ಮಸ್ಕಾಟ್: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 0-4ರಲ್ಲಿ ಆ್ಯಶಸ್ ಸರಣಿ ಸೋಲು ಕಂಡಿರುವುದುಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ವಿರುದ್ಧ ದೂರುವುದು ಮೂರ್ಖತನದ ಪರಮಾವಧಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕಿಡಿಕಾರಿದ್ದಾರೆ.
ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಡೇವಿಡ್ ಗೋವರ್ ಆ್ಯಶಸ್ ಸರಣಿಯಲ್ಲಿ ತಮ್ಮ ರಾಷ್ಟ್ರೀಯ ತಂಡದ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂದು ದೂರಿದ್ದರು. ಅವರು ಆ ರೀತಿ ಹೇಳುತ್ತಿದ್ದಂತೆ ನಾಯಕ ಜೋ ರೂಟ್, ಬೆನ್ ಸ್ಟೋಕ್ಸ್ ಸೇರಿದಂತೆ ಕೆಲವು ಇಂಗ್ಲಿಷ್ ಸ್ಟಾರ್ ಆಟಗಾರರು ಐಪಿಎಲ್ ಹರಾಜಿನಿಂದ ಹಿಂದೆ ಸರಿದಿದ್ದರು.
ಆದರೆ ಈ ಟೀಕೆಯನ್ನು 2005, 2009, 2010-11 ಮತ್ತು 2013 ರ ಆ್ಯಶಸ್ ವಿಜೇತ ಪೀಟರ್ಸನ್ ಅಲ್ಲಗೆಳೆದಿದ್ದಾರೆ. " ಇದು ಮೂರ್ಖತನ, ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಅಧಃಪತನಕ್ಕೆ ಐಪಿಎಲ್ ಧೂಷಿಸುವುದಕ್ಕಾಗುವುದಿಲ್ಲ. ಇದು ಹಾಸ್ಯಮಯವಾಗಿದೆ. ನಾನು ಈ ಹಿಂದೆಯೇ ಇದರ ಬಗ್ಗೆ ಸಾಕಷ್ಟು ಹೇಳಿದ್ದೇನೆ, ಕೌಂಟಿ ಕ್ರಿಕೆಟ್ ವ್ಯವಸ್ಥೆ ತುಂಬಾ ಕಳಪೆಯಾಗುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಲೆಜೆಂಡ್ಸ್ ಲೀಗ್ ವೇಳೆ ನಡೆದ ಸಂದರ್ಶನದ ವೇಳೆ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
"ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ದೂಷಿಸುವುದು ಹುಚ್ಚುತನವಾಗಿದೆ. ಏಕೆಂದರೆ ನೀವು ಟೆಸ್ಟ್ ತಂಡವನ್ನು ನೋಡಿದರೆ, ಬಹುಶಃ (ಬೆನ್) ಸ್ಟೋಕ್ಸ್ (ಜಾನಿ) ಬೈರ್‌ಸ್ಟೋವ್ ಮತ್ತು (ಜೋಸ್) ಬಟ್ಲರ್ ಮಾತ್ರ ಐಪಿಎಲ್ ಆಡುತ್ತಾರೆ. ಟೆಸ್ಟ್ ತಂಡದ ಯಾವುದೇ ಆಟಗಾರರು ಐಪಿಎಲ್ನಲ್ಲಿ ಆಡುವುದಿಲ್ಲ. ಹಾಗಾಗಿ ಹೇಗೆ ನೀವು ಐಪಿಎಲ್ ದೂಷಣೆ ಮಾಡುತ್ತೀರಾ? ನೀವು ಹಾಗೆ ಮಾಡಲಾಗುವುದಿಲ್ಲ" ಎಂದು ಪೀಟರ್ಸನ್ ಹೇಳಿದ್ದಾರೆ.
ಆ್ಯಶಸ್ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಐಪಿಎಲ್ ನಿಂದ ದೂರ ಉಳಿದಿದ್ದಾರೆ. ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಈ ಬಾರಿ ಐಪಿಎಲ್ನಿಂದ ತಮ್ಮ ಹೆಸರನ್ನು ನೋಂದಾಯಿಸಿಲ್ಲ. ಆದಾಗ್ಯೂ 30 ಇಂಗ್ಲಿಷ್ ಆಟಗಾರರು ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:ಐಪಿಎಲ್ಗೆ ಗೇಲ್ ಗುಡ್ ಬೈ?: 2022 ಹರಾಜಿಗೆ ಹೆಸರು ನೀಡದ ಸ್ಟಾರ್ಕ್, ಸ್ಟೋಕ್ಸ್, ಸ್ಯಾಮ್ ಕರ್ರನ್!