retires from International cricket!
— KolkataKnightRiders (@KKRiders) November 5, 2023
From T20 World Cup glory to now, a new chapter, we wish you the best, Sunny! 🏆👏#KnightRidersFamily #SunilNarine pic.twitter.com/58vu2gdFWISunil Narine retires from International cricket!
— KolkataKnightRiders (@KKRiders) November 5, 2023
From T20 World Cup glory to now, a new chapter, we wish you the best, Sunny! 🏆👏#KnightRidersFamily #SunilNarine pic.twitter.com/58vu2gdFWI
ನರೈನ್ ಕ್ರಿಕೆಟ್ ಸಾಧನೆ: 35 ವರ್ಷ ವಯಸ್ಸಿನ ನರೈನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 65 ಏಕದಿನ, 51 ಟಿ20ಐ ಮತ್ತು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ ಮಾದರಿಗಳಲ್ಲಿ ಒಟ್ಟು 165 ವಿಕೆಟ್‌ಗಳನ್ನು ಪಡೆದಿದ್ದಾರೆ. ನರೈನ್ ಕೊನೆಯ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು ನಾಲ್ಕು ವರ್ಷಗಳ ಹಿಂದೆ. 2019ರಲ್ಲಿ ಭಾರತ ವಿರುದ್ಧ ಟಿ20 ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ ನರೇನ್ ಒಂದೂ ವಿಕೆಟ್ ಪಡೆಯಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ನರೈನ್ ಎಂದಿನಂತೆ ದೇಶಿ ಲೀಗ್ಗಳಲ್ಲಿ ಆಡಲಿದ್ದಾರೆ.
ಐಪಿಎಲ್‌ನಿಂದ ಮನ್ನಣೆ..: ಸುನಿಲ್ ನರೈನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಐಪಿಎಲ್‌ನಿಂದ ಮಾತ್ರ. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ನರೈನ್ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ನರೈನ್ ಐಪಿಎಲ್‌ನ 162 ಪಂದ್ಯಗಳಲ್ಲಿ 1046 ರನ್ ಮತ್ತು 163 ವಿಕೆಟ್ ಪಡೆದಿದ್ದಾರೆ.
ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ಬೌಲರ್: ವಿಶ್ವದ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಬೌಲರ್‌ಗೆ ಅಸಾಧ್ಯವಾದ ದಾಖಲೆಯನ್ನು ನರೈನ್ ನಿರ್ಮಿಸಿದ್ದಾರೆ. 2014ರ ಕೆರಿಬಿಯನ್ ಪ್ರೀಮಿಯರ್ ಲೀಗ್ ರೆಡ್ ಸ್ಟೀಲ್ - ಗಯಾನಾ ಅಮೆಜಾನ್ ವಾರಿಯರ್ಸ್ ಪಂದ್ಯದಲ್ಲಿ ಸೂಪರ್ ಓವರ್ ಅನ್ನು ಮೇಡನ್ ಆಗಿ ಪರಿವರ್ತಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
ಇದನ್ನೂ ಓದಿ: "ಸ್ಪೂರ್ತಿ ಪಡೆದವರಿಂದಲೇ ಹೊಗಳಿಕೆ ಸಿಗುತ್ತಿರುವುದು ಸಂತಸದ ವಿಷಯ" - ವಿರಾಟ್ ಕೊಹ್ಲಿ