ETV Bharat / sports

'ವಿಕೆಟ್ ಪಡೆಯುವ ಒಬ್ಬ ಬೌಲರ್ ಇಲ್ಲ': ಭಾರತದ ಕಳಪೆ ಆಟಕ್ಕೆ ಗವಾಸ್ಕರ್​ ಕಿಡಿ - Sunil Gavaskar criticizes bowlers

ದಕ್ಷಿಣ ಆಫ್ರಿಕಾ ವಿರುದ್ಧ ಬೌಲರ್​ಗಳ ಕಳಪೆ ಆಟವನ್ನು ಟೀಕಿಸಿರುವ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​, ತಂಡದಲ್ಲಿ ವಿಕೆಟ್​ ಪಡೆಯುವ ಬೌಲರ್​ ಇಲ್ಲ ಎಂದು ಬೇಸರಿಸಿದ್ದಾರೆ.

ಭಾರತದ ಕಳಪೆ ಆಟಕ್ಕೆ ಸುನೀಲ್​ ಗವಾಸ್ಕರ್​ ಕಿಡಿ

author img

By

Published : Jun 13, 2022, 4:39 PM IST

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬೌಲರ್​ಗಳ ವೈಫಲ್ಯ ತಂಡಕ್ಕೆ ಮುಳುವಾಗಿದೆ. ಮೊದಲ ಪಂದ್ಯದಲ್ಲಿ 200ಕ್ಕೂ ಅಧಿಕ ರನ್​ ಗಳಿಸಿದ ಹೊರತಾಗಿಯೂ ತಂಡ ಸೋತರೆ, 2ನೇ ಪಂದ್ಯದಲ್ಲಿ ಬೌಲಿಂಗ್​ ಜೊತೆಗೆ ಬ್ಯಾಟರ್‌​ಗಳು ಕೂಡ ಕೈಕೊಟ್ಟಿದ್ದರು. ಭಾರತ ತಂಡದ ಕಳಪೆ ಆಟಕ್ಕೆ ಹಿರಿಯ ಆಟಗಾರರು ಕಿಡಿಕಾರಿದ್ದಾರೆ. ಅದರಲ್ಲೂ ಬೌಲಿಂಗ್​ ವಿಭಾಗ ಸಂಪೂರ್ಣ ನೆಲಕಚ್ಚಿದ್ದು ಕೆಂಗಣ್ಣಿಗೆ ಗುರಿಯಾಗಿದೆ.

ದ. ಆಫ್ರಿಕಾ ವಿರುದ್ಧ ವಿಕೆಟ್​ ಪಡೆಯುವ ಬೌಲರ್​ಗಳೇ ಭಾರತ ತಂಡದಲ್ಲಿಲ್ಲ. ಕಳೆದ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್​ ವಿಕೆಟ್​ ಪಡೆದಿದ್ದು, ಬಿಟ್ಟರೆ ಉಳಿದ್ಯಾವ ಆಟಗಾರರು ಕೂಡ ವಿಕೆಟ್​ ಪಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಮಾಜಿ ಹಿರಿಯ ಆಟಗಾರ ಸುನೀಲ್​ ಗವಾಸ್ಕರ್​ ಬೌಲರ್​ಗಳ ಕಳಪೆ ಆಟದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗವಾಸ್ಕರ್​, ಎದುರಾಳಿಯ ವಿಕೆಟ್​ ಪಡೆದರೆ ಮಾತ್ರ ಪಂದ್ಯದ ಮೇಲೆ ಒತ್ತಡ ಹೇರಲು ಸಾಧ್ಯ. ಭುವನೇಶ್ವರ್​​ ಕುಮಾರ್​ ಮಾತ್ರ ವಿಕೆಟ್​ ಪಡೆಯುವಲ್ಲಿ ಸಫಲರಾಗಿದ್ದಾರೆ. ಉಳಿದ ಯಾವ ಬೌಲರ್​ಗಳೂ ಹರಿಣಗಳ ಮುಂದೆ ತಮ್ಮ ಸಾಮರ್ಥ್ಯ ತೋರಿಸುತ್ತಿಲ್ಲ. ಮೊದಲ ಪಂದ್ಯದಲ್ಲಿ 211 ರನ್​ ಗಳಿಸಿದಾಗ್ಯೂ ಸೋಲುಂಡಿರುವುದು ತಂಡದ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಒಡಿಶಾದ ಕಟಕ್​ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ ಸಮತಟ್ಟಾದ ಪಿಚ್​ ಮಧ್ಯೆಯೂ ನಿಧಾನಗತಿ ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 148 ಸಾಧಾರಣ ಮೊತ್ತ ಕಲೆಹಾಕಿತ್ತು. ದಕ್ಷಿಣ ಆಫ್ರಿಕಾ ತಂಡ 18.2 ಓವರ್​ಗಳಲ್ಲಿ ಸವಾಲು ಮೆಟ್ಟಿ ನಿಂತು ಜಯ ಸಾಧಿಸಿತು.

ಇದನ್ನೂ ಓದಿ: 'ದಿನೇಶ್‌ ಕಾರ್ತಿಕ್‌ ಬದಲಿಗೆ ಅಕ್ಷರ್ ಪಟೇಲ್‌ ಕ್ರೀಸ್​ಗೆ ಹೋಗಿದ್ದು ನಿಮಗೆ ತಪ್ಪಾಗಿ ಕಾಣಿಸಬಹುದು'! ಆದರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.