ಹೈದರಾಬಾದ್: ದುಬೈನಲ್ಲಿ ಮಂಗಳವಾರ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್ ಮಿಚೆಲ್ ಸ್ಟಾರ್ ಅವರನ್ನು ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ 24.75 ಕೋಟಿ ರೂ ಕೊಟ್ಟು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿದೆ. ಫ್ರಾಂಚೈಸಿಯ ಈ ಬಿಡ್ಡಿಂಗ್ ಅನ್ನು ತಂಡದ ಮೆಂಟರ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿ ಕೆಕೆಆರ್ಗೆ ಎಕ್ಸ್-ಫ್ಯಾಕ್ಟರ್ ಮತ್ತು ಬೌಲಿಂಗ್ ವಿಭಾಗದ ನಾಯಕರಾಗುತ್ತಾರೆ ಎಂದು ಹೇಳಿದ್ದಾರೆ.
-
Surreal 🫣
— IndianPremierLeague (@IPL) December 19, 2023 " class="align-text-top noRightClick twitterSection" data="
INR 24.75 Crore 💰#KKR fans, make way for Mitchell Starc who's ready to bowl in 💜💛#IPLAuction | #IPL pic.twitter.com/E6dfoTngte
">Surreal 🫣
— IndianPremierLeague (@IPL) December 19, 2023
INR 24.75 Crore 💰#KKR fans, make way for Mitchell Starc who's ready to bowl in 💜💛#IPLAuction | #IPL pic.twitter.com/E6dfoTngteSurreal 🫣
— IndianPremierLeague (@IPL) December 19, 2023
INR 24.75 Crore 💰#KKR fans, make way for Mitchell Starc who's ready to bowl in 💜💛#IPLAuction | #IPL pic.twitter.com/E6dfoTngte
ಬಿಡ್ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಕೆಕೆಆರ್ ತಂಡಗಳು ಸ್ಟಾರ್ಕ್ಗಾಗಿ ಪೈಪೋಟಿಗೆ ಬಿದ್ದಿದ್ದವು. ನಾಯಕ ಹಾರ್ದಿಕ್ ಪಾಂಡ್ಯ ಕಳೆದುಕೊಂಡ ಜಿಟಿಗೆ ಒಬ್ಬ ಬಲಿಷ್ಟ ಬೌಲರ್ ಅಗತ್ಯವಿತ್ತು. ಇದಕ್ಕಾಗಿ ಅವರು ದೊಡ್ಡ ಮೊತ್ತ ವ್ಯಯಿಸಲು ಸಿದ್ಧರಿದ್ದರು. ಇತ್ತ ಕೋಲ್ಕತ್ತಾವೂ ಇದೇ ನಿರ್ಧಾರ ಮಾಡಿತ್ತು. ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವುದೇ 20 ಕೋಟಿ ರೂ. ಆದರೆ ಒಂದು ಫ್ರಾಂಚೈಸಿ ಒಬ್ಬ ಆಟಗಾರನಿಗೇ 24.75 ಕೋಟಿ ರೂ ಕೊಟ್ಟಿದೆ!.
ಸ್ಟಾರ್ಕ್ ಎಕ್ಸ್-ಫ್ಯಾಕ್ಟರ್: "ಸ್ಟಾರ್ಕ್ ಎಕ್ಸ್-ಫ್ಯಾಕ್ಟರ್. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು. ಡೆತ್ ಓವರ್‌ಗಳಲ್ಲಿ ಬೌಲ್ ಮಾಡಬಹುದು. ಮುಖ್ಯವಾಗಿ ಬೌಲಿಂಗ್ ಪಡೆಯನ್ನು ಮುನ್ನಡೆಸಬಲ್ಲರು. ಅವರು ನಮ್ಮ ಇಬ್ಬರು ದೇಶೀಯ ಬೌಲರ್‌ಗಳಿಗೆ ಭಾರಿ ಸಹಾಯ ಮಾಡಲಿದ್ದಾರೆ. ಪ್ರತಿಭಾವಂತ ಬೌಲರ್ಗಳು ಅವರ ಜೊತೆಯಲ್ಲಿ ಸಾಕಷ್ಟು ಕಲಿಯಲಿದ್ದಾರೆ. ಇದು ಅವರ ಬೌಲಿಂಗ್ ಬಗ್ಗೆ ಮಾತ್ರವಲ್ಲದೆ, ಬೌಲಿಂಗ್ ಯೂನಿಟ್ ಮುನ್ನಡೆಸುವ ಜವಾಬ್ದಾರಿ ಮತ್ತು ತಂಡದ ಇತರೆ ವೇಗಿಗಳಿಗೆ ಅವರಿಂದ ಕಲಿಯುವುದಕ್ಕೆ ದಾರಿ ಮಾಡಿ ಕೊಡುತ್ತದೆ. ಹೀಗಾಗಿ ಅವರಿಗೆ ಅಷ್ಟು ಪಾವತಿಸಬೇಕಾಗುತ್ತದೆ" ಎಂದು ಮಾಜಿ ಭಾರತ ಆರಂಭಿಕ ಆಟಗಾರರೂ ಆಗಿರುವ ಗಂಭೀರ್ ತಿಳಿಸಿದ್ದಾರೆ.
-
Our Starc! ⚡pic.twitter.com/BsbLjAjq7k
— KolkataKnightRiders (@KKRiders) December 19, 2023 " class="align-text-top noRightClick twitterSection" data="
">Our Starc! ⚡pic.twitter.com/BsbLjAjq7k
— KolkataKnightRiders (@KKRiders) December 19, 2023Our Starc! ⚡pic.twitter.com/BsbLjAjq7k
— KolkataKnightRiders (@KKRiders) December 19, 2023
ಬಲಿಷ್ಠ ಬೌಲಿಂಗ್ ಲೈನ್‌ಅಪ್: ಎರಡು ಬಾರಿ ಕೆಕೆಆರ್ಗೆ ಕಪ್ ಗೆಲ್ಲಿಸಿಕೊಟ್ಟ ನಾಯಕ ಗೌತಮ್ ಗಂಭೀರ್ ಆಳವಾದ ಬೌಲಿಂಗ್ ಲೈನ್ಅಪ್ಗೆ ಬಿಡ್ಡಿಂಗ್ನಲ್ಲಿ ಆದ್ಯತೆ ನೀಡಲಾಗಿತ್ತು ಎಂದಿದ್ದಾರೆ. "ನಮ್ಮ ಬೌಲಿಂಗ್ ವಿಭಾಗ ಸಾಕಷ್ಟು ಆಳ ಹೊಂದಿದೆ. ನಾವು ಯಾವಾಗಲೂ ಬಲಿಷ್ಟ ಬೌಲಿಂಗ್ ದಾಳಿಯನ್ನು ಹೊಂದಲು ಬಯಸುತ್ತೇವೆ. ತಂಡ ಮುಜೀಬ್ ಉರ್ ರೆಹಮಾನ್, ಗುಸ್ ಅಟ್ಕಿನ್ಸನ್, ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ಮಿಚೆಲ್ ಸ್ಟಾರ್ಕ್ ಜೊತೆಗೆ ಇಬ್ಬರು ಭಾರತೀಯ ಸೀಮರ್‌ಗಳಾದ ಹರ್ಷಿತ್ ರಾಣಾ, ಸುಯಾಶ್ ಶರ್ಮಾ ಹಾಗೂ ಚೇತನ್ ಸಕರಿಯಾ ಅವರನ್ನು ಆಯ್ಕೆಯಲ್ಲಿ ಹೊಂದಿದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಕೆಆರ್ ತಂಡವಲ್ಲ, ಭಾವನೆ: ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದು ಕೆಕೆಆರ್ಗೆ ಗೌತಮ್ ಗಂಭೀರ್ ಮರಳಿದ್ದಾರೆ. 2012 ಮತ್ತು 2014ರಲ್ಲಿ ಗೌತಿ ನಾಯಕತ್ವದಲ್ಲಿ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಫ್ರಾಂಚೈಸಿಗೆ ಮರಳಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, "ನನಗೆ ಕೆಕೆಆರ್ ತಂಡವಲ್ಲ, ಅದೊಂದು ಭಾವನೆ. ಇದಕ್ಕೆ ಜನರಿಂದ ನಾನು ಪಡೆದಿರುವ ಪ್ರೀತಿಯೇ ಕಾರಣ. ಏಳು ವರ್ಷಗಳ ಕಾಲ ಕೋಲ್ಕತ್ತಾ ತಂಡವನ್ನು ಮುನ್ನಡೆಸಿದ್ದೇನೆ. ಅದಕ್ಕಾಗಿ ಅಪಾರ ಗೌರವ ಪಡೆದಿದ್ದೇನೆ. 2012 ಮತ್ತು 2014ರಲ್ಲಿ ಮಾಡಿದ ಅದೇ ನೆನಪುಗಳನ್ನು ನಾವು ಮರುಸೃಷ್ಟಿಸಬಹುದು. ಗೆಲ್ಲುತ್ತೇವೆ ಎನ್ನುವುದನ್ನು ಖಾತರಿಪಡಿಸಿ ಹೇಳಲಾಗದಿದ್ದರೂ ಕೊನೆಯ ಕ್ಷಣದವರೆಗೂ ಹೋರಾಟ ಮಾಡುತ್ತೇವೆ ಎಂಬುದನ್ನು ವಿಶ್ವಾಸದಿಂದ ಹೇಳಬಹುದು" ಎಂದಿದ್ದಾರೆ.
ಇದನ್ನೂ ಓದಿ: ನಾಯಕ ಕಮಿನ್ಸ್ ಮೀರಿಸಿದ ಸ್ಟಾರ್ಕ್: ಮಿಚೆಲ್ ಮೇಲೆ ಕೆಕೆಆರ್ ಐತಿಹಾಸಿಕ ಬಿಡ್.. ಖರೀದಿಸಿದ್ದು ಎಷ್ಟಕ್ಕೆ ಗೊತ್ತಾ?